ಸೌ. ಶ್ವೇತಾ ಕ್ಲಾರ್ಕ್ ತಮ್ಮ ಮಾತನ್ನು ಮುಂದುವರೆಸುತ್ತಾ, ಉಚ್ಚ ಆಧ್ಯಾತ್ಮಿಕ ಮಟ್ಟವನ್ನು ಹೊಂದಿರುವ ಅನೇಕ ಮಕ್ಕಳು ಸಾಧಕರಲ್ಲಿ ಜನ್ಮತಾಳುತ್ತಿದ್ದಾರೆ; ಹಾಗಾಗಿ ಅವರನ್ನು ನಾವು ‘ದೈವಿ ಬಾಲಕ’ ಎಂದು ಕರೆಯುತ್ತೇವೆ. ಅವರಲ್ಲಿ ಆಜ್ಞಾಪಾಲನೆ, ಉನ್ನತ ವಿಚಾರಕ್ಷಮತೆ ಮತ್ತು ಆಧ್ಯಾತ್ಮಿಕ ಸಾಮರ್ಥ್ಯ, ಅಧ್ಯಾತ್ಮದ ಸೆಳೆತ ಮತ್ತು ಈಶ್ವರನ ಬಗೆಗಿನ ಭಾವ ಕಂಡುಬರುತ್ತದೆ. ಅವರು ಜೀವನದಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವಾಗ ಸ್ಥಿರವಾಗಿರುತ್ತಾರೆ ಮತ್ತು ಜೀವನದತ್ತ ನೋಡುವ ಅವರ ದೃಷ್ಟಿಕೋನವು ಆಧ್ಯಾತ್ಮಿಕವಾಗಿರುತ್ತದೆ. ಅವರಲ್ಲಿ ಸೂಕ್ಷ್ಮ ಸಕಾರಾತ್ಮಕ ಮತ್ತು ನಕಾರಾತ್ಮಕ ಸ್ಪಂದನಗಳನ್ನು ಅರಿತುಕೊಳ್ಳುವ ಕ್ಷಮತೆ ಇರುತ್ತದೆ ಎಂದು ಹೇಳಿದರು.
ಸೂಕ್ಷ್ಮ ಪರೀಕ್ಷಣೆಯಿಂದ ಗುರುತಿಸಲಾದ 8 ದೈವಿ ಬಾಲಕರು ಮತ್ತು 32 ಸಾಮಾನ್ಯ ಬಾಲಕರ ಸೂಕ್ಷ್ಮ-ಊರ್ಜೆಯನ್ನು ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದ ಮೂಲಕ ಅಳೆಯಲಾಯಿತು. ಸಾಮಾನ್ಯ ಬಾಲಕರಲ್ಲಿ ಅತ್ಯಲ್ಪ ಸಕಾರಾತ್ಮಕ ಊರ್ಜೆ ಮತ್ತು ಬಹಳಷ್ಟು ನಕಾರಾತ್ಮಕ ಊರ್ಜೆ ಇರುವುದು ಕಂಡುಬಂದಿತು. ತದ್ವಿರುದ್ಧ ದೈವಿ ಬಾಲಕರಲ್ಲಿ ಬಹಳ ಕಡಿಮೆ ನಕಾರಾತ್ಮಕ ಊರ್ಜೆ ಮತ್ತು ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇರುವುದು ಗಮನಕ್ಕೆ ಬಂದಿತು. ಇವರಲ್ಲಿ, ಹುಟ್ಟುವಾಗಲೇ ಸಂತ ಪದವಿಯ ಆಧ್ಯಾತ್ಮಿಕ ಮಟ್ಟ ಹೊಂದಿರುವ 3 ವರ್ಷದ ಇಬ್ಬರು ದೈವಿ ಬಾಲಕರ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ಸರ್ವೋಚ್ಚ ಅಂದರೆ ಅನುಕ್ರಮವಾಗಿ 821 ಮತ್ತು 793 ಮೀಟರ್ ಇತ್ತು. ಮತ್ತೊಂದು ಪರೀಕ್ಷಣೆಯಲ್ಲಿ 3 ದೈವಿ ಬಾಲಕರನ್ನು 1 ಗಂಟೆ ‘ಓಂ ನಮೋ ಭಗವತೇ ವಾಸುದೇವಾಯ |’ ಎಂದು ನಾಮಜಪ ಮಾಡುವಂತೆ ಹೇಳಲಾಯಿತು. ಅವರಲ್ಲಿ ಮುಲತಃ ಅತ್ಯಲ್ಪವಾಗಿರುವ ನಕಾರಾತ್ಮಕ ಊರ್ಜೆಯ ಪ್ರಭಾವಳಿಯು ನಾಮಜಪದ ನಂತರ ಶೇ. 86 ರಷ್ಟು ಕಡಿಮೆ ಆಯಿತು ಹಾಗೂ ಸಕಾರಾತ್ಮಕ ಊರ್ಜೆಯ ಪ್ರಭಾವಳಿಯು ಶೇ. 87 ರಷ್ಟು ಹೆಚ್ಚಾಗಿತ್ತು. ದೈವಿ ಬಾಲಕರಿಗೆ ಸಕಾರಾತ್ಮಕತೆಯನ್ನು ಹೆಚ್ಚಿಸುವ ಮತ್ತು ನಕಾರಾತ್ಮಕತೆಯನ್ನು ಕಡಿಮೆ ಮಾಡುವ ಚಟುವಟಿಕೆಗಳನ್ನು ಕಲಿಸಲಾಗುತ್ತದೆ, ಉದಾ. ‘ಕೋಪ, ಹಠ, ಸೋಮಾರಿತನ’ದಂತಹ ಸ್ವಭಾವದೋಷ ತೊಡೆದುಹಾಕಲು ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ, ಸಂಗೀತ-ನೃತ್ಯದಂತಹ ವಿವಿಧ ಕಲೆಗಳ ಜೊತೆಗೆ ಆಶ್ರಮ ಸ್ವಚ್ಛತೆ, ಧ್ವನಿಮುದ್ರಣ ಸಂಕಲನ, ತಾಂತ್ರಿಕ ಸೇವೆ ಇತ್ಯಾದಿಗಳ ಮೂಲಕ ಸತ್ಸೇವೆಯಲ್ಲಿರುವುದು.
ಕೊನೆಯಲ್ಲಿ ಸೌ. ಕ್ಲಾರ್ಕ್ ಮಾತನಾಡುತ್ತಾ, ‘ತಮ್ಮ ಮಕ್ಕಳ ಮೇಲೆ ಯೋಗ್ಯ ಸಂಸ್ಕಾರ ಮಾಡುವುದು, ಅದೇ ರೀತಿ ಅಧ್ಯಾತ್ಮಕ್ಕೆ ಪೂರಕ ವಾತಾವರಣವನ್ನು ಒದಗಿಸುವ ಮೂಲಕ ಅವರು ಜನ್ಮಕ್ಕೆ ಬರಲು ಕಾರಣವಾದ ‘ಈಶ್ವರ ಪ್ರಾಪ್ತಿ’ಯನ್ನು ಸಾಧಿಸಲು ಅವರ ಜೀವನವನ್ನು ಬಳಸುವುದು’, ಪೋಷಕರ ಕರ್ತವ್ಯವಾಗಿದೆ’ ಎಂದು ಹೇಳಿದರು.