"ಮಕ್ಕಳು ನೀಡಿದ ಆಕರ್ಷಣೀಯ ಗಾಯನ"

varthajala
0

ಶ್ರೀರಾಮಪುರದ ಶ್ರೀ ರಾಮಚಂದ್ರಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಉತ್ತರಾರಾಧನೆಯ ಪ್ರಯುಕ್ತ ಆಗಸ್ಟ್ 14, ಭಾನುವಾರ ಸಂಜೆ ಏರ್ಪಡಿಸಿದ್ದ ಹರಿನಾಮ ಸಂಕೀರ್ತನೆ ಕಾರ್ಯಕ್ರಮದಲ್ಲಿ ಬಾಲಪ್ರತಿಭೆಗಳಾದ ಕು|| ಭೂಮಿಕಾ ಎಸ್ ಕುಂದಗೋಡು, ಕು|| ದೀಪಿಕಾ ಎಸ್ ಕುಂದಗೋಡು, ಕು|| ಅನ್ವಿತಾ ಸಾವಿತ್ರಿ ಮತ್ತು ಕು|| ಅನುಷಾ ಸಾವಿತ್ರಿ ಇವರ ಮಧುರ ಧ್ವನಿಯಲ್ಲಿ ಹೊರಹೊಮ್ಮಿದೆ ಹಾಡುಗಳು : "ಶರಣು ಶರಣು ಸಿದ್ಧಿ ವಿನಾಯಕ" ಎಂಬ ವಿಘ್ನ ನಿವಾರಕನ ಕೃತಿಯಿಂದ ಕಾರ್ಯಕ್ರಮವನ್ನು ಆರಂಭಿಸಿ, "ಮಂತ್ರಾಲಯ ಮಂದಿರ", "ಕೋರಿ ಕರೆವೆ ಶ್ರೀ ಗುರು ರಾಘವೇಂದ್ರನೆ", "ರಥವನೇರಿದ ಚಂದ್ರ", "ದಾಸನಾಗಬೇಕು", "ವೀರ ಹನುಮ ಬಹು ಪರಾಕ್ರಮ", "ಪಾಲಿಸೆಮ್ಮ ಮುದ್ದು ಶಾರದೆ", "ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ", "ಆಡಪೋಗೋಣ ಬಾರೋ ರಂಗ", "ಕಮಲ ಕೋಮಲೆ", "ರಂಗನಾಥನ ನೋಡುವಾ ಬನ್ನಿ", "ಯಮನೆಲ್ಲಿ ಕಾಣೆನೆಂದು ಕೇಳಬೇಡ", "ಸಾಗಿ ಬಾರಯ್ಯಾ", "ಬಾರೋ ಮುರಾರಿ", "ಪಿಳ್ಳಂಗೋವಿಯ ಚೆಲ್ವ ಕೃಷ್ಣನ", "ಕೃಷ್ಣ ಬಾರೋ ಶ್ರೀ ಕೃಷ್ಣ ಬಾರೋ', "ರಾಮನಾಮ ಪಾಯಸಕ್ಕೆ ಕೃಷ್ಣನೆಂಬಸಕ್ಕರೆ" ಇನ್ನೂ ಹಲವಾರು ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ, "ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಳುಂಬ" ಎಂಬ ವಿಜಯದಾಸರು ಕೃತಿಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.


ಶ್ರೀ ರಾಜೇಂದ್ರ ಬೆಂಡೆ ಕೀಬೋರ್ಡ್ ವಾದನದಲ್ಲಿ, ಶ್ರೀ ಸುದರ್ಶನ್ ತಬಲಾ ವಾದನದಲ್ಲಿ ಸಾಥ್ ನೀಡಿದರು.

ಅನೇಕ ದಾಸಸಾಹಿತ್ಯಾಭಿಮಾನಿಗಳು, ದೇವಸ್ಥಾನದ ಪದಾಧಿಕಾರಿಗಳು ಹಾಜರಿದ್ದರು. ಈ ಕಾರ್ಯಕ್ರಮವನ್ನು ಶ್ರೀಮತಿ ಅಹಲ್ಯಾಬಾಯಿಯವರು ಆಯೋಜಿಸಿದ್ದರು.

Post a Comment

0Comments

Post a Comment (0)