ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ 48 ದಿನಗಳ ಕಾಲ ಉಚಿತ ಯೋಗ ಶಿಬಿರ

varthajala
0

 ಶಿಬಿರದ ಸದ್ಬಳಕೆ ಮಾಡಿಕೊಂಡು ಆರೋಗ್ಯವಂತರಾಗಿರಿ


ವರದಿ ಮಧು ದೇವನಹಳ್ಳಿ

ವಾರ್ತಾ ಜಾಲ  ದೇವನಹಳ್ಳಿ  ಶ್ರೀ ಪತಂಜಲಿ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ  ತುಮಕೂರು ಶಾಖೆ ವತಿಯಿಂದ ದೇವನಹಳ್ಳಿ ಪಟ್ಟಣದ ತರಗು ಚಾವಡಿ ಆಂಜನೇಯಸ್ವಾಮಿ ಸಮುದಾಯ ಭವನದಲ್ಲಿ  48 ದಿನಗಳ ಉಚಿತ ಯೋಗ ಶಿಬಿರದಲ್ಲಿ ತಾಲ್ಲೂಕಿನ ಜನತೆ  ಭಾಗವಹಿಸಿ ಯೋಗ ಶಿಬಿರವನ್ನು ಸದ್ಬಳಕೆ  ಮಾಡಿಕೊಳ್ಳಿ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿ ತಾಲೂಕು ಅಧ್ಯಕ್ಷ ಮುನಿವೆಂಕಟಪ್ಪ ತಿಳಿಸಿದರು.

 ಪಟ್ಟಣದ ಪತ್ರಕರ್ತ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಸಮಿತಿಯೂ ತಾಲೂಕಿನಲ್ಲಿ 1998 ರಿಂದ ಉಚಿತವಾಗಿ ಯೋಗಾಸನ ಪ್ರಾಣಾಯಾಮ ಧ್ಯಾನ ಶರೀರಶಾಸ್ತ್ರ ಆಹಾರ ಪದ್ಧತಿ ಸತ್ಸಂಗ ಮಾತೃಭೋಜನ  ಮಾತೃ ಪಿತೃಗಳ  ಪೂಜೆ ಭಾರತಮಾತ ಪೂಜೆ ಅನೇಕ ಆರೋಗ್ಯಕರ ಸಮಾಜ ನಿರ್ಮಾಣ ಕಾರ್ಯವನ್ನು ಸೇವಾ ಮನೋಭಾವದಿಂದ ಸೇವಾ ಮನೋಭಾವದಿಂದ ಮಾಡಿಕೊಂಡು ಬರುತ್ತಿದ್ದೇವೆ ದೇವನಹಳ್ಳಿಯಲ್ಲಿ 48 ದಿನಗಳ ಉಚಿತ ಯೋಗ ಶಿಬಿರದಲ್ಲಿ ಭಾಗವಹಿಸಿ ಉತ್ತಮ ಆರೋಗ್ಯ ವೃದ್ಧಿಸಿ ಕೊಳ್ಳುವುದರ ಮೂಲಕ ಆರೋಗ್ಯವಂತರಾಗಿರಬೇಕು ಎಂದರು.

ಸಮಿತಿ ಸದಸ್ಯ ಮಂಜುನಾಥ್ ಮಾತನಾಡಿ 48 ದಿನಗಳ ಉಚಿತ ಯೋಗ ಶಿಬಿರದಲ್ಲಿ ಯೋಗ ಮಾನಸಿಕ ಧಾರ್ಮಿಕ ಉಚಿತ ತರಬೇತಿ ನೀಡಲಾಗುತ್ತಿದ್ದು ಮುಖ್ಯವಾದದ್ದು  ಸಂಸ್ಕಾರವಂತರನ್ನಾಗಿ ಸಿದ್ಧಪಡಿಸಲು ಪ್ರಾಣಾಯಾಮ ಬಹಳ ಮುಖ್ಯವಾದದ್ದು ಮನುಷ್ಯ ಸಂತೋಷವಾಗಿರಬೇಕಾದರೆ  ಆಹಾರ ಶಾಸ್ತ್ರ ಶರೀರದ ಮಹತ್ವ, ಉಪವಾಸ ದಿವ್ಯ ಔಷಧ, ಗಾಳಿಯ ಮಹತ್ವ, ಸೂರ್ಯಕಿರಣಗಳ ಉಪಯೊಗ ನೀರಿನ ಮಹತ್ವ, ಅಷ್ಟಾಂಗಯೋಗ ಹೀಗೆ ಹತ್ತು ಹಲವಾರು ವಿಚಾರಗಳನ್ನು ಶಿಬಿರದಲ್ಲಿ ತಿಳಿಸಿಕೊಡಲಾಗುವುದು ತಾಲ್ಲೂಕಿನ ಜನತೆ ಭಾಗವಹಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

 ಸಮಿತಿ ಸದಸ್ಯರ ನಟರಾಜ್ ಮಾತನಾಡಿ ಪತಂಜಲಿ ಯೋಗ ಶಿಕ್ಷಣ ಸಮಿತಿ 48 ದಿನಗಳ ಕಾಲ ದೇವನಹಳ್ಳಿ ತಾಲೂಕು ಕಚೇರಿ ರಸ್ತೆಯಲ್ಲಿರುವ ತರಗು ಚಾವಡಿ ಆಂಜನೇಯಸ್ವಾಮಿ ಸಮುದಾಯದಲ್ಲಿ ಬೆ. 5: 30 ರಿಂದ 7, ಸಂಜೆ. 4:30 ರಿಂದ 6 ಗಂಟೆ ಯ ವರಗೆ ಎರಡು ಅವಧಿಗಳಲ್ಲಿ ತರಬೇತಿ ನೀಡಲಾಗುವುದು ಎಂದರು.

Post a Comment

0Comments

Post a Comment (0)