ಶಿಕ್ಷಕರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನ.

varthajala
0

ಶಿಕ್ಷಕರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನ. ಹಾಗೂ ವಿದ್ಯಾರ್ಥಿ ಬೆಳಕು ಯೋಜನೆ ಉದ್ಘಾಟನೆ:

ಬಿಬಿಎಂಪಿ ವತಿಯಿಂದ ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದಲ್ಲಿ ಇಂದು ಹಮ್ಮಿಕೊಂಡಿರುವ ಶಿಕ್ಷಕರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ಬೆಳಕು ಯೋಜನೆ ಉದ್ಘಾಟನಾ ಸಮಾರಂಭಕ್ಕೆ ಮಾನ್ಯ ಶಾಲಾ ಶಿಕ್ಷಣ ಸಾಕ್ಷರತಾ ಸಚಿವರು ಶ್ರೀ ಬಿ.ಸಿ. ನಾಗೇಶ್ ರವರು ಚಾಲನೆ ನೀಡಿದರು.

ಸಮಾರಂಭದಲ್ಲಿ ವಿಶೇಷ ಆಯುಕ್ತರು(ಶಿಕ್ಷಣ) ಡಾ. ರಾಮ್ ಪ್ರಸಾತ್ ಮನೋಹರ್, ಸಹಾಯಕ ಆಯುಕ್ತರು(ಶಿಕ್ಷಣ) ಉಮೇಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

“ವಿದ್ಯಾರ್ಥಿ ಬೆಳಕು” ಯೋಜನೆಗೆ ಚಾಲನೆ:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಿಕ್ಷಣ ಇಲಾಖೆಯ ವತಿಯಿಂದ “ವಿದ್ಯಾರ್ಥಿ ಬೆಳಕು ಯೋಜನೆಯಡಿ ಪಾಲಿಕೆಯ ಆಯ್ದ 10 ಶಾಲಾ/ಕಾಲೇಜುಗಳಲ್ಲಿ ಇಂದಿನಿಂದ ಮೇ|| ಅಗಸ್ತ್ಯ ಪೌಂಡೇಷನ್ ಸಂಸ್ಥೆಯ ಮೂಲಕ ಸಂಜೆ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ.

ಸಂಜೆ ಶಾಲೆಗಳನ್ನು ನಡೆಸುವ ಶಾಲೆಗಳ ವಿವರ:

1. ಪಾಲಿಕೆಯ ಪ್ರೌಢಶಾಲೆ, ಗಂಗಾನಗರ.

2. ಪಾಲಿಕೆಯ ಹಿರಿಯ ಪ್ರಾಥಮಿಕ ಶಾಲೆ, ಜಯಮಹಲ್.

3. ಪಾಲಿಕೆಯ ಹಿರಿಯ ಪ್ರಾಥಮಿಕ ಶಾಲೆ, ಕೋದಂಡರಾಮಪುರ, ಮಲ್ಲೇಶ್ವರಂ.

4. ಪಾಲಿಕೆಯ ಹಿರಿಯ ಪ್ರಾಥಮಿಕ ಶಾಲೆ, ಮಾರಪ್ಪನ ಪಾಳ್ಯ.

5. ಪಾಲಿಕೆಯ ಬಾಲಕಿಯರ ಪ್ರೌಢಶಾಲೆ, ಮತ್ತಿಕೆರೆ.

6. ಪಾಲಿಕೆಯ ಹಿರಿಯ ಪ್ರಾಥಮಿಕ ಶಾಲೆ, ಮಾರುತಿ ಮಂದಿರ.

7. ಪಾಲಿಕೆಯ ಹಿರಿಯ ಪ್ರಾಥಮಿಕ ಶಾಲೆ, ಪಂಚಶೀಲನಗರ.

8. ಪಾಲಿಕೆಯ ಪ್ರೌಢಶಾಲೆ, ಕಸ್ತೂರಿಬಾನಗರ.

9. ಪಾಲಿಕೆಯ ಪ್ರೌಢಶಾಲೆ, ಭೈರವೇಶ್ವರನಗರ.

10. ಪಾಲಿಕೆಯ ಬಾಲಕಿಯರ ಪ್ರೌಢಶಾಲೆ, ಕ್ಲೀವ್ ಲ್ಯಾಂಡ್ ಟೌನ್.




ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಲಾ/ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುವುದರ ಜೊತೆಗೆ ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುವುದು. ಅದರಂತೆ 2021-22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ., ದ್ವಿತೀಯ ಪಿ.ಯು.ಸಿ. ಹಾಗೂ ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ 14 ವಿದ್ಯಾರ್ಥಿಗಳಿಗೆ ನಗದು, ಪ್ರಶಸ್ತಿಪತ್ರ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು‌.

ಹೆಚ್ಚು ಅಂಕ ಪಡೆದಿರುವ 14 ವಿದ್ಯಾರ್ಥಿಗಳ ವಿವರ:

ಎಸ್.ಎಸ್.ಎಲ್.ಸಿ:

1. ಹೆಸರು: ಲಕ್ಷ್ಮೀ ಸಿ

ಶಾಲೆಯ ಹೆಸರು: ಶಕ್ತಿ ಗಣಪತಿನಗರ ಪ್ರೌಢಶಾಲೆ.

ಪಡೆದ ಅಂಕ ಹಾಗೂ ಶೇ.: 617(98.72%)

ಬಹುಮಾನದ ಮೊತ್ತ: 50,000/-

2. ಹೆಸರು: ಉಜ್ವಲಾ ಎಂ.ಸಿ

ಶಾಲೆಯ ಹೆಸರು: ಶ್ರೀರಾಂಪುರ ಪ್ರೌಢಶಾಲೆ

ಪಡೆದ ಅಂಕ ಹಾಗೂ ಶೇ.: 616(98.56%)

ಬಹುಮಾನದ ಮೊತ್ತ: 30,000/-

3. ಹೆಸರು: ತರುಣ್. ಕೆ

ಶಾಲೆಯ ಹೆಸರು: ಲಗ್ಗೆರೆ ಪ್ರೌಢಶಾಲೆ

ಪಡೆದ ಅಂಕ ಹಾಗೂ ಶೇ.: 606(96.96%)

ಬಹುಮಾನದ ಮೊತ್ತ: 25,000/-

ಪದವಿ ಪೂರ್ವ ಕಾಲೇಜು ಕಲಾ ವಿಭಾಗ:

1. ಹೆಸರು: ಮಹೇಶ್ ಜಿ.ಆರ್

ಶಾಲೆಯ ಹೆಸರು: ಬಿಬಿಎಂಪಿ ಪದವಿ ಪೂರ್ವ ಕಾಲೇಜು, ಕಾವೇರಿಪುರ.

ಪಡೆದ ಅಂಕ ಹಾಗೂ ಶೇ.: 560(93.33%)

ಬಹುಮಾನದ ಮೊತ್ತ: 50,000/-

2. ಹೆಸರು: ಗಂಗಾಮಾಲಮ್ಮ .ಹೆಚ್

ಶಾಲೆಯ ಹೆಸರು: ಬಿಬಿಎಂಪಿ ಪದವಿ ಪೂರ್ವ ಕಾಲೇಜು, ಕ್ಲೀವ್‌ಲ್ಯಾಂಡ್ ಟೌನ್.

ಪಡೆದ ಅಂಕ ಹಾಗೂ ಶೇ.: 559(93.16%)

ಬಹುಮಾನದ ಮೊತ್ತ: 30,000/-

3. ಹೆಸರು: ಭಾರತಿ .ಕೆ

ಶಾಲೆಯ ಹೆಸರು: ಬಿಬಿಎಂಪಿ ಪದವಿ ಪೂರ್ವ ಕಾಲೇಜು, ಕೆ.ಬಿ. ನಗರ.

ಪಡೆದ ಅಂಕ ಹಾಗೂ ಶೇ.: 539(89.83%)

ಬಹುಮಾನದ ಮೊತ್ತ: 25,000/-

ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗ:

1. ಹೆಸರು: ನೂತನ್ ಟಿ.ಎಸ್.

ಶಾಲೆಯ ಹೆಸರು: ಬಿಬಿಎಂಪಿ ಪದವಿ ಪೂರ್ವ ಕಾಲೇಜು, ಕೆ.ಬಿ. ನಗರ.

ಪಡೆದ ಅಂಕ ಹಾಗೂ ಶೇ.: 584(97.33%)

ಬಹುಮಾನದ ಮೊತ್ತ: 50,000/-

2. ಹೆಸರು: ಅನ್ನಪೂರ್ಣೇಶ್ವರಿ .ಎಂ

ಶಾಲೆಯ ಹೆಸರು: ಬಿಬಿಎಂಪಿ ಪದವಿ ಪೂರ್ವ ಕಾಲೇಜು, ಭೈರವೇಶ್ವರ ನಗರ.

ಪಡೆದ ಅಂಕ ಹಾಗೂ ಶೇ.: 583(97.16%)

ಬಹುಮಾನದ ಮೊತ್ತ: 30,000/-

3. ಹೆಸರು: ನಿದಾ ಅಫ್ರೀನ್ 

ಶಾಲೆಯ ಹೆಸರು: ಬಿಬಿಎಂಪಿ ಪದವಿ ಪೂರ್ವ ಕಾಲೇಜು, ಕ್ಲೀವ್‌ಲ್ಯಾಂಡ್ ಟೌನ್.

ಪಡೆದ ಅಂಕ ಹಾಗೂ ಶೇ.: 576(96.00%)

ಬಹುಮಾನದ ಮೊತ್ತ: 25,000/-

4. ಹೆಸರು: ಉಮ್ಮೆ ಹನಿ

ಶಾಲೆಯ ಹೆಸರು: ಬಿಬಿಎಂಪಿ ಪದವಿ ಪೂರ್ವ ಕಾಲೇಜು, ಕ್ಲೀವ್‌ಲ್ಯಾಂಡ್ ಟೌನ್. 

ಪಡೆದ ಅಂಕ ಹಾಗೂ ಶೇ.: 576(96.00%)

ಬಹುಮಾನದ ಮೊತ್ತ: 25,000/-

ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗ:

1. ಹೆಸರು: ಮನಿಶಾ ಕೆರ್ಕೆಟ್ಟಾ

ಶಾಲೆಯ ಹೆಸರು: ಬಿಬಿಎಂಪಿ ಪದವಿ ಪೂರ್ವ ಕಾಲೇಜು ಕ್ಲೀವ್‌ಲ್ಯಾಂಡ್ ಟೌನ್

ಪಡೆದ ಅಂಕ ಹಾಗೂ ಶೇ.: 555(92.50%)

ಬಹುಮಾನದ ಮೊತ್ತ: 50,000/-

2. ಹೆಸರು: ಆಯೇಷಾ ಸಿದ್ಧಿಕ್

ಶಾಲೆಯ ಹೆಸರು: ಬಿಬಿಎಂಪಿ ಪದವಿ ಪೂರ್ವ ಕಾಲೇಜು ಕ್ಲೀವ್‌ಲ್ಯಾಂಡ್ ಟೌನ್

ಪಡೆದ ಅಂಕ ಹಾಗೂ ಶೇ.: 536(89.33%)

ಬಹುಮಾನದ ಮೊತ್ತ: 30,000/-

3. ಹೆಸರು: ಬುಶ್ರಾ ಯಾಸ್ಮೀನ್

ಶಾಲೆಯ ಹೆಸರು: ಬಿಬಿಎಂಪಿ ಪದವಿ ಪೂರ್ವ ಕಾಲೇಜು ಕ್ಲೀವ್‌ಲ್ಯಾಂಡ್ ಟೌನ್

ಪಡೆದ ಅಂಕ ಹಾಗೂ ಶೇ.: 517(86.16%)

ಬಹುಮಾನದ ಮೊತ್ತ: 25,000/-

ಅಂತಿಮ ಪದವಿ:

1. ಹೆಸರು: ಆಫ್ರೀನ್ .ಕೆ

ಶಾಲೆಯ ಹೆಸರು: ಬಿಬಿಎಂಪಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕ್ಲೀವ್‌ಲ್ಯಾಂಡ್ ಟೌನ್

ಪಡೆದ ಅಂಕ ಹಾಗೂ ಶೇ.: 3726(81%)

ಬಹುಮಾನದ ಮೊತ್ತ: 50,000/-

ಉತ್ತಮ ಶಿಕ್ಷಕ, ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ:

ಬಿಬಿಎಂಪಿ ವತಿಯಿಂದ 20 ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಅವರಿಗೆ “ಉತ್ತಮ ಶಿಕ್ಷಕ" ಪ್ರಶಸ್ತಿ ಪತ್ರದೊಂದಿಗೆ  10,000 ರೂ.ಗಳ ನಗದು ಬಹುಮಾನ, ಪಾರಿತೋಷಕ ನೀಡಿ ಸನ್ಮಾನಿಸಲಾಯಿತು. 

ಬಳಿಕ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಒಟ್ಟು 144 ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ತಲಾ 25,000 ರೂ. ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಒಟ್ಟು 143 ವಿದ್ಯಾರ್ಥಿಗಳಿಗೆ ತಲಾ 35,000 ರೂ.ಗಳನ್ನೊಳಗೊಂಡ ನಗದು ಹಾಗೂ ಪ್ರಶಸ್ತಿಪತ್ರ ಮತ್ತು ಪಾರಿತೋಷಕ ನೀಡಿ ಗೌರವಿಸಲಾಯಿತು.

ಕೊನೆಯದಾಗಿ ನಿವೃತ್ತಿ ಹೊಂದಿರುವ 40 ಶಿಕ್ಷಕರಿಗೆ ಸನ್ಮಾನಿಸಲಾಯಿತು.


Post a Comment

0Comments

Post a Comment (0)