ಬಳ್ಳಾರಿ ಜುಲೈ 11. ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಹಾರ್ಟ್ಸ್ ಟ್ರಸ್ಟ್ ಗೆ ಬೂಡಾದಿಂದ ಸಿಎ ನಿವೇಶನ ನೀಡಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಾರ್ಕಲತೋಟ ಪಾಲನ್ನ ಅವರು ಹೇಳಿದರು.
ನಗರದ ಗಾಂಧಿನಗರ ಬಡಾವಣೆಯ ಬಾಲ ಭಾರತಿ ಶಾಲೆಯಲ್ಲಿ ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಹಾರ್ಟ್ಸ್ ಟ್ರಸ್ಟ್ ನ 9ನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಿದ್ದ ವಿಶೇಷ ಕರಾಟೆ ಶಿಬಿರ ಹಾಗೂ ಬ್ಲಾಕ್ ಬೆಲ್ಟ್ ವಿತರಣಾ ಸಮಾರಂಭದಲ್ಲಿ ಶ್ರೀ ಪಂಚಾಕ್ಷರಿ ಗುರುವರ್ಯರ ಭಾವಚಿತ್ರಕ್ಕೆ ಪುಷ್ಪಾರ್ಷನೆಗಳನ್ನು ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಳೆದ ಸುಮಾರು ವರ್ಷಗಳಿಂದ ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಹಾರ್ಟ್ಸ್ ಟ್ರಸ್ಟ್ ಮಕ್ಕಳಿಗೆ ಉಚಿತವಾಗಿ ಕರಾಟೆ ತರಬೇತಿ, ಯೋಗಭ್ಯಾಸ, ಧ್ಯಾನವನ್ನು ಕಲಿಸುತ್ತಿದ್ದು, ಟ್ರಸ್ಟ್ ನ ಅಧ್ಯಕ್ಷ ಹಾಗೂ ನ್ಯಾಯವಾದಿ ಬಂಡ್ರಾಳ್ ಮೃತ್ಯುಂಜಯ ಸ್ವಾಮೀ ಅವರ ನಿಸ್ವಾರ್ಥ ಸೇವೆ ಮೆಚ್ಚುವಂತಹದ್ದು, ಎಂದು ಹರ್ಷ ವ್ಯಕ್ತಪಡಿಸಿದರು.
ನಗರಾಭಿವೃದ್ಧಿ ವತಿಯಿಂದ ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಹಾರ್ಟ್ಸ್ ಟ್ರಸ್ಟ್ ಗೆ ಅನುಕೂಲವಾಗಲೆಂದು ಸಿಎ ನಿವೇಶನವನ್ನು ನೀಡಲಾಗುವುದು, ಇದಕ್ಕೆ ಸಂಬAಧಿಸಿದ ಶೇ.25 ರಷ್ಟು ಹಣವನ್ನು ನಾನೇ ಭರಿಸುವೆ ಎಂದು ಭರವಸೆ ನೀಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ನಾಯ್ಡು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಆಧುನಿಕ ಯುಗದಲ್ಲಿ ಪ್ರತಿಯೋಬ್ಬ ಪಾಲಕರು ಮಕ್ಕಳಿಗೆ ಕರಾಟೆ ಕಲಿಸಲು ಮುಂದಾಗಬೇಕು, 4-5 ಮಕ್ಕಳಿಂದ ಪ್ರಾರಂಭಗೊAಡ ಈ ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಹಾರ್ಟ್ಸ್ ಟ್ರಸ್ಟ್ 500ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಕರಾಟೆ ತರಬೇತಿ ನೀಡುತ್ತಿರುವುದು ಸಂತಸ ಮೂಡಿಸಿದೆ. ಇದು ನಮ್ಮ ಬಳ್ಳಾರಿಯ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಟ್ರಸ್ಟ್ ಅಧ್ಯಕ್ಷ ಬಂಡ್ರಾಳ್ ಮೃತ್ಯುಂಜಯ ಸ್ವಾಮೀ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನಂದೀಶ್, ಗಾಜಲು ಆನಂದ್, ಮುಖಂಡ ತಿಪ್ಪೇಸ್ವಾಮಿ, ಸಂದೀಪ್, ಅಜಯ್, ಗೋವರ್ಧನ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಂಜನಾ ಹಾಗೂ ಸ್ಪೂರ್ತಿ ಪ್ರಾರ್ಥಿಸಿದರು. ಈ ವಿಶೇಷ ಕರಾಟೆ ಶಿಬಿರ ಬೆ.10ರಿಂದ ಸಂಜೆ 4ರ ವರೆಗೆ ನಡೆಯಿತು. ನಾನಾ ಕಡೆಯಿಂದ ಆಗಮಿಸಿದ ಸುಮಾರು 250ಕ್ಕೂ ಹೆಚ್ಚು ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಹುಬ್ಬಳ್ಳಿಯ ಹನ್ಸಿ ಅಣ್ಣಪ್ಪ ಮಾರ್ಷಲ್ ಅವರು ಮಕ್ಕಳಿಗೆ ಕರಾಟೆ ತರಬೇತಿ ನೀಡಿದರು.