ಬೆಂಗಳೂರು : ಬೆಂಗಳೂರಿನ ಜಾಲಹಳ್ಳಿಯಲ್ಲಿರೋ BEL Composite PU Collegeನ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಲಿತಾಂಶ ಉತ್ತಮ ಪಡೆದಿದೆ.ಕಾಲೇಜಿನ ಪಿಸಿಎಂಬಿ ವಿಭಾಗದಲ್ಲಿ ಕುಮಾರಿ ಜನ್ಯ ಪ್ರಗ್ಯಾ ಜಿ 590 ಅಂಕ ಪಡೆದಿದ್ದು, ರಸಾಯನ ಶಾಸ್ತ್ರ ಮತ್ತು ಗಣೀತ ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ.
ಪಿಸಿಎಂಇ ವಿಭಾಗದಲ್ಲಿ ಕುಮಾರಿ ಅಭಿಜ್ನಾ ಸುರೇಶ್ ಬಾಬು 585 ಅಂಕ ಗಳಿಸಿದ್ದು, ಭೌತಶಾಸ್ತ್ರ, ಗಣಿತ ಮತ್ತು ಎಲೆಕ್ಟ್ರಾನಿಕ್ ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ
ಎಸ್ಇಬಿಎ ವಿಭಾಗದಲ್ಲಿ ಕುಮಾರಿ ಸೌಜನ್ಯ ಎಸ್ 574 ಅಂಕ ಗಳಿಸಿದ್ದು, ಲೆಕ್ಕಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ
ಎಸ್ಇಬಿಎ ವಿಭಾಗದಲ್ಲಿ ಕುಮಾರಿ ಸುಷ್ಮಿತಾ ಕೆ 574 ಅಂಕ ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಅಜಯ್ ಕುಮಾರ್ ಕೆ ವಿ 512 ಅಂಕ ಗಳಿಸಿದ್ದಾರೆ.
34 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಗಳಿಸಿದ್ದಾರೆ.
118 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು.ಈ ಮಕ್ಕಳ ಸಾಧನೆಗೆ ಬಿಇಎಲ್ ಎಜ್ಯುಕೇಷನ್ ಸೊಸೈಟಿಯ ಆಡಳಿತ ಮಂಡಳಿ ಹಾರ್ದಿಕ ಅಭಿನಂದನೆ ಸಲ್ಲಿಸಿದೆ.