ಇಟಕ ಲೋಟಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ

varthajala
0

 ಮಧುಗಿರಿ :ತಾಲೂಕಿನ ಇಟಕ ಲೋಟಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕೇಂದ್ರ ಯಾವ ಕ್ಷಣದಲ್ಲಾದರೂ ಬೀಳಬಹುದು. ಅಂಗನವಾಡಿಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಶಿಶುವಿಹಾರ ಕ್ಕಾಗಿ ನಲಿದು ಕಲಿಯಲು ಆಗಮಿಸುತ್ತಾರೆ. ಆದರೆ ಇಂತಹ ಕಟ್ಟಡವೇ ಯಾವ ಕ್ಷಣದಲ್ಲಾದರೂ ಬೀಳುವ ಸ್ಥಿತಿಯಲ್ಲಿರುವುದರಿಂದ, ಕಂದಮ್ಮಗಳ ಜೀವಕ್ಕೆ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿದೆ . ಹೊರನೋಟಕ್ಕೆ ಸ್ಪಷ್ಟವಾಗಿ ಕಾಣುವ ಈ ಕಟ್ಟಡವು ಪ್ರತಿಕ್ಷಣವು ಸಾವಿಗಾಗಿ ಬಾಯಿತೆರೆದು ಕುಳಿತಿರುವ  ಸಾವಿನ ಕೂಪವಾಗಿ ಕಾಣುತ್ತಿದೆ. ಪರ್ಯಾಯ ವ್ಯವಸ್ಥೆ ಇಲ್ಲದೆ ಇದರಡಿಯಲ್ಲಿ ಮಕ್ಕಳಿಗೆ ಶಿಶುವಿಹಾರ ನಡೆಸಲಾಗುತ್ತಿದೆ.





ಚಾವಣಿಗಳು ಮತ್ತು ಗೋಡೆಗಳು ಈಗಾಗಲೇ ಅಲ್ಪಸ್ವಲ್ಪ ಬಿದ್ದಿದ್ದು, ಚಾವಣಿಗೆ ಕಾಂಕ್ರೀಟ್ ಸಮಯದಲ್ಲಿ ಹಾಕಿದ್ದ ಕಬ್ಬಿಣದ ಸರಳುಗಳು ಕಾಣುತ್ತಿವೆ .ಎಳೆಯ ಮಕ್ಕಳು ಹೂವಿನಂತಿದ್ದು, ಆ ಮಕ್ಕಳಿಗೆ ಸ್ವಲ್ಪವೇ ಪೆಟ್ಟು ಬಿದ್ದರೂ ಸಾವು-ನೋವುಗಳು ಸಂಭವಿಸುವ ಸಂಭವ ಹೆಚ್ಚಿರುತ್ತದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗ್ರಾಮಸ್ಥರು ಈ ಕಟ್ಟಡದ ಕಡೆ ಗಮನ ಹರಿಸದೇ ಇರುವುದು ನಿಜಕ್ಕೂ ಶೋಚನೀಯ. 

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಈ ಕಟ್ಟಡವನ್ನು ನೆಲಸಮ ಅಥವಾ ದುರಸ್ತಿ  ಕೆಲಸ ಮಾಡಬೇಕು. ಚಿಕ್ಕಮಕ್ಕಳಾದಿಯಾಗಿ ದೊಡ್ಡವರು  ಅನಿರೀಕ್ಷಿತವಾಗಿ ಒಳಗೆ ಪ್ರವೇಶಿಸಿದಾಗ ದುರದೃಷ್ಟಕ್ಕೆ ಕಟ್ಟಡ ಕುಸಿದರೆ ಸಾವಂತೂ ಕಟ್ಟಿಟ್ಟಬುತ್ತಿ. ಆದಕಾರಣ ಅತಿ ಅಪಾಯದ ಸ್ಥಿತಿಯಲ್ಲಿರುವ ಈ ಕಟ್ಟಡವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಊರಿನ ಗ್ರಾಮಸ್ಥರು ಈ ಕಟ್ಟಡವನ್ನು ನೆಲಸಮ ಮಾಡಿ, ಇದೆ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಹೊಸ ಅಂಗನವಾಡಿ ತೆರೆದರೆ ಮಕ್ಕಳ ಜೀವನ ಉಜ್ವಲವಾದೀತು.


ವರದಿ:ನಾಗೇಶ್ ಜೀವಾ ಪುರವರ

Tags

Post a Comment

0Comments

Post a Comment (0)