ಶ್ರೀ ರಾಘವೇಂದ್ರ ತೀರ್ಥರ ಆರಾಧನೆ ಪ್ರಯುಕ್ತ... ಪ್ರಶ್ನೋತ್ತರ???🚩

varthajala
0

🥀1.  ರಾಯರ ಮೂಲ ರೂಪ ಯಾವುದು ?

ಉತ್ತರ:  ಶಂಕುಕರ್ಣ✨


🥀2.ರಾಯರ ಮೊದಲನೇ ಅವತಾರ ಯಾವುದು ? ಉತ್ತರ: ಪ್ರಹ್ಲಾದವತಾರ✨

🥀3. ರಾಯರ ಎರಡನೇ ಅವತಾರ ಯಾವುದು ? ಉತ್ತರ: ಬ್ಲಾಹೀಕ✨

🥀4.ರಾಯರ ಮೊದಲನೇ ಅವತಾರದಲ್ಲಿ ಪರಮಾತ್ಮನ ಯಾವ ರೂಪವ ಕಂಡರು ? 

ಉತ್ತರ: ನರಸಿಂಹಾವತಾರ✨

🥀5.ರಾಯರ ಎರಡನೇ ಅವತಾರದಲ್ಲಿ ವಾಯುದೇವರ ಯಾವ ರೂಪ ಕಂಡರು ?

ಉತ್ತರ: ಭೀಮಾವತಾರ✨

🥀6. ರಾಯರ ಮೂರನೇ ಅವತಾರ ಯಾವುದು ? 

ಉತ್ತರ: ವ್ಯಾಸರಾಯರು✨

🥀7. ರಾಯರ ತಂದೆ ಯಾರು ?

ಉತ್ತರ: ವೀಣಾ ತಿಮ್ಮಣ್ಣ ಭಟ್ಟರು✨

🥀8. ರಾಯರ ಜನ್ಮನಾಮವೇನು ?

ಉತ್ತರ: ವೆಂಕಟನಾಥ✨

🥀9. ರಾಯರ ಗೋತ್ರ ಯಾವುದು ? 

ಉತ್ತರ: ಗೌತಮ ಗೋತ್ರ✨

🥀10. ರಾಯರ‌ ತಂದೆತಾಯಿ ಯಾರ‌‌ ಸೇವೆಯಿಂದ ರಾಯರನ್ನು ಪಡೆದರು ?

ಉತ್ತರ: ತಿರುಪತಿ ತಿಮ್ಮಪ್ಪನ ಸೇವೆಯಿಂದ✨

🥀11. ರಾಯರ ಜನ್ಮಸ್ಥಳ ಯಾವುದು ? 

ಉತ್ತರ: ಕುಂಭಕೋಣಂ ಹತ್ತಿರ ಭುವನಗಿರಿಯಲ್ಲಿ✨

🥀12. ರಾಯರ ವೃಂದಾವನ ಎಲ್ಲಿದೆ ?

ಉತ್ತರ: ಮಂತ್ರಾಲಯದಲ್ಲಿ✨

🥀13. ರಾಯರ ಮಠದ ಪ್ರಸ್ತುತ ಪೀಠಾಧಿಪತಿಗಳು ಯಾರು ?

ಉತ್ತರ: ಶ್ರೀ ಸುಬುದೇಂದ್ರ ತೀರ್ಥರು✨

🥀14. ರಾಯರ ಜನ್ಮ ನಕ್ಷತ್ರ ಯಾವುದು ? 

ಉತ್ತರ: ಮೃಗಶಿರ ✨

🥀15. ರಾಯರ ಜನ್ಮ ದಿನ ಎಂದು ?

ಉತ್ತರ: ಫಾಲ್ಗುಣ ಶುದ್ಧ ಸಪ್ತಮಿ ✨

🥀16. ರಾಯರ ಆಶ್ರಮ ದಿನ ಎಂದು ?

ಉತ್ತರ: ಫಾಲ್ಗುಣ ಶುದ್ಧ ಬಿದಿಗೆ✨

🥀17. ರಾಯರ ವೃಂದಾವನ ದಿನ ಎಂದು ? 

ಉತ್ತರ: ಶ್ರಾವಣ ಬಹುಳ ಬಿದಿಗೆ ಶುಕ್ರವಾರ ✨

🥀18.ರಾಯರ ಗುರುಕುಲ ವಾಸ ಎಲ್ಲಿ ?

ಉತ್ತರ: ಕಾವೇರಿ ಪಟ್ಟನಂ✨

🥀19. ರಾಯರ ಆಶ್ರಮ ಸ್ಥಳ ಎಲ್ಲಿ ?

ಉತ್ತರ: ತಂಜಾವೂರು✨ 

🥀20. ರಾಯರು ಯಾವ ವಾದನದಲ್ಲಿ ಕುಶಲರಾಗಿದ್ದರು ? 

ಉತ್ತರ: ವೀಣಾವಾದನದಲ್ಲಿ✨

🥀21. ರಾಯರು ಉಪಯೋಗಿಸುತ್ತಿದ್ದ ವಾದನದ ಹೆಸರು ?

ಉತ್ತರ: ವೀಣೆ✨

🥀22. ರಾಯರ ಆರಂಭಿಕ ವಿದ್ಯಾ ಗುರುಗಳು ಯಾರು ?

ಉತ್ತರ: ರಾಯರ ಅಣ್ಣನಾದ ಗುರುರಾಜಾಚಾರ್ಯರಿಂದ ಹಾಗೂ ಭಾವನವರಾದ ಲಕ್ಷ್ಮೀನರಸಿಂಹಾಚಾರ್ಯರ ಬಳಿ✨

🥀23. ರಾಯರ ಹೆಚ್ಚಿನ ವಿದ್ಯಾಭ್ಯಾಸ ಯಾರಲ್ಲಿ ?

ಉತ್ತರ: ವಿಜಯೀಂದ್ರತೀರ್ಥರ ಹಾಗೂ ಸುಧೀಂದ್ರ ತೀರ್ಥರ ಬಳಿ.✨

🥀24. ರಾಯರ ಆಶ್ರಮ ಗುರುಗಳು ಯಾರು ? 

ಉತ್ತರ: ಸುಧೀಂದ್ರ ತೀರ್ಥರು.✨

🥀25. ರಾಯರ ಆಶ್ರಮ ನಾಮವೇನು ? 

ಉತ್ತರ: ರಾಘವೇಂದ್ರ ತೀರ್ಥರು✨

🥀26. ರಾಯರ ಆಶ್ರಮ ಶಿಷ್ಯರಾರು ?

ಉತ್ತರ: ಯೋಗೀಂದ್ರತೀರ್ಥರು✨

🥀27. ರಾಯರ ಪರಿಮಳ ಗ್ರಂಥ ಯಾವುದರ ವ್ಯಾಖ್ಯಾನ ?

ಉತ್ತರ: ಶ್ರೀಮನ್ಯಾಯಸುಧಾ✨ 

🥀28. ರಾಮಾಯಣದ ಸಂಕ್ಷಿಪ್ತ ಗ್ರಂಥ ಯಾವುದು ?

ಉತ್ತರ: ರಾಮಚಾರಿತ್ರ್ಯ ಮಂಜರಿ✨ 

🥀30. ಕೃಷ್ಣಾವತಾರದ ಬಗ್ಗೆ ರಚಿಸಿದ ಕೃತಿ ?

ಉತ್ತರ: ಕೃಷ್ಣ ಚಾರಿತ್ರ್ಯ ಮಂಜರಿ ✨

🥀31. ರಾಯರ ಗ್ರಂಥಗಳನ್ನು ಏನೆಂದು ಕರೆಯುತ್ತಾರೆ ?

ಉತ್ತರ : ಭಾವದೀಪ✨

🥀32. ರಾಯರ ಅಂಕಿತವೇನು ? 

ಉತ್ತರ: ಧೀರ ವೇಣುಗೋಪಾಲ.✨

🥀33. ನದಿಗಳ ತಾರತಮ್ಯ ಬಗ್ಗೆ ರಾಯರ ಸ್ತೋತ್ರ ?

ಉತ್ತರ: ನದಿ ತಾರತಮ್ಯ ಸ್ತೋತ್ರ ✨

🥀34. ಉಪನಿಷತ್ತುಗಳಿಗೆ ರಾಯರು ರಚಿಸಿದ ವ್ಯಾಖ್ಯಾನವನ್ನು ಏನೆನ್ನುತ್ತಾರೆ ?

ಉತ್ತರ: ಖಂಡಾರ್ದ✨

🥀35. ರಾಯರು ಪೂರ್ವಾಶ್ರಮದಲ್ಲಿ ರಚಿಸಿದ ಗ್ರಂಥ ?

ಉತ್ತರ :  ಪ್ರಮೇಯ ನವಮಾಲಿಕಾ

(ಅಣುಮಧ್ವವಿಜಯ)✨ 

🥀36. ರಾಯರ ಅಷ್ಟೋತ್ತರ ರಚಿಸಿದವರಾರು ?

ಉತ್ತರ: ಅಪ್ಪಣ್ಣಾಚಾರ್ಯರು.✨

🥀37. ಮಂತ್ರಾಲಯ ಗ್ರಾಮದೇವತೆ ಯಾರು?

ಉತ್ತರ:  ಶ್ರೀ ಮಂಚಾಲಮ್ಮನವರು✨

🥀38. "ಅಣುಭಾಷ್ಯ" ಗ್ರಂಥಕ್ಕೆ ರಾಯರ ವ್ಯಾಖ್ಯಾನ ಯಾವುದು ?

ಉತ್ತರ: ತತ್ವಮಂಜರಿ✨

🥀39. ರಾಯರ ಅಷ್ಟೋತ್ತರಕ್ಕೆ ರಾಯರು ಕಡೆಯಲ್ಲಿ ಹೇಳಿದ ವಾಕ್ಯ ಯಾವುದು ? 

ಉತ್ತರ: ಹಯಸ್ಯ ಸಾಕ್ಷಿ✨

🥀40. ಮಂಚಾಲೆ ಯಾವ ಕ್ಷೇತ್ರವೆಂದು ಪ್ರಸಿದ್ಧಿ ? ಪ್ರಹ್ಲಾದರಾಜರು ತಪ್ಪಸು ಮಾಡಿದ ಸ್ಥಳ✨

41. ರಾಯರು ರಚಿಸಿದ ಮಹಾಭಾರತ ಸಂಬಂಧಿ ಗ್ರಂಥ ಯಾವುದು?

ಉತ್ತರ: ಭಾವಸಂಗ್ರಹ✨

🥀42.ವ್ಯಾ‌ಸರಾಜರ ತಾತ್ಪರ್ಯ ಚಂದ್ರಿಕಾ ಗ್ರಂಥದ ವ್ಯಾಖ್ಯಾನ ಯಾವುದು ?

ಉತ್ತರ:  ಚಂದ್ರಿಕಾ ಪ್ರಕಾಶ✨ 

||ಶ್ರೀ ಗುರು ರಾಘವೇಂದ್ರಾಯ ನಮಃ||

||ಶ್ರೀ ಕೃಷ್ಣಾರ್ಪಣಮಸ್ತು||

Post a Comment

0Comments

Post a Comment (0)