ಶ್ರೀ ರಾಘವೇಂದ್ರ ಗುರುಸಾರ್ವಭೌಮರ 351ನೇ ಆರಾಧನಾ ಮಹೋತ್ಸವದ ಉದ್ಘಾಟನಾ ದಿನವಾದ ಆಗಸ್ಟ್ 10, ಬುಧವಾರ ಸಂಜೆ 5-15ಕ್ಕೆ ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ
ಬಾಲಪ್ರತಿಭೆಗಳಾದ ಕು|| ಅನ್ವಿತಾ ಸಾವಿತ್ರಿ, ಕು|| ಭೂಮಿಕಾ ಎಸ್. ಕುಂದಗೋಡು ಮತ್ತು ಕು|| ನಿಶಿತಾ ಪ್ರಸಾದ್ ಇವರುಗಳು, "ಹರಿದಾಸರು ಕಂಡ ಶ್ರೀ ರಾಘವೇಂದ್ರ" ಎಂಬ ಶೀರ್ಷಿಕೆಯಲ್ಲಿ ಅಪರೋಕ್ಷ ಜ್ಞಾನಿಗಳು ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಕುರಿತು ರಚಿಸಿದ ಸುಮಾರು 15 ಕೃತಿಗಳನ್ನು ನಿರೂಪಣೆ ಸಹಿತ ಮಕ್ಕಳು ಹಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಿ, ಗುರುಗಳ ದರ್ಶನ ಪಡೆದು, ಮಕ್ಕಳು ಹಾಡುವ ಹಾಡುಗಳನ್ನು ಆಲಿಸಿ, ಅವರನ್ನು ಹಾರೈಸಿ, ಆಶೀರ್ವಾದಿಸಬೇಕೆಂದು ದೇಸಾಯಿ ಸುಧೀಂದ್ರ ಅವರು ವಿನಂತಿಸಿದ್ದಾರೆ. ಈ ಕಾರ್ಯಕ್ರಮವು ದಾಸವಾಣಿ ಫೇಸ್ಬುಕ್ ಗ್ರೂಪ್ ನಲ್ಲಿ ನೇರಪ್ರಸಾರ ಇರುತ್ತದೆ.