“ಕವಿಗಳ ಕಣ್ಣಲ್ಲಿ ಪುನೀತ್ ರಾಜ್‍ಕುಮಾರ್” ಕಾವ್ಯಕಮ್ಮಟ ಮತ್ತು ಕವನ ಸಂಕಲನಕ್ಕೆ ಕವನ ಕಳುಹಿಸಲು ಕರೆ

varthajala
0

ದಿನಾಂಕ 03-11-2022 ರ ಗುರುವಾರ, ಪೂರ್ಣ ದಿನ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ  ಅಖಿಲ ಕರ್ನಾಟಕ 10ನೇ ಕವಿ ಸಮ್ಮೇಳನದಲ್ಲಿ ವಿಶೇಷ ಕಾವ್ಯಕಮ್ಮಟ ಹಮ್ಮಿಕೊಳ್ಳಲಾಗಿದೆ.


ಈ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಕಲ್ಯಾಣ ಕರ್ನಾಟಕದ ಹಿರಿಯ ಕವಿ, ಶ್ರೀ ಸಿದ್ಧರಾಮ ಹೊನ್ಕಲ್ ಅವರನ್ನು ಆಯ್ಕೆ ಮಾಡಿದ್ದು, ಅವರ ಅಧ್ಯಕ್ಷತೆಯಲ್ಲಿ ವಿಶೇಷ ಕವಿಗೋಷ್ಠಿ ಹಾಗೂ ಕನ್ನಡ ಸಾಹಿತ್ಯ ಲೋಕಕ್ಕೆ ಕಾವ್ಯ ಪರಂಪರೆ ಕುರಿತು ವಿಚಾರ ಸಂಕಿರಣ ನಡೆಯಲಿದೆ.

ಕಾವ್ಯಕಮ್ಮಟದಲ್ಲಿ ಕವಿಗಳು ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ಭಾಗವಹಿಸಬಹುದು. ಡಾ. ಪುನೀತ್ ರಾಜಕುಮಾರ್ ಕುರಿತು 2 ಕವನಗಳನ್ನು ಡಿಟಿಪಿ ಮಾಡಿ, ಸಂಪೂರ್ಣ ವಿಳಾಸ, ದೂರವಾಣಿ ಸಂಖ್ಯೆ, ಎರಡು ಪಾಸ್‍ಪೋರ್ಟ್ ಸೈಜ್ ಫೋಟೋ ಸಮೇತ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮ್ಮೇಳನದ ಕೌಂಟರ್‍ನಲ್ಲಿ ಕೊಡಬೇಕು.

ಕಾವ್ಯಕಮ್ಮಟದಲ್ಲಿ ಭಾಗವಹಿಸುವ ಎಲ್ಲಾ ಕವಿಗಳಿಗೆ ಬ್ಯಾಡ್ಜ್ ಹಾಗೂ ಲಘು ಭೋಜನದ ವ್ಯವಸ್ಥೆ ಇರುತ್ತದೆ. ಭಾಗವಹಿಸದ್ದಕ್ಕೆ ಕವಿಗಳಿಗೆ ಫೋಟೋ ಸಮೇತ ಪ್ರಮಾಣ ಪತ್ರವನ್ನು ಒಂದು ತಿಂಗಳೊಳಗೆ ಅಂಚೆ ಮೂಲಕ ಕಳುಹಿಸಲಾಗುವುದು. ತಾವು ನೀಡಿದ ಕವಿತೆಗಳನ್ನು 2023ರ “ಕವಿಗಳ ಕಣ್ಣಲ್ಲಿ ಪುನೀತ್ ರಾಜಕುಮಾರ್” ಎಂಬ ಕವನ ಸಂಕಲನದಲ್ಲಿ ಪ್ರಕಟಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಅಧ್ಯಕ್ಷರು ರಮೇಶ ಸುರ್ವೆ ಅವರ ಮೊಬೈಲ್ ನಂ. 9845307327 ಸಂಪರ್ಕಿಸಿ. ನಿಮ್ಮ ವಾಟ್ಸಾಪ್ ನಂಬರ್ ಕಳುಹಿಸಿದರೆ, ಹೆಚ್ಚಿನ ಮಾಹಿತಿ ರವಾನಿಸಲಾಗುವುದು.

ಭಾಗವಹಿಸಲು ಸಾಧ್ಯವಾಗದೆ ಇರುವವರು, 2 ಕವಿತೆಗಳು ಮತ್ತು ವಿವರಗಳನ್ನು ಕಡ್ಡಾಯವಾಗಿ ಹಾರ್ಡ್ ಕಾಪಿ ಮೂಲಕ ಅಂಚೆಯಲ್ಲಿ ಕಳುಹಿಸಿ. (ವಾಟ್ಸಾಪ್ ಅಥವಾ ಇಮೇಲ್ ಮಾಡಬೇಡಿ) ನಿಮ್ಮ ಕವನಗಳನ್ನು ಕಳುಹಿಸುವ ವಿಳಾಸ : ರಮೇಶ ಸುರ್ವೆ ಅಧ್ಯಕ್ಷರು, ವಿಶ್ವೇಶ್ವರಯ್ಯ ಪ್ರತಿಷ್ಠಾನ ಟ್ರಸ್ಟ್ (ರಿ.) ನಂ. 468, 13ನೇ ಮುಖ್ಯರಸ್ತೆ, 3ನೇ ಹಂತ, ಮೋದಿ ಸರ್ಕಲ್ - ತಿಮ್ಮಯ್ಯ ರಸ್ತೆ, ಮಂಜುನಾಥನಗರ, ಬೆಂಗಳೂರು - 560010.


Tags

Post a Comment

0Comments

Post a Comment (0)