ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟನೆ...

varthajala
0

ಬೆಂಗಳೂರು : ಬೆಂಗಳೂರು ಉತ್ತರ ವಲಯ-4ರ ನರಸೀಪುರ ಕ್ಲಸ್ಟರ್ ಹಂತದ ಕ್ರೀಡಾಕೂಟವನ್ನು ನಗರದ ಜಾಲಹಳ್ಳಿಯ ಬಿಇಎಲ್ ಆಂಗ್ಲ ಶಾಲೆಯಲ್ಲಿ ಉದ್ಘಾಟಿಸಲಾಯಿತು.

 ಮೂರು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟಕ್ಕೆ ಕ್ಷೇತ್ರಸಮನ್ವಯಾಧಿಕಾರಿಗಳಾದ ಶ್ರೀ ಬಿ.ಕೆ.ಪ್ರಕಾಶ್  ಚಾಲನೆ ನೀಡಿದರು.











ಈ ವೇಳೆ ಮಾತನಾಡಿದ ಬಿ ಆರ್ ಸಿ ಬಿ.ಕೆ.ಪ್ರಕಾಶ್,ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆಯನ್ನುಮೂಡಿಸುವಲ್ಲಿ ಸಫಲವಾಗಿದೆ ಹಾಗೂ ಮನಸ್ಸಿಗೆ ಮುದ ನೀಡುತ್ತವೆ.ಹಾಗೆಯೇ ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಮಕ್ಕಳನ್ನು ಕೇವಲ ಪಠ್ಯಪುಸ್ತಕಕ್ಕೆ ಸೀಮಿತ ಮಾಡದೇ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಬೇಕಿದೆ ಎಂದರು.

ಈ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಕೆ. ಎಸ್. ಗಿರೀಶ್ ಮಾತನಾಡಿ,ಮಕ್ಕಳ ದೈಹಿಕ ಬೆಳವಣಿಗೆಗೆ ಕ್ರೀಡೆ ಅತೀ ಅವಶ್ಯ.ಶಾಲಾ ಹಂತದಲ್ಲೇ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಸೃಧೃಡರಾಗುತ್ತಾರೆಂದು  ಅಭಿಪ್ರಾಯಪಟ್ಟರು.

.ಈ ಉದ್ಘಾಟನಾ ಸಮಾರಂಭದಲ್ಲಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎ.ನಾಗರಾಜು, ಬಿಇಎಲ್ ಶೈಕ್ಷಣಿಕ ಸಂಸ್ಥೆಗಳ ಕಾರ್ಯದರ್ಶಿ ನರಸಿಂಹಕುಮಾರ್, ಬಿಇಎಲ್ ಶೈಕ್ಷಣಿಕ ಸಂಸ್ಥೆಗಳ ಆಡಳಿತಾಧಿಕಾರಿ ರಘುಪತಿ,ಬಿಇಎಲ್ ಶಾಲೆಯ ಮುಖ್ಯ ಶಿಕ್ಷಕಿಯರಾದ ಶ್ರೀಮತಿ ಸ್ವಾತಿ ಕೆ, ಶ್ರೀಮತಿಕಾಂತಾ ಶಂಕರ್ ಸೇರಿದಂತೆ ಎಲ್ಲಾ ಶಿಕ್ಷಕವೃಂದದವರು ಹಾಗೂ ನೂರಾರು ಕ್ರೀಡಾಪಟುಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

Post a Comment

0Comments

Post a Comment (0)