ಬೆಂಗಳೂರು: ಜ್ಞಾನಗಂಗ ಸಾಹಿತ್ಯ & ಸಾಂಸ್ಕೃತಿಕ ರಂಗ (ರಿ), ಬೆಂಗಳೂರು. ಹಾಗೂ ಕರುನಾಡ ಹಣತೆ ಕವಿ ಬಳಗ & ಸಾಂಸ್ಕೃತಿಕ ತಂಡ ಚಿತ್ರದುರ್ಗ- ಇವರ ಸಹಯೋಗದಲ್ಲಿ "ರಾಜ್ಯಮಟ್ಟದ ಕವಿ ಕಲಾವಿದರ ಸಮ್ಮೇಳನ-2022" ಅನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ 25 9 2022ರ ಭಾನುವಾರ ದಂದು ಆಯೋಜಿಸಲಾಗಿದೆ. ಸಮ್ಮೇಳನದ ಅಂಗವಾಗಿ ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ "ಕರುನಾಡು ಸೇವಾ ರತ್ನ" ಪ್ರಶಸ್ತಿ ವಿತರಣೆ, ಕವಿಗೋಷ್ಠಿ, ಮಹಿಳಾ ಗೋಷ್ಠಿ, ವಿದ್ಯಾರ್ಥಿ ಗೋಷ್ಠಿ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನವನ್ನು ಸಮಾಜಸೇವಕರಾದ ಜಗದೀಶ್ ಚೌಧರಿ ರವರು ಉದ್ಘಾಟಿಸಲಿದ್ದಾರೆ. ಲೇಖಕರು ಮತ್ತು ಅಂಕಣಕಾರರಾದ ಮಣ್ಣೆ ಮೋಹನ್ ರವರು ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ, 'ಇಂದುಸಂಜೆ' ಪತ್ರಿಕೆ ಸಂಪಾದಕರಾದ ಡಾ. ಪದ್ಮ ನಾಗರಾಜ್, ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ.ಸಮತಾ ದೇಶಮಾನೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷರಾದ ಕೃಷ್ಣಪ್ಪ ಬಿ.ಎನ್, ಕರ್ನಾಟಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶ್ ಕುಮಾರ್ ಹೊಸಮನಿ,'ವಿಶ್ವವಾಣಿ' ಪತ್ರಿಕೆ ಪುರವಣಿ ಸಂಪಾದಕರಾದ ಶಶಿಧರ ಹಾಲಾಡಿ, ಲಯಾಭಿನಯ ಕಲ್ಚರಲ್ ಫೌಂಡೇಶನ್ ಸಂಸ್ಥಾಪಕರಾದ ಡಾ. ಜಯಶ್ರೀ ರವಿ ಹೆಗಡೆ, ಕರುನಾಡ ಹಣತೆ ಕವಿ ಬಳಗದ ಸಂಸ್ಥಾಪಕರಾದ ಕನಕಪ್ರೀತೀಶ್ ಯವರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಡ್ರಾಮಾ ಜೂನಿಯರ್ ಸೀಸನ್ 4ರ ಫೈನಲಿಸ್ಟ್ ಕುಮಾರಿ ಬೈರವಿ ಹಾಗೂ ಬಾಲನಟಿ ಗನಿಕಾ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕುಮಾರಿ ಚಿನ್ಮಯಿ ಭಾರದ್ವಾಜ್ ರವರಿಂದ ಪ್ರಾರ್ಥನೆ, ಡಾ. ಯಶೋಧ ಅವರಿಂದ ಸ್ವಾಗತ, ಡಾ. ಎಂ ವಿ ನೆಗಳೂರು ಅವರಿಂದ ಪ್ರಾಸ್ತಾವಿಕ ನುಡಿ, ಎಸ್ ರಾಜು ಸೂಲೇನಹಳ್ಳಿ ರವರಿಂದ ಆಶಯ ನುಡಿ, ವರ್ಷಾ ರವರಿಂದ ವಂದನಾರ್ಪಣೆ ನಡೆಯಲಿದೆ. ನಟ ಹಾಗೂ ನಿರೂಪಕ ಧನಂಜಯ್ ರವರು ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.
*"ಉತ್ತುಂಗದಲ್ಲಿ ವನಿತೆಯರು-೧" ಕೃತಿ ಲೋಕಾರ್ಪಣೆ"*
"ಕರುನಾಡ ಕವಿ- ಕಲಾವಿದರ ರಾಜ್ಯಮಟ್ಟದ ಸಮ್ಮೇಳನ-2022" ರಲ್ಲಿ, ನಾಡಿನ ವಿವಿಧ ಕ್ಷೇತ್ರದ ಸಾಧಕಿಯರ ಕುರಿತಾದ ಲೇಖನಗಳ ಸಂಗ್ರಹ, ಮಣ್ಣೆ ಮೋಹನ್ ವಿರಚಿತ "ಉತ್ತುಂಗದಲ್ಲಿ ವನಿತೆಯರು-೧" ಕೃತಿ ಬಿಡುಗಡೆಗೊಳ್ಳಲಿದೆ.