UT KHADER : ವಿದ್ಯಾರ್ಥಿ ಮತ್ತು ಶಿಕ್ಷಕರು ಬಲಿಷ್ಠರಾದಾಗ ಮಾತ್ರ ದೇಶ ಬಲಿಷ್ಠವಾಗಬಲ್ಲದು-ಯು.ಟಿ.ಕಾದರ್

varthajala
0

ವಿದ್ಯಾರ್ಥಿ ಮತ್ತು ಶಿಕ್ಷಕರು ಬಲಿಷ್ಠರಾದಾಗ ಮಾತ್ರದೇಶ ಬಲಿಷ್ಠವಾಗಬಲ್ಲದು-ಯು.ಟಿ.ಕಾದರ್

ಐಟಾ ವತಿಯಿಂದ ನಡೆದಆನ್ಲೆöÊನ್ ಶಿಕ್ಷಕರ ದಿನಾಚರಣೆ


ಬೆಂಗಳೂರು : ಎಂ.ಪಿ., ಎಂ.ಎಲ್.



ಎ., ಎಸಿ ರೂಮಿನಲ್ಲಿ ಕುಳಿಕೊಳ್ಳುವ ಅಧಿಕಾರಿಗಳು ಬಲಿಷ್ಠಗೊಂಡರೆದೇಶ ಬಲಿಷ್ಠವಾಗದು, ಬದಲಾಗಿವರ್ಗದಕೋಣೆಯಲ್ಲಿ ಶಿಕ್ಷಣ ಕಲಿಯುವ, ಆಟದ ಮೈದಾನದಲ್ಲಿಆಟವಾಡುವ ವಿದ್ಯಾರ್ಥಿಗಳು ಬಲಿಷ್ಠರಾದಾಗ ಮಾತ್ರದೇಶ ಬಲಿಷ್ಠವಾಗಬಲ್ಲದುಎಂದು ಮಾಜಿ ಸಚಿವ ಹಾಗೂ ವಿಧಾನಸಭೆಯ ಪ್ರತಿಪಕ್ಷದಉಪನಾಯಕಯು.ಟಿ.ಕಾದರ್ ಹೇಳಿದರು.

ಅವರು ಆಲ್‌ ಇಂಡಿಯಾ ಐಡಿಯಲ್‌ ಟೀರ‍್ಸ್ ಅಸೋಸಿಯೇಶನ್ ಕರ್ನಾಟಕ ಸೋಮವಾರರಾತ್ರಿ ಆಯೋಜಿಸಿದ್ದ ರಾಜ್ಯಮಟ್ಟದ ಆನ್ಲೆö ನ್ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರು.

ಶಿಕ್ಷಕರು ಸಮಾಜವನ್ನು ನಿರ್ಮಿಸುತ್ತಿರುವ ದೇಶದ ದೊಡ್ಡ ಶಕ್ತಿಯಾಗಿದ್ದಾರೆ.ಇಂದು ನಾನು ಈ ಸ್ಥಾನಕ್ಕೇರಲು ನನ್ನ ಪಾಲಕ ಪೋಷಕರಷ್ಟೇ ಶಿಕ್ಷಕರೂ ಕೂಡಕಾರಣರಾಗಿದ್ದಾರೆ.ಶಿಕ್ಷಕ ದಿನಾಚರಣೆಯ ಈ ಸಂದರ್ಭದಲ್ಲಿಅAದು ನನ್ನ ಶಿಕ್ಷಕರು ನನಗೆ ನೀಡಿದ ಪ್ರೋತ್ಸಾಹ, ಮಾರ್ಗದರ್ಶನವನ್ನು ಸ್ಮರಿಸಿಕೊಳ್ಳುತ್ತಿದ್ದೇನೆ. ಭವಿಷ್ಯದಲ್ಲಿ ಎಲ್ಲರೂ ಅತ್ಯುತ್ತಮ ಶಿಕ್ಷಕರಾಗಿ ರೂಪುಗೊಳ್ಳಬೇಕು, ನಿಮ್ಮ ನಿಮ್ಮ ವಿದ್ಯಾರ್ಥಿ ವರ್ಗವನ್ನುಅತ್ಯಂತ ಪ್ರೀತಿ ಮತ್ತು ಕರುಣೆಯಿಂದ ಅವರನ್ನು ದೇಶದ ಸತ್ಪçಜೆಯನ್ನಾಗಿ ಮಾಡುತ್ತೀರೆಂಬ ವಿಶ್ವಾಸ ನನಗಿದೆಎಂದರು.

ಭಾರತದೇಶ ಪ್ರಪಂಚದಲ್ಲಿ ಒ0ದನೆ ಸ್ಥಾನಕ್ಕೇರಬೇಕೆಂಬುದು ಪ್ರತಿಯೊಬ್ಬರ ಕನಸು.ಶಾಸಕರು, ಮಂತ್ರಿಗಳು, ಎಸಿ ರೂಮಿನಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳಿಂದ ದೇಶ ಬಲಿಷ್ಠವಾಗದು, ಇದು ಸಾಧ್ಯವಾಗಬೇಕಾದರೆ ದೇಶದ ಶಿಕ್ಷಕ ಸಮುದಾಯ ಬಲಿಷ್ಠಗೊಳ್ಳಬೇಕು, ಇಲ್ಲಿನ ಪ್ರತಿಯೊಬ್ಬ ಪ್ರಜೆ ಶಿಕ್ಷಣ ಪಡೆದು ಸತ್‌ಪ್ರಜೆಯಾದಾಗ ಮಾತ್ರದೇಶ ಬಲಿಷ್ಠಗೊಳ್ಳುತ್ತದೆ.ದೇಶದಲ್ಲಿ ನೆಮ್ಮದಿ, ಶಾಂತಿ ಮತ್ತು ಪ್ರೀತಿಉಂಟಾಗಬೇಕಾದರೆ, ಶಿಕ್ಷಕ ಸಮುದಾಯ ಮಕ್ಕಳಲ್ಲಿ ಅದನ್ನು ಬೆಳೆಸುವಲ್ಲಿ ಪ್ರಯತ್ನಶೀಲರಾಗಬೇಕು, ವಿದ್ಯಾರ್ಥಿಗಳಲ್ಲಿ ನಕರಾತ್ಮಕ ದೋರಣೆಗಳು ಸುಳಿಯದಂತೆ ಎಚ್ಚರವಹಿಸಬೇಕು ಎಂದರು.ಶಾಲೆಯಲ್ಲಿಉತ್ತಮ ಅಂಕ ಪಡೆದುಕೊಳ್ಳುವ ವಿದ್ಯಾರ್ಥಿಯಾಗದಿದ್ದರೂ ಪರವಾಗಿಲ್ಲ. ದೇಶದಉತ್ತಮ ಸತ್‌ಪ್ರಜೆಯಾಗಿಅವರನ್ನುರೂಪಿಸಬೇಕು ಎಂದರು.ದ್ವೇಷ ಎಂಬ ಪದವನ್ನು ವಿದ್ಯಾರ್ಥಿಗಳ ಬಾಯಿಂದಷ್ಟೇಅಲ್ಲದೆಅವರ ಮನಸ್ಸಿನಿಂದಲೇ ಕಿತ್ತು ಹಾಕುವ ಕೆಲಸ ಶಿಕ್ಷಕ ಸಮುದಾಯದಿಂದ ಆಗಬೇಕು.ಶಿಕ್ಷಕ ಸಮುದಾಯದ ದ್ವನಿಯಾಗಿ ನಿಮ್ಮ ಬೆನ್ನ ಹಿಂದೆಯಾವಾಗಲು ನಿಲ್ಲುವೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನಗಳನ್ನು ಮಾಡುವುದಾಗಿಅವರು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದ ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿಡಾ.ಬಿ.ಪಿ. ವೀರಭದ್ರಪ್ಪಮಾತನಾಡಿ, ನಮ್ಮದೇಶ75ನೆ ಸ್ವಾತಂತ್ರ÷್ಯ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿದೇಶದ ಸ್ಥಿತಿಗತಿಯೊನ್ನೊಮ್ಮೆ ಅವಲೋಕ ಮಾಡಿಕೊಂಡರೆತುAಬ ನೋವಾಗುತ್ತದೆ.ಅರ್ಥಶಾಸ್ತçದ ತಳಹದಿಯಲ್ಲಿ ಬಂದAತಹ ನನಗೆ ಇಲ್ಲಿನ ಬಡತನ, ಹಸಿವು, ನಿರೋದ್ಯೋಗ, ಅನಕ್ಷರತೆ, ಆರ್ಥಿಕಅಸಮಾನತೆ, ಸಾಮಾಜಿಕಅಸಮಾನತೆ, ಆರ್ಥಿಕದೌರ್ಬಲ್ಯತೆಇಂತಹ ಹಲವು ಸಮಸ್ಯೆಗಳ ನಡುವೆ ನಾವು ಯಾವರೀತಿಯ ಭಾರತದೇಶಕಟ್ಟಬೇಕು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.ಪ್ರಧಾನಿಯವರು 5ಟ್ರೇಲಿಯನ್ ಡಾಲರ್‌ಆರ್ಥಿಕತೆ ಮಾಡಬೇಕುಎಂದು ಹೇಳಿಕೊಳ್ಳುತ್ತಿದ್ದಾರೆ.ಇದನ್ನು ಮಾಡಬೇಕಾದರೆ ನಮ್ಮಉನ್ನತ ಶಿಕ್ಷಣ ತುಂಬಾಗಟ್ಟಿಯಾಗಬೇಕಾಗಿರುತ್ತದೆ ಎಂಬ ಪ್ರಶ್ನೆಉಂಟಾಗುತ್ತದೆ.75 ವರ್ಷ ಕಳೆದರೂ ನಾವು ಹೊಸ ಹೊಸ ಅವಿಷ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ. ಸಾವಾಲುಗಳು ಎದರಿಸಲು ಸಾಧ್ಯವಾಗುತ್ತಿಲ್ಲ. ಎಂದರು.ಶಿಕ್ಷಣವೇ ಶಕ್ತಿ, ಶಿಕ್ಷಣವೇ ಸಾಮ್ರಾಜ್ಯಎಂದು ಹೇಳಿಕೊಳ್ಳಬೇಕಾದರೆ ಶಿಕ್ಷಣದ ಮೂಲಕ ಒಂದುಗಟ್ಟಿಯಾದ ಸಮಾಜ ನಿರ್ಮಾಣಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ ಎಂದರು.

ಶಿಕ್ಷಣ ತಜ್ಞ ಸೈಯ್ಯದ್‌ತನ್ವೀರ್‌ಆಹ್ಮದ್ ಶಿಕ್ಷಣ ನೀತಿ, ಶೈಕ್ಷಣಿಕ ಸಮಸ್ಯೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.ಆಲ್‌ಇಂಡಿಯಾಐಡಿಯಲ್‌ಟೀರ‍್ಸ್ ಅಸೋಸಿಯೇಶನ್ ರಾಷ್ಟಿçಯ ಅಧ್ಯಕ್ಷ ಅಬ್ದುಲ್‌ ರಹೀಮ್ ಶೇಖ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಐಟಾರಾಜ್ಯಾಧ್ಯಕ್ಷ ಮುಹಮ್ಮದ್‌ರಝಾ ಮಾನ್ವಿಎಲ್ಲರನ್ನೂ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.ರಾಜ್ಯಕಾರ್ಯದರ್ಶಿ ಯಾಸೀನ್ ಭೀಕ್ಬಾಧನ್ಯವಾದ ಅರ್ಪಿಸಿದರು.ವಿಭಾಗೀಯ ಕಾರ್ಯದರ್ಶಿ ಸಲೀಮ್ ಪಾಶ ರಾಯಚೂರುಕಾರ್ಯಕ್ರಮ ನಿರೂಪಿಸಿದರು.

Post a Comment

0Comments

Post a Comment (0)