ಮಧುಗಿರಿ : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅನಗತ್ಯವಾಗಿ ಒಡಾಡುತ್ತಿದ್ದ ಪುಂಡರನ್ನು ಪಿಎಸ್ಐ ಕೆ.ಟಿ. ರಮೇಶ್ ಅಟ್ಟಾಡಿಸಿ ಎಚ್ಚರಿಕೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದ ಗೋಡೆಯ ಮೇಲೆ ಹೆಣ್ಣು ಮಕ್ಕಳ ಹೆಸರು ಬರೆಯುವುದು ಹಾಗೂ ಪ್ರೀತಿಸು ಅಂತ ಹಿಂದೆ ಬಿದ್ದು ಚುಡಾಯಿಸುತ್ತಿದ್ದರು. ಈ ವಿಷಯವನ್ನು ತಿಳಿದು ಪಿಎಸ್ಐ ಕೆ.ಟಿ. ರಮೇಶ್ ಅವರು ದಿಢೀರ್ ಭೇಟಿ ನೀಡಿದಾಗ, ಕಾಲೇಜಿನ ಆವರಣದಲ್ಲಿ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ಪುಂಡರನ್ನು ಅಟ್ಟಾಡಿಸಿದರು.
ಪುಂಡರು ನಿಮ್ಮನ್ನು ಹೆಣ್ಣುಮಕ್ಕಳನ್ನು ಚುಡಾಯಿಸಿದರೆ, 112 ಕರೆ ಮಾಡುವಂತೆ ಪಿಎಸ್ಐ ಕೆ.ಟಿ. ರಮೇಶ್ ತಿಳಿಸಿದರು.
ನಂತರ ಎಂ ಜಿ ಎಂ ಬಾಲಿಕಾ ಪ್ರೌಢಶಾಲೆ ಅಕ್ಕಪಕ್ಕದ ಆಟೋ ಸ್ಟ್ಯಾಂಡ್ ಗಳಲ್ಲಿ ಪಿಎಸ್ಸೈ ತೆರಳಿ ಅಲ್ಲಿನ ಆಟೋ ಚಾಲಕರಿಗೂ ಎಚ್ಚರಿಕೆ ನೀಡಿದ್ದಲ್ಲದೆ ಕೆಲವು ಆಟೊ ಚಾಲಕರು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿರುವ ಬಗ್ಗೆ ದೂರು ಬಂದಿದೆ ಅಂತಹವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಂದರು.
ವರದಿ:ನಾಗೇಶ್ ಜೀವಾ ಮಧುಗಿರಿ