ಭಾರತ್ ಎಲೆಕ್ಟ್ರಾನಿಕ್ಸ್ ಬೆಂಗಳೂರು ಸಂಕೀರ್ಣ ದಲ್ಲಿ ಅದ್ದೂರಿ ಸ್ವಾತಂತ್ರ್ಯದ ಅಮೃತಮಹೋತ್ಸವ

varthajala
0

ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನವರತ್ನ ಉದ್ಯಮ ,ಭಾರತ್ ಎಲೆಕ್ಟ್ರಾನಿಕ್ಸ್ ಬೆಂಗಳೂರು ಸಂಕೀರ್ಣದಲ್ಲಿ ಸ್ವಾತಂತ್ರದ ಅಮೃತಮಹೋತ್ಸವ ಪ್ರಯುಕ್ತ ಎಲ್ಲಾ ಉದ್ಯೋಗಿಗಳಿಗೆ ಹಾಗೂ ಪಾಲುದಾರರಿಗೆ 20000 ಧ್ವಜಗಳನ್ನು ವಿತರಿಸಲಾಗಿದೆ.










ಧ್ವಜವನ್ನು ಪಿ ಎಲ್ ನ ಕಾರ್ಖಾನೆಯ ಎಲ್ಲಾ ಉದ್ಯೋಗಿಗಳು ಪರಿಯೋಜನ ಅಭಿಯಂತರರು ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಯೊಬ್ಬರು ತಮ್ಮ ಮನೆಯ ಮೇಲೆ ಧ್ವಜವನ್ನು ಹಾರಿಸಿ ಹಾರಿಸಿ ಹಾಗೂ ಇದರ ಭಾವಚಿತ್ರವನ್ನು ಅಂತರ್ಜಾಲದಲ್ಲಿ ಹಾಕಲು ಕಡೆಯಿಂದ ವಿಶೇಷವಾಗಿ ಒಂದು ಅಂತರ್ಜಾಲವನ್ನು ರಚಿಸಲಾಗಿದೆ ಹಾಗೂ 2000 ರಕ್ತದ ಯೂನಿಟ್ ಸಂಗ್ರಹಿಸುವ ಸಲುವಾಗಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ 13 ಆಗಸ್ಟ್ 2022 ರಂದು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಈ ರಕ್ತದಾನ ಶಿಬಿರದಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಉದ್ಯೋಗಿಗಳ ಕಲ್ಯಾಣ ನಿಧಿಯ ನೇತೃತ್ವದಲ್ಲಿ ಎಲ್ಲಾ ಅಂಗಸಂಸ್ಥೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತವೆ.

 75 ಸ್ವಾತಂತ್ರ್ಯಯೋಧರ ಚಿತ್ರಸಹಿತ ಬ್ಯಾನರ್ ಗಳನ್ನು ಕಾರ್ಖಾನೆಯ ಎಲ್ಲ ಪ್ರಮುಖ ಸ್ಥಳಗಳಲ್ಲಿ ಹಾಗೂ ಭಾರತ್ ಎಲೆಕ್ಟ್ರಾನಿಕ್ಸ್ ಟೌನ್ ಶಿಪ್ ಎಲ್ಲಾ ಕಡೆ ಹಾಗೂ ಎಲ್ಲಾ ಕಟ್ಟಡಗಳ ಮೇಲೆ ಪ್ರದರ್ಶಿಸಲಾಗಿದೆ. ಪ್ರದರ್ಶಿಸಲಾಗಿದೆ. 15 ಆಗಸ್ಟ್  2022 ರಂದು ಬಿ  ಇ ಎಲ್ ಕಾರ್ಖಾನೆ ,ಶೈಕ್ಷಣಿಕ ಸಂಸ್ಥೆ ,ಕಾಲೋನಿಯಲ್ಲಿ ಸ್ವಾತಂತ್ರದ ಅಮೃತಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.ಡಿಜಿಟಲ್ ಮಾಧ್ಯಮದ ಮೂಲಕ ಸ್ವಾತಂತ್ರ್ಯ ಯೋಧರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ.

ಬಿಇ ಎಲ್ ನ ಪರಿವಾರ ವರ್ಗದವರು ತಮ್ಮ ತಮ್ಮ ಮನೆಯ ಮೇಲೆ ಧ್ವಜವನ್ನು ಹಾರಿಸುವ ಮೂಲಕ ದೇಶಪ್ರೇಮವನ್ನು ತೋರುತ್ತಿದ್ದಾರೆ .

Post a Comment

0Comments

Post a Comment (0)