ಬೆಂಗಳೂರು, ಅಕ್ಟೋಬರ್ 11 (ಕರ್ನಾಟಕ ವಾರ್ತೆ):ಬೆಂಗಳೂರಿನ ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕೇಂದ್ರ, ಸೆಂಟ್ ವಿನ್ಸೆಂಟ್ ಪಲ್ಲೊಟ್ಟಿ ಕಾಲೇಜು, ಕಲ್ಯಾಣನಗರ, ಬೆಂಗಳೂರು - 43 ಇವರ ಸಂಯುಕ್ತಾಶ್ರಯದಲ್ಲಿ “ಉದ್ಯೋಗ ಮೇಳ”ವನ್ನು ಅಕ್ಟೋಬರ್ 13 ರಂದು ನಗರದ ಸೆಂಟ್ ವಿನ್ಸೆಂಟ್ ಪಲ್ಲೊಟ್ಟಿ ಕಾಲೇಜ್, ಪಲ್ಲೊಟ್ಟಿ ನಿಲಯ ರಸ್ತೆ, ಚಲ್ಲಿಕೆರೆ, ಕಲ್ಯಾಣನಗರ ಇಲ್ಲಿ ಆಯೋಜಿಸಲಾಗಿದೆ.
ಈ ಉದ್ಯೋಗಮೇಳÀದಲ್ಲಿ 20 ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ಭಾಗವಹಿಸಲಿದ್ದು, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ 35 ವರ್ಷ ವಯೋಮಿತಿಯೊಳಗಿರುವ ಅಭ್ಯರ್ಥಿಗಳು ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ ಹಾಗೂ ಸ್ವ-ವಿವರಗಳ ಪ್ರತಿಯೊಂದಿಗೆ ಹಾಜರಾಗಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.