ಬೆಂಗಳೂರು, ಆಗಸ್ಟ್ 26 (ಕರ್ನಾಟಕ ವಾರ್ತೆ) : ಕರ್ನಾಟಕ ವಿಧಾನಸಭೆಯ ಸಭಾದ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆಗಸ್ಟ್ 22 ರಿಂದ 26 ರವರೆಗೆ ಕೆನಡಾ ದೇಶದ ಹೆಲಿಪ್ಯಾಕ್ಸ್‍ನಲ್ಲಿ ನಡೆಯುತ್ತಿರುವ 65ನೇ ಕಾಮನ್‍ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ಕಾಮನ್‍ವೆಲ್ತ್ ಸಂಸದೀಯ ಸಂಘ, ಕರ್ನಾಟಕ ಶಾಖೆಯ ಪ್ರತಿನಿಧಿಯಾಗಿ ಲೋಕಸಭಾಧ್ಯಕ್ಷರ ನೇತೃತ್ವದ ಭಾರತ ನಿಯೋಗದೊಂದಿಗೆ ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ಆಗಸ್ಟ್ 24 ರಂದು “ROLE OF PARLIAMENT IN ACHIEVING SUSTAINABLE DEVELOPMENT”, (ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಸಂಸತ್ತಿನ ಪಾತ್ರ) “THE CLIMATE EMERGENCY – ARE PARLIAMENTS HOLDING GOVERNMENTS TO ACCOUNT” (ಹವಾಮಾನ ತುರ್ತು ಸ್ಥಿತಿ - ಸಂಸತ್ತುಗಳು ಸರ್ಕಾರಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುತ್ತೇವೆಯೇ). ವಿಷಯಗಳ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿ ಸಭಾಧ್ಯಕ್ಷರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿರುತ್ತಾರೆ.