ಶಿಕ್ಷಕರಾಗಿ ಸೇವೆ ಸಲ್ಲಿಸಿ ಅತ್ಯುನ್ನತ ಪದವಿ ಅಲಂಕರಿಸಿದವರ ಕಿರು ಮಾಹಿತಿ

varthajala
0

ಮೂಲತಃ ಶಿಕ್ಷಕರಾಗಿ ಸೇವೆ ಸಲ್ಲಿಸಿ ಅತ್ಯುನ್ನತ ಪದವಿ ಅಲಂಕರಿಸಿದವರ ಕಿರು ಮಾಹಿತಿ. 

ರಾಷ್ಟ ಮತ್ತು ರಾಜ್ಯದ ಶಿಕ್ಷಣ ಶಿಲ್ಪಿಗಳ ವಿವರ

ಮಾಜಿ ರಾಷ್ಟçಪತಿಗಳು ಹಾಗೂ ಶಿಕ್ಷಣ ತಜ್ಞರಾದ ದಿವಂಗತ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ರವರ ಸುಶಕ್ಷಿತವಾದ ರಾಷ್ಟç ನಿರ್ಮಾಣಕ್ಕೆ ಸಲ್ಲಿಸಿರುವ ಶಿಕ್ಷಣ ಸೇವೆಯನ್ನು ಸ್ಮರಿಸುವ ಸಲುವಾಗಿ ಅವರ ಜನ್ಮದಿನೋತ್ಸವವನ್ನು ಶಿಕ್ಷಕರ ದಿವಸವನ್ನಾಗಿ ಆಚರಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದ ಅಳಿವು ಉಳಿವು ಶಿಕ್ಷಕರ ಸೇವಾ ಮನೋಭಾವದ ಮೇಲೆ ನಿಂತಿದೆ. ಅವರು ಮಾಡುವ ಕೆಲಸವೇ ಭವ್ಯ ಭಾರತದ ಕನಸುಗಳನ್ನು ನನಸು ಮಾಡುವ ಹೊಣೆಗಾರಿಕೆ ಶಿಕ್ಷಕರ ಶಿಕ್ಷಣದ ಮೇಲಿದೆ. ಶಿಕ್ಷಕರಾಗಿ ಅತ್ಯುನ್ನತ ಸೇವೆಯನ್ನು ಸಲ್ಲಿಸಿ ರಾಷ್ಟçಪತಿಗಳ ಹುದ್ದೆಯನ್ನು ಅಲಂಕರಿಸಿದವರು 1) ಡಾ|| ಎಸ್. ರಾಧಾಕೃಷ್ಣನ್‌ರವರು, ತತ್ವಶಾಸ್ತç ಪ್ರಾಧ್ಯಾಪಕರು, 2) ಡಾ|| ಜಾಕೀರ್ ಹುಸೇನ್‌ರವರು, ಅರ್ಥಶಾಸ್ತç ನ್ಯಾಯಾಂಗ ಪ್ರಾಧ್ಯಾಪಕರು, ರಾಷ್ಟಿçಯ ಶಿಕ್ಷಣ ಸಮಿತಿ ಮೊದಲ ಅಧ್ಯಕ್ಷರು, ಆಲಿಗರ್ ವಿಶ್ವವಿದ್ಯಾನಿಲಯದ ಸಂಸ್ಥಾಪಕರು 3) ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರು, ವಿಜ್ಞಾನಿಗಳು  4) ಶ್ರೀಮತಿ ದ್ರೌಪದಿ ಮುರ್ಮರವರು, 15ನೇ ಈಗಿನ ರಾಷ್ಟçಪತಿಗಳು. 


ಭಾರತದ ಸಂವಿಧಾನಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್‌ರವರು ಅರ್ಥಶಾಸ್ತç ಕಾಲೇಜು ಪ್ರಾಧ್ಯಾಪಕರಾಗಿದ್ದರು. ಭಾರತದ ಪ್ರಧಾನಮಂತ್ರಿಗಳಾಗಿ ಸ್ಥಾನ ಅಲಂಕರಿಸಿದವರು ಶ್ರೀ ಪಿ.ವಿ. ನರಸಿಂಹರಾವ್‌ರವರು.  ಅರ್ಥಶಾಸ್ತç ಉಪನ್ಯಾಸಕರಾಗಿದ್ದರು. ಡಾ|| ಮನಮೋಹನ್‌ಸಿಂಗ್ ರವರು ಅರ್ಥಶಾಸ್ತç ಪ್ರಾಧ್ಯಾಪಕರಾಗಿದ್ದರು. 

ಮಹಾತ್ಮ ಗಾಂಧೀಜಿಯವರು ಶಿಕ್ಷಣ ಪದ್ಧತಿ, ಗ್ರಾಮೀಣ ಶಿಕ್ಷಣಕ್ಕಾಗಿ ಸ್ವಾವಲಂಬನೆಯ ಶಿಕ್ಷಣಕ್ಕಾಗಿ, ಉದ್ಯೋಗ ಆಧಾರಿತ ಶಿಕ್ಷಣಕ್ಕಾಗಿ ಮಹತ್ವ ನೀಡಿದವರು. ಶಿಕ್ಷಣ ಅಭಿವೃದ್ಧಿಗಾಗಿ ಶ್ರಮಿಸಿದವರು ಭಾರತರತ್ನ ಮಹರ್ಷಿ ಕರ್ವೆರವರು. ಮಹಿಳಾ ಶಿಕ್ಷಣಕ್ಕಾಗಿ ಮಹತ್ವ ನೀಡಿದವರು. ಭಾರತದ ಮೊದಲ ಮಹಿಳಾ ಶಿಕ್ಷಕಿ ಶ್ರೀಮತಿ ಸಾವಿತ್ರಿಬಾಯಿ ಪುಲೆರವರು, ಇವರ ಜನ್ಮದಿನವನ್ನು ಶಾಲೆಗಳಲ್ಲಿ ಗುರುಮಾತಾ ದಿನವನ್ನಾಗಿ ಜನವರಿ 3 ರಂದು ಆಚರಿಸುತ್ತಾರೆ. ಭಾರತದ ಪ್ರಥಮ ಶಿಕ್ಷಣ ಸಚಿವರು ಡಾ|| ಮೌಲಾನಾ ಅಬ್ದುಲ್ ಕಲಾಂ ಆಜಾದರವರು. ಇವರ ಜನ್ಮದಿನವನ್ನು ರಾಷ್ಟಿçÃಯ ಶಿಕ್ಷಣ ದಿನ ಎಂದು ಘೋಷಿಸಲಾಗಿದೆ. ಪಂಡಿತ್ ಮದನ ಮೋಹನ ಮಾಳವೀಯರವರು, ಏಷ್ಯಾದ ಅತ್ಯಂತ ದೊಡ್ಡ ವಸತಿ ವಿಶ್ವವಿದ್ಯಾಲಯ ಬನಾರಸ್ ವಿಶ್ವವಿದ್ಯಾಲಯದ ಸ್ಥಾಪಕರು. ಮಹಾತ್ಮ ಜ್ಯೋತಿಬಾಪುಲೆ, ಶಿಕ್ಷಣದ ಅಭಿವೃದ್ಧಿಗಾಗಿ ಶ್ರಮಿಸಿದವರು. ಶ್ರೀ ರಾಜಾರಾಮ್ ಮೋಹನ್‌ರಾಯ್‌ರವರು, ಶಿಕ್ಷಣದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಸಬಲೀಕರಣಕ್ಕಾಗಿ ಶ್ರಮಿಸಿದವರು. ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ರವರು ಮಾತೃಭಾಷೆ, ಕನ್ನಡ ಶಿಕ್ಷಣ, ಉಚಿತ ಕನ್ನಡ ಶಿಕ್ಷಣ ಶಾಲಾಕಾಲೇಜುಗಳ ಸ್ಥಾಪನೆಗಳ ಮೂಲಕ ಶ್ರಮಿಸಿದವರು. ಡಾ|| ಕಸ್ತೂರಿ ರಂಗನ್‌ರವರು, ಭಾರತ ಸರ್ಕಾರದ ಶಿಕ್ಷಣ ಸುಧಾರಣೆ ಆಯೋಗದ ಅಧ್ಯಕ್ಷರಾಗಿ ರಾಷ್ಟಿçÃಯ ಶಿಕ್ಷಣ ನೀತಿ 2020 ಜಾರಿಗೆ ತರುವುದರಲ್ಲಿ ಯಶಸ್ವಿಯಾದವರು. 

ನೋಬಲ್ ಪುರಸ್ಕೃತ ಶಿಕ್ಷಕರು

ಶ್ರೀ ರವೀಂದ್ರನಾಥ ಟ್ಯಾಗೂರ್‌ರವರು, ಭಾರತದ ಮಹಾನ್ ಕವಿ ಮತ್ತು ಭಾರತದ ರಾಷ್ಟçಗೀತೆಯನ್ನು ರಚಿಸಿದವರು. ಕಲ್ಕತ್ತಾದಲ್ಲಿ 1907 ರಲ್ಲಿ ತಮ್ಮದೇ ಆದ ಶೈಕ್ಷಣಿಕ ಶಾಲೆ ವಾತಾವರಣವನ್ನು ನಿರ್ಮಿಸಿ ಶಾಂತಿನಿಕೇತನ ಪಶ್ಚಿಮ ಬಂಗಾಳದ ಬೋಲ್‌ಪುರ್‌ನಲ್ಲಿ ಸ್ಥಾಪಿಸಿದರು. ಶಿಕ್ಷಣದ ದಿಕ್ಕನ್ನು ಬದಲಿಸಿ ವಿಶ್ವಭಾರತಿ ಶಾಲೆ ಪ್ರಾರಂಭಿಸಿದರು. ಜೀವನ ಮಾರ್ಗದರ್ಶಿಯಾಗಬಲ್ಲ ನಾಟಕ, ಚಿತ್ರಕಲೆ, ಸಂಗೀತ, ಸಾಹಿತ್ಯ, ಶಿಲ್ಪಕಲೆ, ನೃತ್ಯ ಇತ್ಯಾದಿ ಶಿಕ್ಷಣವನ್ನು ಆಧುನಿಕವಾಗಿ ಕಲಿಸಿ ಮಾರ್ಗದರ್ಶನ ಮಾಡಿರುತ್ತಾರೆ. ಡಾ|| ಸಿ.ವಿ. ರಾಮನ್‌ರವರು ಶಿಕ್ಷಕರಾಗಿ, ವಿಜ್ಞಾನ ಸಂಶೋಧಕರಾಗಿ ರಾಮನ್ ಎಫೆಕ್ಟ್ಗೆ 1930 ರಲ್ಲಿ ನೋಬಲ್ ಪ್ರಶಸ್ತಿ ಪಡೆದವರು. ಜೀವಿತಾವಧಿ ವಿಜ್ಞಾನದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಡಾ|| ಹರ್‌ಗೋವಿಂದ ಖುರಾನರವರು, ವಿಜ್ಞಾನದ ಜೊತೆಗೆ ಪ್ರಾಧ್ಯಾಪಕರಾಗಿ ನೋಬಲ್ ಪ್ರಶಸ್ತಿಯನ್ನು 1968 ರಲ್ಲಿ ಗಳಿಸಿದವರು. ಡಾ|| ಸುಬ್ರಹ್ಮಣ್ಯ ಚಂದ್ರಶೇಖರ್‌ರವರು, ಸರ್ ಸಿ.ವಿ. ರಾಮನ್‌ರವರ ಸೋದರ ಪುತ್ರರು. ನಕ್ಷತ್ರಗಳು ಹಾಗೂ ಅವುಗಳ ಬದಲಾವಣೆಗಾಗಿ 1983 ರಲ್ಲಿ ನೋಬಲ್ ಪ್ರಶಸ್ತಿ ಪಡೆದವರು. ಶ್ರೀ ಅಮರ್ತ್ಯಸೇನ್‌ರವರು, ವಿಶ್ವವಿಖ್ಯಾತ ಅರ್ಥಶಾಸ್ತçಜ್ಞರು, 1998 ರಲ್ಲಿ ನೋಬಲ್ ಪುರಸ್ಕೃತರು. ಸುರಕ್ಷತೆ, ಆರ್ಥಿಕತೆಗೆ ಇವರು ಸಲಹೆ ನೀಡುತ್ತಾ ಬಂದಿರುತ್ತಾರೆ. ಶ್ರೀ ವಿ.ಎಸ್. ನೈಪಾಲ್‌ರವರು, ಸಾಹಿತ್ಯಕ್ಕಾಗಿ ನೋಬಲ್ ಪ್ರಶಸ್ತಿ ಪಡೆದವರು.  ಶ್ರೀ ಪಚೋರಿರವರು, ರಾಷ್ಟಿçಯ ಹವಾಮಾನ ಬದಲಾವಣೆಗೆ 2007 ರಲ್ಲಿ ನೋಬಲ್ ಪ್ರಶಸ್ತಿ ಪಡೆದವರು. ಶ್ರೀ ವೆಂಕಟರಾಮಕೃಷ್ಣನ್‌ರವರು, ಹಿರಿಯ ವಿಜ್ಞಾನಿ, ಭೌತಶಾಸ್ತçದಲ್ಲಿ ನೋಬಲ್ ಪುರಸ್ಕೃತರು. 

ಕರ್ನಾಟಕ ರಾಜ್ಯದ ಶಿಕ್ಷಣ ಶಿಲ್ಪಿಗಳು

ಜ್ಞಾನಪೀಠ ಪುರಸ್ಕೃತರಾಗಿ ಶಿಕ್ಷಣದಲ್ಲಿ ಸೇವೆ ಸಲ್ಲಿಸಿದವರು ರಾಷ್ಟçಕವಿ ಡಾ|| ಕೆ.ವಿ. ಪುಟ್ಟಪ್ಪರವರು (ಕುವೆಂಪುರವರು). ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದವರು. ಡಾ|| ಚಂದ್ರಶೇಖರ ಕಂಬಾರರವರು, ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಉಪಕುಲಪತಿಗಳಾಗಿದ್ದವರು. ಡಾ|| ಯು.ಆರ್. ಅನಂತಮೂರ್ತಿರವರು, ಆಂಗ್ಲಭಾಷೆ ಪ್ರಾಧ್ಯಾಪಕರು. ದ.ರಾ. ಬೇಂದ್ರೆರವರು, ಕಾಲೇಜು ಕನ್ನಡದ ಪ್ರಾಧ್ಯಾಪಕರಾಗಿದ್ದರು. ಡಾ|| ಜಿ.ಎಸ್. ಶಿವರುದ್ರಪ್ಪರವರು, ರಾಷ್ಟçಕವಿಗಳಾಗಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಶ್ರೀ ಗಿರೀಶ್ ಕಾರ್ನಾಡ್‌ರವರು, ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದ ಸಂದರ್ಶನ ಪ್ರಾಧ್ಯಾಪಕರು. 

ಡಾ|| ಹೆಚ್. ನರಸಿಂಹಯ್ಯರವರು, ವಿಜ್ಞಾನ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳು. ದೇ. ಜವರೇಗೌಡರವರು, ಕನ್ನಡ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು. ಶ್ರೀ ಜಿ.ಪಿ. ರಾಜರತ್ನಂರವರು, ಕನ್ನಡ ಶಾಲಾ ಶಿಕ್ಷಕರಾಗಿದ್ದರು. ಶ್ರೀ ಪಿ. ಲಂಕೇಶ್‌ರವರು, ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿದ್ದು. ಶ್ರೀ ಎಂ. ಗೋಪಾಲಕೃಷ್ಣ ಅಡಿಗರವರು, ಕಾಲೇಜು ಕನ್ನಡ ಪ್ರಾಧ್ಯಾಪಕರು. ಶ್ರೀ ಹೆಚ್.ಎಸ್. ದೊರೈಸ್ವಾಮಿರವರು, ಹಿರಿಯ ಸ್ವಾತಂತ್ರö್ಯ ಹೋರಾಟಗಾರರು, ಪ್ರೌಢಶಾಲಾ ಶಿಕ್ಷಕರು. ಶ್ರೀ ವಿ.ಕೆ.ಎಸ್ ಅಯ್ಯಂಗಾರ್‌ರವರು, ಯೋಗ ಶಿಕ್ಷಕರು, ಶ್ರೀ ಎಂ.ಪಿ.ಎಲ್. ಶಾಸ್ತಿçರವರು, ಶ್ರೀ ಹಂ.ಪ. ನಾಗರಾಜಯ್ಯ ಮತ್ತು ಶ್ರೀಮತಿ ಕಮಲಾ ಹಂಪನಾ ದಂಪತಿಗಳು ಕಾಲೇಜು ಪ್ರಾಧ್ಯಾಪಕರಾಗಿದ್ದವರು. 

ವಚನ ಸಾಹಿತ್ಯ ಮತ್ತು ದಾಸಸಾಹಿತ್ಯದ ನೂರಾರು ಗಣ್ಯರಿಂದ ಭಾಷೆ ಅಭಿವೃದ್ಧಿಯಾಗಿದೆ. ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವಿದೆ. ಅನೇಕ ಮಠಗಳು, ವೇದ ಮತ್ತು ಆಧುನಿಕ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಹಿಂದಿ ಭಾಷೆಗಾಗಿ ಮೈಸೂರು ಹಿಂದಿ ಪ್ರಚಾರ ಪರಿಷತ್, ಕರ್ನಾಟಕ್ ಹಿಂದಿ ಪ್ರಚಾರ ಸಮಿತಿ, ಕರ್ನಾಟಕ ಮಹಿಳಾ ಹಿಂದಿ ಸೇವಾ ಸಮಿತಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಮಿತಿ. ಕನ್ನಡಕ್ಕಾಗಿ ಏಕೈಕ ಪ್ರಾತಿನಿಧ್ಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಪದವಿ ತನಕ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡಿ ಶಿಕ್ಷಣದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಡಾ|| ದೊಡ್ಡರಂಗೇಗೌಡರು, ಡಾ|| ಸಾ.ಶಿ. ಮರುಳಯ್ಯರವರು, ಪ್ರೊ|| ಅ.ರಾ. ಮಿತ್ರರವರು, ಡಾ|| ಜಿ. ವೆಂಕಟಸುಬ್ಬಯ್ಯರವರು, ಪ್ರೊ|| ರೋಹಿಡ್‌ಕರ್‌ರವರು, ಪಿ.ಇ.ಎಸ್ ವಿದ್ಯಾಸಂಸ್ಥೆಯ ಡಾ|| ದೊರೆಸ್ವಾಮಿರವರು, ಪ್ರೊ|| ಬರಗೂರು ರಾಮಚಂದ್ರಪ್ಪರವರು ಶಿಕ್ಷಣಕ್ಕಾಗಿ ಅನುಪಮ ಸೇವೆ ಸಲ್ಲಿಸಿ ಖ್ಯಾತಿಯನ್ನು ಪಡೆದಿರುತ್ತಾರೆ. ಈ ಶಿಲ್ಪಿಗಳ ಸೇವೆ ಸದಾ ಸ್ಮರಣೀಯವಾದದ್ದು. ಇಂದಿನ ಶಿಕ್ಷಕರಿಗೆ, ಮುಂಬರುವ ಶಿಕ್ಷಕರಿಗೆ ದಾರಿದೀಪವಾಗುತ್ತದೆ. 

ಕರ್ನಾಟಕ ಸರ್ಕಾರದ ಈಗಿನ ಶಿಕ್ಷಣ ಸಚಿವರು

1) ಉನ್ನತ ಶಿಕ್ಷಣ    -  ಡಾ|| ಸಿ.ಎನ್. ಅಶ್ವತ್ಥನಾರಾಯಣರವರು

2) ವೈದ್ಯಕೀಯ ಶಿಕ್ಷಣ -  ಡಾ|| ಎಸ್. ಸುಧಾಕರ್‌ರವರು

3) ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ -  ಮಾನ್ಯ ಸಿ. ನಾಗೇಶ್‌ರವರು

ಶಿಕ್ಷಣಕ್ಕೆ ಸಂಬ0ಧಿಸಿದ ಪ್ರಮುಖ ದಿನಾಚರಣೆಗಳು

1) ಶ್ರೀ ವ್ಯಾಸ ಗುರುಪೂರ್ಣಿಮ

2) ಸೆಪ್ಟೆಂಬರ್ 5 ರಾಷ್ಟಿಯ ಶಿಕ್ಷಕರ ದಿನಾಚರಣೆ ರಾಧಾಕೃಷ್ಣನ್ ಜನ್ಮದಿನ

3) ಭಾರತದ ಪ್ರಥಮ ಶಿಕ್ಷಣ ಮಂತ್ರಿ ನೆನಪಿನಲ್ಲಿ ರಾಷ್ಟಿಯ ಶಿಕ್ಷಕ ದಿನ ನವೆಂಬರ್ 11.

4) ಮೌಲಾನ ಅಬ್ದುಲ್ ಕಲಾಂ ಹಜಾದ್

5) ಅಕ್ಟೋಬರ್ 5 ಅಂತರರಾಷ್ಟಿಯ ಶಿಕ್ಷಕ ದಿನಾಚರಣೆ

6) ಸಾವಿತ್ರಿಬಾಯಿಪುಲೆ ಮಹಿಳಾ ಶಿಕ್ಷಕ ದಿನಾಚರಣೆ

7) ಸೆಪ್ಟೆಂಬರ್ 8 ವಿಶ್ವ ಸಾಕ್ಷರತಾ ದಿನಾಚರಣೆ

8) ಸೆಪ್ಟೆಂಬರ್ ಮೊದಲ ವಾರ ಭಾಷಾ ಸೌಹಾರ್ದ ದಿನ

9) ನವೆಂಬರ್ 14 ರಾಷ್ಟಿಯ ಮಕ್ಕಳ ದಿನಾಚರಣೆ (ನೆಹರೂ ಜನ್ಮದಿನ)

10) ಡಿಸೆಂಬರ್ 22 ರಾಷ್ಟಿಯ ಗಣಿತ ದಿನ

11) ಫೆಬ್ರವರಿ 28 ರಾಷ್ಟಿಯ ವಿಜ್ಞಾನ ದಿನ (ಸಿ.ವಿ. ರಾಮನ್ ಜನ್ಮದಿನ)

12) ಜೂನ್ 21 ಮಕ್ಕಳ ಹಕ್ಕುಗಳ ದಿನ

13) ಜೂನ್ 9 ರಾಷ್ಟಿಯ ವಿದ್ಯಾರ್ಥಿ ದಿನ

14) ಏಪ್ರಿಲ್ 23 ವಿಶ್ವ ಪುಸ್ತಕ ದಿನ

15) ಜನವರಿ 10 ವಿಶ್ವ ಹಿಂದಿ ದಿನ

16) ಸೆಪ್ಟೆಂಬರ್ 14 ರಾಷ್ಟಿಯ ಹಿಂದಿ ದಿವಸ

17) ಮೇ ರಾಷ್ಟಿಯ ತಂತ್ರಜ್ಞಾನ ದಿನ

18) ಜೂನ್ 21 ವಿಶ್ವ ಯೋಗ ದಿನ

19) ಆಗಸ್ಟ್ 29 ರಾಷ್ಟಿಯ ಕ್ರೀಡಾದಿನ

20) ಫೆಬ್ರವರಿ 23 ವಿಶ್ವ ಮಾತೃಭಾಷಾ ದಿನ

21) ಏಪ್ರಿಲ್ 6 ಅಂತರಾಷ್ಟಿಯ ಕ್ರೀಡಾದಿನ

22) ಏಪ್ರಿಲ್ 23 ವಿಶ್ವ ಆಂಗ್ಲ ಭಾಷಾ ದಿನ

23) ಸಂಸ್ಕೃತ ದಿನ

24) ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನ

ಕೆ.ಎಸ್. ವಿಜಯಕುಮಾರ್

ನಂ. 178, ಎಸ್.ಎಮ್.ಐ.ಜಿ.ಬಿ, 12ನೇ ಬ್ಲಾಕ್, 1ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, 

ಕೆ.ಹೆಚ್.ಬಿ ಕಾಲೋನಿ, ಯಲಹಂಕ ಉಪನಗರ, ಬೆಂಗಳೂರು-560064 ಮೊ: 9243192802

Post a Comment

0Comments

Post a Comment (0)