ವಿವಿಧ ಕೋರ್ಸ್‍ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

varthajala
0

ಬೆಂಗಳೂರು, ಜುಲೈ 11 (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು 2022-23ನೇ ಸಾಲಿಗೆ ನೂತನ ಶಿಕ್ಷಣ ನೀತಿ ಪ್ರಕಾರ (ಎನ್‍ಇಪಿ) ವಿವಿಧ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.

ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಮೂಲಕ ಆನ್‍ಲೈನ್ ಹಾಗೂ ನೇರವಾಗಿ ವಿಶ್ವವಿದ್ಯಾಲಯದ ಹೆಲ್ಪ್ ಡೆಸ್ಕ್ ಮೂಲಕ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು.

ಬಿ.ಪಿ.ಎ ಹಾನರ್ಸ್ (Bachelor of Performing Arts) ನಾಲ್ಕು ವರ್ಷಗಳ ಕೋರ್ಸ್, ಹೊಸ ಶಿಕ್ಷಣ ನೀತಿ ಮಾದರಿಯಲ್ಲಿ ಐಚ್ಛಿಕ ವಿಷಯಗಳಾದ ನಾಟಕ, ಭರತನಾಟ್ಯ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ತಬಲಾ, ಮೃದಂಗ, ವೀಣಾ, ಪಿಟೀಲು. ಭಾμÁ ಪತ್ರಿಕೆಯು ಕನ್ನಡ/ ಐಚ್ಛಿಕ ಕನ್ನಡ / ಸಂಸ್ಕøತ ಮತ್ತು ಇಂಗ್ಲೀμï ಈ ಕೋರ್ಸುಗಳಿಗೆ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಎಂ.ಪಿ.ಎ ಕೋರ್ಸ್‍ಗಾಗಿ ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ನಾಟಕ, ತಬಲ, ಮೃದಂಗ, ವೀಣೆ (ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು ಮತ್ತು ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಮತ್ತು ವಿಶ್ವವಿದ್ಯಾಲಯದ ಮೌಖಿಕ ಪರೀಕ್ಷೆಯಲ್ಲಿ ಅರ್ಹತೆ ಹೊಂದುವುದು.

ಡಿ.ಲಿಟ್ (D.Litt) ಕೋರ್ಸ್ ಸಂಗೀತ, ನೃತ್ಯ, ನಾಟಕ ಹಾಗೂ ಪ್ರದರ್ಶಕ ಕಲೆಗಳಲ್ಲಿ ಅಧ್ಯಯನ ನಡೆಸಿ, ಉನ್ನತ ಮಟ್ಟದ ಪರಿಣಿತಿ ಹೊಂದಿರಬೇಕು.

ಸರ್ಟಿಫಿಕೇಟ್ ಕೋರ್ಸ್ (6ತಿಂಗಳು) : ಭಕ್ತಿಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ, ರಂಗ ಸಂಗೀತ, ಭರತನಾಟ್ಯ, ನಾಟಕ, ಹಾರ್ಮೋನಿಯಂ, ತಬಲ, ಯೋಗ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಯಕ್ಷಗಾನ, ಗಮಕ.

    ಪಿಜಿ ಡಿಪೆÇ್ಲೀಮಾ 1 ವರ್ಷ ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಭರತನಾಟ್ಯ, ನಾಟಕ, ತಬಲ, ಮೃದಂಗ, ವೀಣೆ ಮತ್ತು ಯೋಗ (ಯಾವುದೇ ಪದವಿ ಅಥವಾ ತತ್ಸಮಾನ) ಹೊಂದಿರಬೇಕು.

ಅರ್ಜಿ ಸಲ್ಲಿಸುವವರು ವಿಶ್ವವಿದ್ಯಾಲಯದ https://www.musicuniversity.ac.in ಅಂತರ್ಜಾಲದಲ್ಲಿ ಇರುವ  UUCMS ಲಿಂಕ್ - https://uucms.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳು ಸಾರ್ವಜನಿಕ ವಿದ್ಯಾರ್ಥಿನಿಲಯಗಳಲ್ಲಿ ವಸತಿ ಸೌಲಭ್ಯವನ್ನು ಪಡೆಯಬಹುದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ musicuniversity.ac.in or registrar@musicuniversity.ac.iಹಾಗೂ ದೂರವಾಣಿ ಸಂಖ್ಯೆ: 0821-2402141, 9880761877ನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Tags

Post a Comment

0Comments

Post a Comment (0)