ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ ನಾಡಗೀತೆಯ ಪೂರ್ಣಪದ್ಯವನ್ನು ಪುನರಾವರ್ತನೆಯಿಲ್ಲದೆ ಹಾಡಬೇಕು ಎಂಬ ನಿರ್ಧಾರವನ್ನು ಕೈಗೊಂಡಿರುವ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರನ್ನು ಕನ್ನಡ ಗೆಳೆಯರ ಬಳಗವು ಹಾರ್ದಿಕವಾಗಿ ಅಭಿನಂದಿಸುತ್ತದೆ.
ಮಹಾಕವಿ ಕುವೆಂಪು ಅವರ ‘ಜಯಭಾರತ ಜನನಿಯ ತನುಜಾತೆ’ಯನ್ನು ೨೦೦೩ರಲ್ಲಿ ನಾಡಗೀತೆಯಾಗಿ ಘೋಷಿಸಿದರೂ ಹಾಡುವ ಧಾಟಿ, ಪಠ್ಯದ ಬಗ್ಗೆ ದಿಟ್ಟ ನಿರ್ಧರ ಕೈಗೊಂಡಿರಲಿಲ್ಲ.
Àಇದ್ದ ವಿವಾದವನ್ನು ಪರಿಹರಿಸಲು ರಚಿಸಿದ ಸಂಗೀತ ವಿದುಷಿ ಎಚ್.ಅರ್. ಲೀಲಾವತಿಯವರ ಸಮಿತಿಯನ್ನು ರಚಿಸಿ, ಸಮತಿಯ ವರದಿಯನ್ನು ಒಪ್ಪಿ ಆದೇಶ ಹೊರಡಿಸಿ ಕನ್ನಡಾಭಿಮಾನಿಗಳ ೨ ದಶಕಗಳ ಭಾವನಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ನಡೆ ಶ್ಲಾಘನೀಯ. ನಾಡಗೀತೆಯನ್ನು ಒಬ್ಬರು ಒಂದೊಂದು ಧಾಟಿ, ಸಮುಯ ತೆಗೆದುಕೊಂಡು ನಾಡಗೀತೆಗೆ ಸಿಗಬೇಕಾದ ಗೌರವ ಸಿಗುತ್ತಿರಲಿಲ್ಲ. ಈಗ ಅದಿಕೃÀತವಾಗಿ ಎಲ್ಲಡೆ ಒಂದೇ ರೀತಿ ಹಾಡುವಂತೆ ಮಾಡಿ ನಾಡಗೀತೆಗೆ ಸಲ್ಲಬೇಕಿದ್ದ ಘನತೆ-ಗೌರವನ್ನು ತಂದು ಕೊಟ್ಟ ಎಲ್ಲರಿಗೂ ಅಭಿನಂದನೆಗಳು.
ನಾಡಗೀತೆಯ ಬಗ್ಗೆ ಉತ್ತಮ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿಗಳು ಕನ್ನಡಿಗರ ಉದ್ಯೋಗ ಸಮಸ್ಯೆಗೆ ಖಚಿತ ಪರಿಹಾರ ಒದಗಿಸುವ ಪರಿಷ್ಕೃತ ಸರೋಜಿನಿ ಮಹಿಷಿ ವರದಿಯನ್ನು ಸದನದಲ್ಲಿ ಮಂಡಿಸಿ ಕಾನೂ ಬಲ ತಂದು ಕೊಡಬೇಕಾಗಿ ಪ್ರಾರ್ಥನೆ