ಅಂತರಾಷ್ಟ್ರೀಯ ವಿಹಾರ ನೌಕೆ ಸಾಂಸ್ಕೃತಿಕ ಸೌರಭ ಸಮಾರಂಭ: ಬೋಳೂರು ಸಮೀಪದ ಹಿನ್ನೀರಿನಲ್ಲಿ ಚಲಿಸುವ ಅಬ್ಬಕ್ಕ ಕ್ರೋಜ್ ನಲ್ಲಿ ಯಶಸ್ವಿ

varthajala
0

 ಮಂಗಳೂರು, ಅ. 21:  35ನೇ ಅಂತರಾಷ್ಟ್ರೀಯ ವಿಹಾರ ನೌಕೆ ಸಾಂಸ್ಕೃತಿಕ  ಸೌರಭ  ಸಮಾರಂಭವು  ಮಂಜುನಾಥ್ ಎಜುಕೇಶನ್ ಟ್ರಸ್ಟ್ ರಿ. ಮಂಗಳೂರು ಹಾಗೂ ಗೃಹ ಕಾರ್ಮಿಕರ ಹಕ್ಕಿನ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 21, 2022ರಂದು ಬೋಳೂರು ಸಮೀಪದ ಹಿನ್ನೀರಿನಲ್ಲಿ ಚಲಿಸುವ  ಅಬ್ಬಕ್ಕ ಕ್ರೋಜ್ ನಲ್ಲಿ ಯಶಸ್ವಿಯಾಗಿ ಜರುಗಿತು.  

ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದ, ವಿನ್ಸಿ ಇಡ್ಲಿ ಮಾರ್ಕೆಟ್  ಇದರ ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕೋರಿಯ ಅವರು ಮಾತನಾಡಿ. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನೆ ಮೂಲಕ ನಾವೆಲ್ಲರೂ ಸಾಮರಸ್ಯವನ್ನು ಸಾಧಿಸಬೇಕಾಗಿದೆ  ಇಂತಹ ಕಾರ್ಯಕ್ರಮಗಳನ್ನು ಎಲ್ಲರೂ ಒಂದಾಗಿ ಆಚರಿಸೋಣ ಎಂದು ಹೇಳಿದರು.

ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಕೆ. ಪಿ. ಮಂಜುನಾಥ್ ಸಾಗರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ನಾವು ಈವರೆಗೆ ಅಮೇರಿಕಾ, ಸಿಂಗಪುರ ಸೇರಿದಂತೆ. ಒಟ್ಟು 25 ದೇಶಗಳಲ್ಲಿ 35ಕ್ಕೂ ಹೆಚ್ಚು ಅಂತರಾಷ್ಟ್ರೀಯ. ಸಾಂಸ್ಕೃತಿಕ ಸೌರ ಗಳನ್ನು. ಆಯಾ ದೇಶಗಳ ಸ್ಥಳೀಯ ಸಂಘಟನೆಗಳ ಸಹಯೋಗದಲ್ಲಿ 2008 ರಿಂದ ನಿರಂತರ ಅತ್ಯಂತ ಯಶಸ್ವಿಯಾಗಿ  ಆಯೋಜಿಸುತ್ತಾ. ಬಂದಿದ್ದೇವೆ. ಈ ಸಮಾರಂಭದ ಮುಖ್ಯ ಉದ್ದೇಶ **ನಾವು ಸೌಹಾರ್ದ ಪ್ರಿಯರು** ಎಂಬುದಾಗಿದೆ. ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎಎಸ್ಐ ಗೋಪಾಲಕೃಷ್ಣ ಬಜ್ಪೆ ಅವರು ಮಾತನಾಡಿ.  ಕಲೆಗಳಿಗೆ ದೇಶ ಭಾಷೆ,  ಜಾತಿ ಮತಗಳ ಬಂಧನವಿಲ್ಲ.  ಇದು ವಿಶ್ವಮಾನ್ಯ ಸಂವಹನ ಮಾಧ್ಯಮ. ಎಂದರು. ವೇದಿಕೆಯಲ್ಲಿ ಅತಿಥಿಗಳಾದ ಗೃಹ  ಕಾರ್ಮಿಕರ ಹಕ್ಕಿನ  ಒಕ್ಕೂಟದ ಸಂಚಾಲಕಿ. ಡಾ.  ಶಂಶಾದ್, ಶ್ರೀ ಸಿಂಧೂ ಪ್ರಿಯ ಡೆವೆಲಪರ್ಸ್, ಹೈದರಾಬಾದ್ ಎಂ. ಡಿ  ಶ್ರೀನಿವಾಸ್ ನಾಯಕ್ ಉಪಸ್ಥಿತರಿದ್ದರು. 

ಶರಣ್. ಶಿವರಾಜ್  ಪಾಂಡೇಶ್ವರ  ವೈಜಾಕ್ ಇವರಿಂದ ರಸಮಂಜರಿ  ಕಾರ್ಯಕ್ರಮ ನೆರವೇರಿತು.

ಬೆಂಗಳೂರಿನ ಸಾಗರ್. ಸಂಗಮಮ್ ಸಾಂಸ್ಕೃತಿಕ ಅಕಾಡೆಮಿ, ಶಾಂತಲಾ ಇನಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಅಂಡ್ ಡ್ಯಾನ್ಸ್ ಇವರಿಂದ ಭರತನಾಟ್ಯ, ಫಿಲ್ಮಿ ಡ್ಯಾನ್ಸ್ ಮುಂತಾದ ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳು ನಡೆದವು.  ವಿವಿಧ ಕ್ಷೇತ್ರದ. ಸಾಧನಾ ಶೀಲ ಗಣ್ಯರಿಗೆ **ಐಕಾನಿಕ್ ಆಫ್ ಇಡಿಯಾ - 2022, ಪ್ರಶಸ್ತಿ** ನೀಡಿ. ಗೌರವಿಸಲಾಯಿತು. ಕಾರ್ಯಕ್ರಮವನ್ನು. ರವಿ ಎಂ ಕೆಎಂಎಫ್.  ನಿರೂಪಿಸಿದರು.

Post a Comment

0Comments

Post a Comment (0)