" ಪರಿಸರ ಸ್ನೇಹಿತ ಗಣೇಶ "

varthajala
0 minute read
0


ನಾಡಿನ ಜನತೆಗೆ ಗೌರಿ - ಗಣೇಶ ಹಬ್ಬದ ಶುಭಾಶಯಗಳು.

ಸೋಮವಾರದಂದು ರೋಟರಿ ಕ್ಲಬ್ ನವರು ಬಿ ಇ ಎಲ್  ಇಂಗ್ಲಿಷ್ ಪ್ರೈಮರಿ   ಶಾಲೆಯಲ್ಲಿ ಮಕ್ಕಳಿಗೆ ಜೇಡಿಮಣ್ಣಿನಿಂದ ಗಣೇಶನ ಮೂರ್ತಿ ಮಾಡುವುದನ್ನು ಹೇಳಿಕೊಟ್ಟರು , 

' ಪರಿಸರ ಸ್ನೇಹಿ ಗಣೇಶನ ' ತಯಾರಿಕೆಯಲ್ಲಿ ಈ ಶಾಲಾ ವತಿಯಿಂದ ಸುಮಾರು 150 ಮಕ್ಕಳು ಶಾಲೆಯಲ್ಲಿಯೇ ಬಂದು ಪರಿಸರಸ್ನೇಹಿ ಗಣೇಶನನ್ನು ಮಾರ್ಗದರ್ಶಕರ ಸಹಾಯದಿಂದ ಮಣ್ಣು ಮತ್ತು ಬೀಜದಿಂದ ಗಣೇಶನನ್ನು ತಯಾರಿಸಿದರು.   ಇದರಿಂದ ಮಕ್ಕಳ ಕಲಿಕಾ ಸೃಜನಶೀಲತೆ ಹವ್ಯಾಸಗಳನ್ನು ಅಳವಡಿಸಿಕೊಳ್ಳಲು  ಉಪಯೋಗವಾಯ್ತು 

 ಮತ್ತು ತಯಾರಿಸಿದ ಗಣೇಶನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಲಾಗುವುದಿಲ್ಲ ಬದಲಾಗಿ ನೆಲದ ಮೇಲಿಟ್ಟು ನೀರನ್ನು ಅದರ ಮೇಲೆ ಹಾಕಲಾಗುವುದು ಅರ್ಧಗಂಟೆಯಲ್ಲಿ ಕರಗುವ ಈ ಮೂರ್ತಿಯಿಂದ ಬೀಜಗಳು ನೆಲವನ್ನು ಸೇರುತ್ತದೆ 10 -15 ದಿನಗಳಲ್ಲಿ ಬೀಜ ಮೊಳಕೆಯೊಡೆಯುತ್ತದೆ ಇದು  ಪ್ರಕೃತಿಯ ಜೊತೆಗೆ ಮನುಷ್ಯನಿಗೆ ನೆರವಾಗುತ್ತದೆ ಮತ್ತು ಪರಿಸರದ ಜಾಗೃತಿ ಮೂಡಿಸಲು ಸಹ ನಮಗೆ ನೆರವಾಗುತ್ತದೆ .

Post a Comment

0Comments

Post a Comment (0)
Today | 3, April 2025