ದಾನಿಗಳ ಸಹಕಾರದಿಂದ ಕರ್ನಾಟಕ ರಕ್ಷಣಾ ವೇದಿಕೆಯು ನಂದಿಗುಂದ ಹಿರಿಯ ಪ್ರಾಥಮಿಕ ಶಾಲೆಯ 35 ಮಕ್ಕಳಿಗೆ ಉಚಿತ ಬರೆಯುವ ಪುಸ್ತಕಗಳು ಮತ್ತು ಪರಿಕರಗಳನ್ನು ವಿತರಿಸಲಾಯಿತು
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ನಂದಿಗುಂದ ಹಿರಿಯ ಪ್ರಾಥಮಿಕ ಶಾಲೆಯ 35 ಮಕ್ಕಳಿಗೆ ದಾನಿಗಳಾದ ಕಂಟ್ರಾಕ್ಟ್ ದಾರರು ಅಬ್ದುಲ್ ಮೇಸ್ತ್ರಿ ರವರು ಮಕ್ಕಳಿಗೆ ಉಚಿತ ಬರೆಯುವ ಎಲ್ಲಾ ಪುಸ್ತಕಗಳು ಮತ್ತು ಕಂಪಾಸ್ ಮತ್ತು ಪೆನ್ನು ಮತ್ತು ಪೆನ್ಸಿಲ್ (ಅಂದರೆ 1ವಿದ್ಯಾರ್ಥಿಗೆ 1ವರ್ಷಕ್ಕೆ ಆಗುವಷ್ಟು ಎಲ್ಲಾ ತರದ ಪುಸ್ತಕಗಳು) ವಿತರಿಸಲಾಯಿತು ಈ ಸಂದರ್ಭದಲ್ಲಿ ನಂದಿಗುಂದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಗಣಪತಿ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆಯು ಉತ್ತಮವಾದ ಜನಪರ ಕೆಲಸಗಳು ಮಾಡಿಕೊಂಡು ಬರುತ್ತಿದ್ದು ಹಾಗೆಯೇ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ ಹಾಗೆ ಇವತ್ತು ನಮ್ಮ ಶಾಲೆಗೆ ಉಚಿತ ಬರೆಯುವ ಪುಸ್ತಕಗಳನ್ನು ದಾನಿಗಳು ವಿತರಣೆ ಮಾಡುತ್ತಿದ್ದಾರೆ ಹಾಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಅವರಿಗೆ ಹಾಗೂ ದಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು . ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಕಾರ್ಯದರ್ಶಿ ರಾಮನಹಳ್ಳಿ ಪ್ರವೀಣ್ ಅವರು ಮಾತನಾಡಿ ಪ್ರತಿ ವರ್ಷದಂತೆ ಕನ್ನಡ ಶಾಲೆಗಳ ಉಳಿವಿಗಾಗಿ ಬಡ ವಿದ್ಯಾರ್ಥಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಪುಸ್ತಕಗಳ ವಿತರಣೆ ಮಾಡುತ್ತೇವೆ ದಾನಿಗಳ ಸಹಕಾರದೊಂದಿಗೆ ಪ್ರತಿ ವರ್ಷ ನಮಗೆ ಸಹಕಾರ ನೀಡುವ ದಾನಿಗಳಾದ ಅಬ್ದುಲ್ ಮೇಸ್ತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು ಹಾಗೂ ಮಕ್ಕಳಿಗೆ ಓದು ತುಂಬಾ ಅಗತ್ಯ ಎಂದು ಹಿತ ನುಡಿ ನುಡಿದರು . ಇದೇ ಸಂದರ್ಭದಲ್ಲಿ ಪುಸ್ತಕ ದಾನಿಗಳಾದ ಅಬ್ದುಲ್ ಮೇಸ್ತ್ರಿ ಅವರಿಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು ಸೇರಿ ದಾನಿಗಳಿಗೆ ಸನ್ಮಾನಿಸಿದರು ..
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಹಾಗೂ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಿಕಮ್ಮ ಹಾಗೂ ಗೌಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್ ಹಾಗೂ ಗೌಡಳ್ಳಿ ಗ್ರಾಪಂ ಸದಸ್ಯರಾದ
ವಿಶಾಲಾಕ್ಷಿ ಆನಂದ್ ಮತ್ತು ಕರವೇ ತಾಲ್ಲೂಕು ಕಾರ್ಯದರ್ಶಿಗಳಾದ ಗ್ರಾಮದಲ್ಲಿ ಪ್ರವೀಣ್ ಹಾಗೂ ಕರವೇ ಗ್ರಾಮ ಘಟಕದ ಅಧ್ಯಕ್ಷರಾದ ಹರೀಶ್ ಹಾಗೂ ಕರವೇ ಶನಿವಾರಸಂತೆ ಮಹಿಳಾ ಘಟಕದ ಅಧ್ಯಕ್ಷರಾದ ಕುಸುಮಾ ಹಾಗೂ ಕರವೇ ಶನಿವಾರಸಂತೆ ಉಪಾಧ್ಯಕ್ಷರಾದ ರಫೀಕ್ ಹಾಗೂ ಕರವೇ ಮಾಲಂಬಿ ಘಟಕದ ಅಧ್ಯಕ್ಷರಾದ ಸುನೀಲ್ ಹಾಗೂ ಧರ್ಮಾಚಾರಿ ಹಾಗೂ ರಾಜಣ್ಣ ಹಾಗೂ ಮೋಹನ್ ಇನ್ನಿತರರು ಹಾಜರಿದ್ದರು ಮತ್ತು ನಂದಿಗುಂದ ಶಾಲೆಯ ಮುಖ್ಯೋಪಾಧ್ಯಾಯರು ಗಣಪತಿ ಹಾಗೂ ಶಾಲಾ ಸಹಶಿಕ್ಷಕರು ಹಾಗೂ ಅಂಗನವಾಡಿ ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು