ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಕಟ

varthajala
0


ಬೆಂಗಳೂರು, ಜುಲೈ 21 (ಕರ್ನಾಟಕ ವಾರ್ತೆ) : ಕನ್ನಡ ಹಾಗೂ ಇತರ ಭಾಷೆಗಳ ನಡುವೆ ಭಾಷಾಂತರದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ವಾಂಸರಿಗೆ  ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ನೀಡುವ 2022ನೇ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಗೌರವ ಪ್ರಶಸ್ತಿಯ ಮೊತ್ತ ರೂ.50,000/- ಆಗಿರುತ್ತದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಸಿ. ಆರ್. ಯರವಿನ ತೆಲಿಮಠ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಡಾ. ಆರ್.ವಿ.ಎಸ್. ಸುಂದರಂ, ಲೇಖಕಿ, ಅನುವಾದಕಿ ಡಾ. ವಿಜಯಾಗುತ್ತಲ, ತಮಿಳು ಮತ್ತುಕನ್ನಡ ಭಾಷೆಗಳ ನಡುವಿನ ಭಾಷಾಂತರಕಾರರಾಗಿ ಪ್ರಸಿದ್ಧರಾದ ಡಾ. ಕೆ. ನಲ್ಲತಂಬಿ, ಹಿರಿಯ ಅನುವಾದಕರಾದ ವಿ.ಕೃಷ್ಣ ಐವರು ವಿದ್ವಾಂಸರು ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಪುಸ್ತಕ ಬಹುಮಾನಗಳ ವಿವರ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ 2021ರಲ್ಲಿ ಪ್ರಕಟವಾದ ಅನುವಾದಿತ ಕೃತಿಗಳಿಗೆ ವಿವಿಧ ವಿಭಾಗಗಳಲ್ಲಿ ನೀಡಲಾಗುವ ಪುಸ್ತಕ ಬಹುಮಾನಗಳಿಗೆ ಕನ್ನಡದಿಂದ ಇಂಗ್ಲಿಷಿಗೆ ಭಾಷಾಂತರಗೊಂಡ ಪುಸ್ತಕ, ದಎಸೆನ್ಶಿಯಲ್ ಮಹಾಭಾರತ–ಅನುವಾದಕರು: ಅರ್ಜುನ ಭಾರದ್ವಾಜ ಮತ್ತು ಹರಿರವಿಕುಮಾರ್ (ಮೂಲ: ಎ.ಆರ್. ಕೃಷ್ಣಶಾಸ್ತ್ರಿಯವರ ‘ವಚನ ಭಾರತ’), ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದವಾದ ಪರ್ದಾ & ಪಾಲಿಗಮಿ- ಅನುವಾದಕರು: ದಾದಾಪೀರ್‍ಜೈಮನ್ (ಮೂಲ: ಇಕ್ಬಾಲುನ್ನೀಸಾ ಹುಸೇನ್‍ಅವರ‘ಪರ್ದಾ& ಪಾಲಿಗಮಿ’), ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಅನುವಾದವಾದ ಎರಡು ಕೃತಿಗಳಾದ ಕಳ್ಳಿಗಾಡಿನ ಇತಿಹಾಸ- ಅನುವಾದಕರು: ಮಲರ್ವಿಳಿ ಕೆ (ಮೂಲ: ವೈರಮುತ್ತು ಅವರ ತಮಿಳು ಕಾದಂಬರಿ ‘ಕಳ್ಳಿಕ್ಕಟ್ಟು ಇತಿಹಾಸಂ’) ಮತ್ತು  ಪ್ರೇಮಪತ್ರ- ಅನುವಾದಕರು: ಮೋಹನ ಕುಂಟಾರ್ (ಮೂಲ: ವೈಕಂ ಮಹಮದ್ ಬಶೀರ್ ಅವರ ಮಲಯಾಳ ಕತೆಗಳು), ಕನ್ನಡದಿಂದ ಬೇರೆ ಭಾರತೀಯ ಭಾಷೆಗಳಿಗೆ ಅನುವಾದವಾದ ಉತ್ತರಕಾಂಡಂ- ಅನುವಾದಕರು: ಡಾ.ಎಚ್. ಆರ್. ವಿಶ್ವಾಸ (ಮೂಲ: ಎಸ್. ಎಲ್. ಭೈರಪ್ಪನವರ ‘ಉತ್ತರಕಾಂಡ’ ಕಾದಂಬರಿ) ಕೃತಿಗಳು ಆಯ್ಕೆಯಾಗಿದ್ದು, ಪುಸ್ತಕ ಬಹುಮಾನದ ಮೊತ್ತರೂ.25,000/- ಆಗಿರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 

Post a Comment

0Comments

Post a Comment (0)