ಬೆಂಗಳೂರು, ಆಗಸ್ಟ್ 05 ( ಕರ್ನಾಟಕ ವಾರ್ತೆ ) : ಭಾರತ ಸ್ವಾತಂತ್ರ್ಯ ಚಳುವಳಿಯ ಕುರಿತು ಅಂತರ್‍ವಿಭಾಗೀಯ ಸಾಂಸ್ಕøತಿಕ ಸ್ಪರ್ಧೆಗಳು-22ರ ಉದ್ಫಾಟನಾ ಸಮಾರಂಭವನ್ನು ಬೆಂಗಳೂರು ವಿಶ್ವವಿದ್ಯಾಲಯದ ಸಾಂಸ್ಕøತಿಕ ಸಮಿತಿ ಜ್ಞಾನಭಾರತಿಯ ಪೆÇ್ರ. ವೆಂಕಟಗಿರಿಗೌಡ ಸಭಾಂಗಣದಲ್ಲಿ ಸಮಾರಂಭದ ಉದ್ಘಾಟನೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಜಯಕರ ಎಸ್.ಎಂ. ಅವರು ಉದ್ಘಾಟಿಸಿದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡುತ್ತಾ, ಇಂದಿನ ವಿದ್ಯಾರ್ಥಿಗಳಿಗೆ ಗಾಂಧೀಜಿ, ನೆಹರು ಯಾರ ಬಗ್ಗೆಯೂ ತಿಳಿದಿಲ್ಲ. ದೂರದರ್ಶನ ಕಾರ್ಯಕ್ರಮ ಭಾರತದ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಕ್ವಿಜ್ ಏರ್ಪಡಿಸಿದ್ದರು. ಯಾರೂ ಉತ್ತರಿಸಲಿಲ್ಲ. ನಮ್ಮ ಯುವಜನಾಂಗ ಭಾರತದ ಸಂಸ್ಕøತಿ, ದೇಶ, ನೆಲ, ಜಲ, ಆಚಾರ-ವಿಚಾರಗಳನ್ನು ಅರಿತು, ಅವರ ಮಾರ್ಗದರ್ಶನದಲ್ಲಿ ನಡೆಯವ ಅನಿವಾರ್ಯತೆ ಇದೆ, ಜನಪದರ, ಜಾನಪದ ಸೊಗಡಿನ ಹಾಡುಗಳು, ವಾದ್ಯಗಳು ಭಾರತದ ಆಸ್ತಿ. ಇದನ್ನು ಜೋಪಾನಿಸುವ, ಉಳಿಸಿ, ಬೆಳೆಸುವ ಜವಾಬ್ದಾರಿ ಯುವ ಪಡೆಯದು. ಜಾನಪದ ವಾದ್ಯವನ್ನು ನಾವು ಬಲ್ಲೆವು, ನುಡಿಸುವೆವು. ಈಗ ಉದ್ಘಾಟನೆ ಅದರಿಂದಲೇ ಮಾಡಿದೆವು. ಗ್ರಾಮೀಣ ಭಾಗದಿಂದ ಬಂದವರಿಗೆ ಮಾತ್ರ ಈ ಕಲೆಗಳ ಬಗ್ಗೆ ತಿಳಿದಿರುತ್ತದೆ. ಕಾನ್ವೆಂಟ್ನಲ್ಲಿ ಓದಿದ ವಿದ್ಯಾರ್ಥಿಗಳಿಗೆ ಇದರ ಅರಿವಿರುವುದಿಲ್ಲ. ದೇಶಭಕ್ತಿಗೀತೆ, ಚಿತ್ರಕಲೆ, ನಾಟಕ ಹಾಗೂ ನೃತ್ಯಗಳ ಮೂಲಕ ಎಲ್ಲಾ ವಿಭಾಗದಲ್ಲಿನ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸುವ ಕಾರ್ಯ, ಈ ಸ್ಪರ್ಧೆಗಳಿಂದಾಗಲಿ ಎಂದು ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎಂ.ಕೊಟ್ರೇಶ್ ಮಾತನಾಡಿ, ಪ್ರದರ್ಶನ ಕಲಾವಿಭಾಗ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಸ್ಪರ್ಧೆಗಳಲ್ಲಿ ಎಲೆಮರೆಯ ಕಾಯಂತೆ ಅನೇಕ ಹೋರಾಟಗಾರರು ಭಾರತದ ಸ್ವಾತಂತ್ರ್ಯಕ್ಕಾಗಿ ದುಡಿದಿದ್ದಾರೆ, ಅಂತಹ ಮಹನೀಯರನ್ನು ತಮ್ಮ ಕಲಾಮಾಧ್ಯಮಗಳಾದ ಹಾಡು, ನೃತ್ಯ, ನಾಟಕ, ಚಿತ್ರಕಲೆ, ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ತರಬೇಕು. ಅಂತಹ ಪ್ರತಿಭೆಗಳಿಗೆ ತೀರ್ಪುಗಾರರು ಪೆÇ್ರೀತ್ಸಾಹ ನೀಡಬೇಕೆಂದರು.
ಸಿಂಡಿಕೇಟ್ ಸದಸ್ಯರಾದ ಡಾ. ಸಿ. ಆರ್. ಮಹೇಶ್ ಅವರು ್ಲ ಮಾತನಾಡಿ ಹೆಚ್ಚು ಸ್ವಾತಂತ್ರ್ಯ ಚಳುವಳಿಗಾರರ ಬಗ್ಗೆ ಯುವಜನತೆ ತಿಳಿದುಕೊಳ್ಳುವುದು ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ನಿರ್ದೇಶಕರು ಹೆಚ್. ಆರ್.ಡಿ.ಸಿ. ನೋಡಲ್ ಅಧಿಕಾರಿಗಳು ಮಾತನಾಡಿ, ದೇಶ ನಮಗೇನು ಮಾಡಿದೆ ಎಂದು ಕೇಳದೆ ನಾವು ದೇಶಕ್ಕೆ ಏನು ಕೊಡುಗೆ ಕೊಡುತ್ತೇವೆ ಎಂಬುದು ಮುಖ್ಯ ಎಂದರು. ಪ್ರದರ್ಶನ ಕಲಾವಿಭಾಗದ ನಂಜಪ್ಪ, ಅರುಣ್ ಮತ್ತು ತಂಡ ಜಾನಪದ ಗೀತೆಗಳಿಂದ ಸ್ವಾಗತಿಸಿದ್ದು ಅರ್ಥಪೂರ್ಣ ಎಂದು ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ವಿಭಾಗದ ಪೆÇ್ರ. ರಾಜಪ್ಪದಳವಾಯಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ತಿಳಿಸಿ, ವಿದ್ಯಾರ್ಥಿಗಳು ಸ್ಪರ್ಧೆಯನ್ನು ಸ್ಪರ್ಧೆಯಾಗೇ ಪರಿಗಣಿಸಿ. ಸೋಲು ಗೆಲುವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ ಎಂದ ಅವರು, ನನಗೆ ಪ್ರದರ್ಶನ ಕಲಾ ವಿಭಾಗ ಎಂದರೆ ಹೃದಯ. ಅನೇಕ ನನ್ನ ನಾಟಕದ ರಚನೆಗಳನ್ನು ಪೆÇ್ರ. ರಾಮಕೃಷ್ಣ ತಮ್ಮ ವಿದ್ಯಾರ್ಥಿಗಳಿಂದ ಮಾಡಿಸಿದ್ದಾರೆ. ನೃತ್ಯ, ಸಂಗೀತ ಯಾವ ಕಾರ್ಯಕ್ರಮವಾದರೂ ಪಾಲ್ಗೊಳ್ಳಲು ನನಗೆ ಸಂತಸ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನೆಯನ್ನು ಪ್ರದರ್ಶನ ಕಲಾವಿಭಾಗದ ನಾಟಕ ವಿದ್ಯಾರ್ಥಿ ಅಶ್ವತ್ಥಪ್ಪ, ಜಾನಪದ ಗೀತೆಯ ದೇಶಭಕ್ತಿಯ ರಚನೆಯನ್ನು ಹಾಡಿ, ಕುಲಪತಿಗಳಿಂದ ಹಾಗೂ ಎಲ್ಲಾ ಅತಿಥಿ ಗಣ್ಯರಿಂದ ಮೆಚ್ಚುಗೆ ಪಡೆದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿನ, ಪ್ರದರ್ಶನ ಕಲಾ ವಿಭಾಗದ ಪೆÇ್ರ. ಕೆ. ರಾಮಕೃಷ್ಣಯ್ಯ, ಪ್ರದರ್ಶನ ಕಲಾ ವಿಭಾಗದ ಡಾ.ಶಿವಣ್ಣ, ಬೆಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಪೆÇ್ರ. ಪಿ.ಸಿ. ಕೃಷ್ಣಸ್ವಾಮಿ, ವಿಶ್ವವಿದ್ಯಾಲಯದಲ್ಲಿನ ಎಲ್ಲಾ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ತೀರ್ಪುಗಾರರು, ಸ್ನಾತಕೋತ್ತರ ಕೇಂದ್ರ ರಾಮನಗರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.