ಯೋಗ ಗಿನ್ನಿಸ್ ವಿಶ್ವ ದಾಖಲೆ: ಯೋಗಾಥಾನ್ 2022ರಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿ

varthajala
0

ಬೆಂಗಳೂರುಸೆಪ್ಟೆಂಬರ್ 05 (ಕರ್ನಾಟಕ ವಾರ್ತೆ): ರಾಷ್ಟ್ರ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ಸರ್ಕಾರದ ವತಿಯಿಂದ "ಯೋಗಥಾನ್-2022 (Yogathon- health & happiness) ಮತ್ತು ಯುವೋತ್ಸವ - 2022 (Employment & Entrepreneurship)"  ಎಂಬ ಕಾರ್ಯಕ್ರಮವನ್ನು ಸೆಪ್ಟೆಂಬರ್ 17 ರಂದು ಆಯೋಜಿಸಲಾಗಿದ್ದುಕಾರ್ಯಕ್ರಮದಲ್ಲಿ ಭಾಗವಹಿಸಲು ಆನ್ಲೈನ್ ಮೂಲಕ ವೆಬ್ ಸೈಟ್ : www.yogathon2022.com ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.

 

 "ಯೋಗದಿಂದ ರೋಗಮುಕ್ತಆರೋಗ್ಯಕರ ಜೀವನಕ್ಕಾಗಿ ಯೋಗವನ್ನು ಅಭ್ಯಸಿಸೋಣಯೋಗದೊಂದಿಗೆ ವಿಶ್ವ ದಾಖಲೆ ನಿರ್ಮಿಸೋಣಎಂಬ ಘೋಷ ವಾಕ್ಯದಡಿ ರಾಜ್ಯದ 21 ಜಿಲ್ಲೆಗಳಲ್ಲಿ ಅಂದರೆ ಬೆಂಗಳೂರು ನಗರಬೆಂಗಳೂರು ಗ್ರಾಮಾಂತರಚಿಕ್ಕಬಳ್ಳಾಪುರದಾವಣಗೆರೆತುಮಕೂರುಧಾರವಾಡಉಡುಪಿಬಾಗಲಕೋಟೆಕೋಲಾರವಿಜಯಪುರಬೆಳಗಾವಿಮಂಡ್ಯಕಲಬುರ್ಗಿಮೈಸೂರುಚಿತ್ರದುರ್ಗದಕ್ಷಿಣ ಕನ್ನಡರಾಮನಗರಹಾವೇರಿಶಿವಮೊಗ್ಗಬಳ್ಳಾರಿ ಹಾಗೂ ಗದಗ ಜಿಲ್ಲೆಗಳನ್ನು ಸೆಪ್ಟೆಂಬರ್ 17 ರಂದು ಯೋಗಥಾನ್-2022 ಕಾರ್ಯಕ್ರಮದಲ್ಲಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಲು ಆಯ್ಕೆ ಮಾಡಿರುವ ಜಿಲ್ಲೆಗಳಾಗಿವೆ.

 

            ನಾಗರೀಕರು ಯೋಗಥಾನ್ 2022ರಲ್ಲಿ ಭಾಗವಹಿಸಲು ಆನ್ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದುಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್www.yogathon2022.com ದೂರವಾಣಿ ಸಂಖ್ಯೆ: 080-69043800  ಅನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆ ತಿಳಿಸಿದೆ.


Post a Comment

0Comments

Post a Comment (0)