ಬೆಂಗಳೂರು, ಆಗಸ್ಟ್ 26 (ಕರ್ನಾಟಕ ವಾರ್ತೆ) : 2018, 2019, 2020 ಹಾಗೂ 2021ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ “Direct Benefit Transfer (DBT) Programme”ನ ಅಡಿಯಲ್ಲಿ ಎಂ.ಹೆಚ್.ಆರ್.ಡಿ. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಅವರ 1ನೇ, 2ನೇ, 3ನೇ ಹಾಗೂ 4ನೇ ನವೀಕರಣಕ್ಕೆ ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗಿದೆ.
ಕೇಂದ್ರ ಸರ್ಕಾರದ ವತಿಯಿಂದ ವೆಬ್‍ಸೈಟ್ www.scholarships.gov.ನ National e-Scholarship Portal ನಲ್ಲಿ ಹೊಸ ತಂತ್ರಾಂಶವನ್ನು ಅಳವಡಿಸಲಾಗಿದ್ದು, 2022ನೇ ಸಾಲಿನಲ್ಲಿ ಎಂ.ಹೆಚ್.ಆರ್.ಡಿ. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ನವೀಕರಣಗಳ ನಿಮಿತ್ತ ಈ ಪೋರ್ಟಲ್‍ನಲ್ಲಿಯೇ ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಬೇಕಿರುತ್ತದೆ. ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಸೆಪ್ಟೆಂಬರ್ 31, 2022ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.
ಇಲಾಖಾ ವೆಬ್‍ಸೈಟ್‍ನಲ್ಲಿಯೂ ಕೂಡ 2018, 2019, 2020 ಹಾಗೂ 2021ನೇ ಸಾಲಿನಲ್ಲಿ ಆಯ್ಕೆಗೊಂಡಿರುವ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ನವೀಕರಣಗಳಿಗೆ ಅರ್ಜಿ ಸಲ್ಲಿಸುವ ಕುರಿತು ಸುತ್ತೋಲೆಯನ್ನು ಅಳವಡಿಸಲಾಗಿದೆ.
ವೆಬ್‍ಸೈಟ್ : http://pue.karnataka.gov.in =>Scholarship=>MHRD Scholarship=> MHRD Scholarship RENEWAL. ವಿದ್ಯಾರ್ಥಿಗಳು ಈ ವೆಬ್‍ಸೈಟನ್ನು ಸಂಪರ್ಕಿಸಿ ತಮಗೆ ಸಂಬಂಧಪಟ್ಟ ಮಾಹಿತಿಯನ್ನು ಪಡೆದು ಸೆಪ್ಟೆಂಬರ್ 31, 2022ರೊಳಗೆ ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಪ್ರಥಮ ನವೀಕರಣ ಹಾಗೂ ಇನ್ನುಳಿದ ಮುಂದಿನ ನವೀಕರಣಗಳಿಗೆ ಆಧಾರ್ ಸಂಖ್ಯೆಯನ್ನು ಪಡೆದು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿರುವುದು. ಪ್ರಾಚಾರ್ಯರುಗಳು / ಸಂಸ್ಥೆಯವರು ಅರ್ಹ ವಿದ್ಯಾರ್ಥಿಗಳ ಅರ್ಜಿಗಳನ್ನು ಪರಿಶೀಲಿಸಿ ಅನುಮೋದಿಸುವ / ತಿರಸ್ಕರಿಸುವ ಕಾರ್ಯವನ್ನು ತಮ್ಮ ಹಂತದಲ್ಲಿಯೇ ನಿರ್ವಹಿಸಬೇಕಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.