ಕೃತಜ್ಞತೆ ಸಲ್ಲಿಸಬೇಕು. ಕೇವಲ ಸನ್ಮಾನ, ಹೊಗಳಿಕೆಗಳೇ ಕೃತಜ್ಞತೆಯಲ್ಲ. ಅಲ್ಪ ಉಪಕಾರ ಮಾಡಿದವರನ್ನೂ ಸ್ಮರಿಸಬೇಕು.
ನಮ್ಮ ಸಂಸ್ಕ್ರತಿ ಮರೆಯುತ್ತಿರುವುದು ಭಗವಂತನ ವಿರುದ್ಧ ಅನುಸರಿಸುವ ಕ್ರಮ. ದೇಹ, ಪಂಚೇಂದ್ರಿಯಗಳು ಹಾಗೂ ನಮಗೆ ಬೇಕಾದ ಎಲ್ಲ ವಸ್ತುಗಳನ್ನು ನೀಡಿರುವ ಪರಮಾತ್ಮನನ್ನು ಸ್ಮರಿಸುವುದೇ ನಿಜವಾದ ಕೃತಜ್ಞತೆ.
ಸಣ್ಣ ಉಪಕಾರ ಮಾಡಿದ ಮಿತ್ರನಿಗೆ ಕೃತಜ್ಞತೆ ಹೇಳುತ್ತೇವೆ. ಆದರೆ ಜೀವನದುದ್ದಕ್ಕೂ ಉಪಕಾರ ಮಾಡುವ ಭಗವಂತನಿಗೆ ಯಾರೂ ಕೃತಜ್ಞತೆ ಸಲ್ಲಿಸುತ್ತಿಲ್ಲ. ಉಪಕಾರ ಮಾಡಿದವರನ್ನು ಎಂದೂ ಮರೆಯಬಾರದು. ಚಿಕ್ಕ ಸಹಾಯ ಮಾಡಿದರೂ ಅದು ಉಪಕಾರವೇ ಸರಿ.
ಸುಂದರವಾದ ಜಗತ್ತನ್ನು ಭಗವಂತ ಸೃಷ್ಟಿಸಿ, ನಾನಾ ತರಹದ ಹಣ್ಣುಗಳನ್ನು , ನೀರು, ಗಾಳಿ, ಬೆಳಕನ್ನು ನೀಡಿ ನಮ್ಮ ಬದುಕಿಗೆ ಕಾರಣೀಭೂತನಾದ ಭಗವಂತನನ್ನು ನಾವು ಸ್ಮರಿಸುವುದಿಲ್ಲ. ಆತನು ಮಾಡಿದ ಉಪಕಾರಕ್ಕಿಂತ ದೊಡ್ಡ ಉಪಕಾರ ಇನ್ಯಾರಾದರೂ ಮಾಡಿದ್ದಾರೆಯೇ ? ಪ್ರತಿ ದಿನವೂ ಉಪಕಾರ ಸ್ಮರಣೆ ಮಾಡಬೇಕು. ಜನ್ಮ ಪಾವನಕ್ಕಾಗಿ ಪರಮಾತ್ಮನ ಸ್ಮರಣೆ ಅಗತ್ಯವಾಗಿದೆ.
ಬದುಕನ್ನೇ ನಾಶ ಮಾಡುವ ಪಾಶ್ಚಿಮಾತ್ಯರ ಸಂಸ್ಕೃತಿಗೆ ಮಾರು ಹೋಗಿದ್ದರಿಂದಲೇ ನಮ್ಮ ಬದುಕು ದಯನೀಯವಾಗಿದೆ.
ಭಾರತೀಯ ಭವ್ಯ ಪರಂಪರೆಯನ್ನು ಬಿಟ್ಟು ಹಾಳಾದ ಪರದೇಶಿ ಸಂಸ್ಕೃತಿ ಅಳವಡಿಸಿ ಕೊಳ್ಳುತ್ತಿರುವುದು ನಮ್ಮ ದುರ್ಗತಿಯೇ ಸರಿ.
ಇಡೀ ಜಗತ್ತಿಗೆ ಜ್ಞಾನ ನೀಡಿದ ದೇಶ ನಮ್ಮದು. ಎಲ್ಲ ರಾಷ್ಟ್ರಗಳು ನಮ್ಮ ಭವ್ಯ ಸಂಸ್ಕೃತಿಯನ್ನು ಅನುಸರಿಸಿ ಉದ್ಧಾರವಾಗುತ್ತಿರುವಾಗ ನಮಗೇಕೆ ಬೇರೆಯವರ ಸಂಸ್ಕೃತಿ ಬೇಕು ?
ತಂದೆ ತಾಯಂದಿರು ಮನೆಯಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ ಕಲಿಸುತ್ತಿಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ತಾವೂ ಕೆಡುವುದಲ್ಲದೆ ಮಕ್ಕಳನ್ನೂ ಕೆಡಿಸುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿ ಮಕ್ಕಳಲ್ಲಿ ಕಲಿಸುತ್ತಿರುವುದು ಒಂದು ರೀತಿಯಲ್ಲಿ ಭಗವಂತನ ಆದೇಶ ಉಲ್ಲಂಘಿಸಿದಂತೆ.
( ಹಿರಿಯರಿಂದ ಕೇಳಿದ್ದು )
- ನೀಲಕಂಠ ದಾತಾರ.
Source : Wht'sapp