ರಾಜಾಜಿನಗರ ವಿಧಾನಸಭಾ ಕ್ಷೇತ್ರ:75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ *ಮಾಜಿ ಶಿಕ್ಷಣ ಸಚಿವರು,ಶಾಸಕರಾದ ಎಸ್.ಸುರೇಶ್ ಕುಮಾರ್ ರವರ* ಜೊತೆಯಲ್ಲಿ ಬೆಂಗಳೂರಿನ ರಾಜಾಜಿನಗರದಿಂದ ಗೌರಿಬಿದನೂರುನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಕರ್ನಾಟಕದ ಜಲಿಯನ್ ವಾಲಬಾಗ್ ಎಂದು ಕರೆಯುವ ವಿದುರಾಶ್ವತ್ಥಕ್ಕೆ ತೆರಳಿ ವೀರಸೌಧ ಸ್ಮಾರಕಕ್ಕೆ ಗೌರವ ಸಮರ್ಪಣೆ ಸಲ್ಲಿಸಿದರು.
107ಕಿಲೋ ಮೀಟರ್ ಪ್ರಯಾಣ ಬೆಳಗ್ಗೆ 5ಗಂಟೆ ಆರಂಭವಾಯಿತು .ಸೈಕಲ್ ಜಾಥದಲ್ಲಿ 20ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ *ಎಸ್.ಸುರೇಶ್ ಕುಮಾರ್* ರವರು ಮಾತನಾಡಿ ಲಕ್ಷಾಂತರ ಜನರ ತ್ಯಾಗ,ಬಲಿದಾನ ನೀಡಿದ ಪ್ರತಿಫಲದಿಂದ ಸ್ವಾತಂತ್ರ್ಯ ಲಭಿಸಿತು ಇಂದು 75ನೇ ಅಮೃತ ಮಹೋತ್ಸವ ವರ್ಷಾಚರಣೆಯ ಶುಭಾ ಸಂದರ್ಭ. ಅಮೃತ ಮಹೋತ್ಸವ ಶುಭಾ ಸಂದರ್ಭದಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ 10000ಸಾವಿರ ತ್ರಿರ್ವಣ ಧ್ವಜಾವನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ,ಬಲಿದಾನ ನೀಡಿದ ಮಹನೀಯರುಗಳು ಆದರ್ಶ,ಸಿದ್ದಾಂತಗಳನ್ನು ಇಂದಿನ ಯುವ ಸಮೂಹ ಜೀವನದಲ್ಲಿ ಆಳವಡಿಸಿಕೊಂಡು, ಉತ್ತಮ ಮಾರ್ಗದಲ್ಲಿ ನಡೆದರೆ ಸಮ್ಮದ್ದ,ಸಧೃಢ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.
*ಗೌರಿಬಿದನೂರು ವಿದುರಾಶ್ವತ್ಥದಲ್ಲಿ ಮಾಜಿ ಉಪಮಹಾಪೌರರಾದ ರಂಗಣ್ಣ, ಮಂಡಲ ಅಧ್ಯಕ್ಷರಾದ ರಾಘವೇಂದ್ರರಾವ್,ಉಪಾಧ್ಯಕ್ಷರಾದ ಬಿ.ಎನ್.ಶ್ರೀನಿವಾಸ್, ಮತ್ತು ಪ್ರಧಾನ ಕಾರ್ಯದರ್ಶಿ ಸುದರ್ಶನ್ ಲಿಂಗರಾಜು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ.ಕಾರ್ಯಕರ್ತರು ಪಾಲ್ಗೊಂಡಿದ್ದರು*