ಸಾವಿಲ್ಲದ ಸಾಂಸ್ಕೃತಿಕ ಪಳೆಯುಳಿಕೆಯೇ ಸಂಗೀತ, ಸಾವನ್ನು ಮುಂದೊಡುವ ಶಕ್ತಿ ಸಂಗೀತಕ್ಕಿದೆ

varthajala
0


ಬಳ್ಳಾರಿ ಜುಲೈ11. ಸಾವಿಲ್ಲದ ಸಾಂಸ್ಕೃತಿಕ ಪಾಳೆಯುಳಿಕೆಯೇ ಸಂಗೀತ ಹಾಗೂ ಸಂಗೀತದ ರಾಗಗಳಿಂದ ರೋಗಗಳನ್ನು ಗುಣಪಡಿಸಬಹುದೆಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಟಿ ಹೆಚ್ ಎಂ ಬಸವರಾಜ ರವರು ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯಲ್ಲಿ ದಿನಾಂಕ 10 ಜೂಲೈ ಭಾನುವಾರದಂದು 19ನೇ ಮಾಸಿಕ ರಾಗರಂಗ್ ಕಾರ್ಯಕ್ರಮವನ್ನು ಡೋಲಕ್ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಮುಂದುವರೆದು ಮಾತನಾಡುತ್ತಾ ಇತ್ತೀಚಿಗೆ ಯಾಂತ್ರಿಕ ಬದುಕಿನ ಜಂಜಾಟದಲ್ಲಿ ನಮ್ಮ ಮನಸ್ಸಿನ ನೆಮ್ಮದಿಯ ದೃಷ್ಟಿಯಿಂದ ಸಂಗೀತ ಬೇಕು ಉದಾಹರಣೆ ಮ್ಯೂಸಿಕ್ ಥೆರಪಿಯಿಂದ ಬಿಪಿ ಶುಗರ್ ಒತ್ತಡ ಇವುಗಳನ್ನು ಸಂಗೀತದಿAದ ನಿವಾರಿಸಿಕೊಳ್ಳಬಹುದು, ಸಾವನ್ನು ಮುಂದೊಡುವ ಶಕ್ತಿ ಸಂಗೀತಕ್ಕೆ ಇದೆ ಎಂದು ತಿಳಿಸಿದರು. ಸಂಗೀತಕ್ಕೆ ಬದುಕನ್ನೇ ಬದಲಿಸುವಷ್ಟು ಶಕ್ತಿ ಇದೆ ಎಂದು ಹೇಳಿದರು ಮುಖ್ಯ ಅತಿಥಿಗಳಾದ ವಕೀಲರಾದ ಪರ್ವತ ರೆಡ್ಡಿಯವರು ಮಾತನಾಡುತ್ತಾ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಅಗತ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೆ ಎಸ್ ಆರ್ ಟಿ ಸಿ ಯ ಮಾರಪ್ಪ ಶ್ರೀಮತಿ ಕವಿತಾ ಉಪಸ್ಥಿತರಿದ್ದರು.

 ಪ್ರಾಚಾರ್ಯರಾದ ದೊಡ್ಡ ಬಸವ ಗವಾಯಿಗಳು ಸ್ವಾಗತಿಸಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಶ್ರೀಮತಿ ಚೈತ್ರ ಚಂದನ ದೇಸಾಯಿ ಕೊಪ್ಪಳ ಹಿಂದುಸ್ತಾನಿ ಸಂಗೀತ ಪ್ರಸ್ತುತಪಡಿಸಿದರು ಶ್ರೀಮತಿ ಕವಿತಾ ಜಾನಪದ ಹಾಡಿದರು ತಬಲಾದಲ್ಲಿ ಯೋಗೀಶ ರಾಘವೇಂದ್ರ ಹಾರ್ಮೋನಿಯಂ ಪುಟ್ಟರಾಜ್ ಹಾಗು ಸಂಗೀತ ಶಾಲೆಯ ಮಕ್ಕಳಿಂದ ಸಂಗೀತ ಕಾರ್ಯಕ್ರಮ ನಡೆಯಿತು, ಸಂಗೀತಕ್ಕೆ ಸಭಿಕರು ಮಂತ್ರಮುಗ್ಧರಾದರು.

Tags

Post a Comment

0Comments

Post a Comment (0)