ಬಳ್ಳಾರಿ ಜೂನ್ 11. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಳ್ಳಾರಿ ವಿಭಾಗದಿಂದ ಆಯೋಜಿಸಿರುವ ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ಇಂಜಿನಿಯರಿಂಗ್, ಮೆಡಿಕಲ್ ಕೋರ್ಸ್‍ಗಳಿಗೆ ಸೇರಬಯಸುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಶಿಬಿರ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ CET, NEET ತರಬೇತಿ ಶಿಬಿರವನ್ನು ಈ ತರಗತಿಗಳ ಪ್ರವೇಶಾತಿ ದಿನಾಂಕ 25.04.2022 ರಿಂದ ಪ್ರಾರಂಭಿಸಿ, ದಿನಾಂಕ 10.06.2022ರಂದು ಮುಕ್ತಾಯಗೊಳಿಸಲಾಯಿತು. ಬಳ್ಳಾರಿ ನಗರದ ಶ್ರೀಮೇಧ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ (ಕೋಟೆ) ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
25 ದಿನಗಳ ಉಚಿತ ಸಿಇಟಿ ಮತ್ತು ನೀಟ್ ತರಬೇತಿಯ ತರಗತಿಗಳು ಸಮರ್ಪಕವಾಗಿ ನಡೆದವು. ಬಳ್ಳಾರಿ ನಗರದ ಕೆಲವು ಪ್ರತಿಷ್ಠಿತ ಕಾಲೇಜುಗಳಾದ ಶ್ರೀ ಚೈತನ್ಯ, ಪೀಪಲ್ ಟ್ರೀ, ಬಿಪಿಎಸ್‍ಸಿ, ನಂದಿ ಇಂಟರ್ ನ್ಯಾಷನಲ್, ವಶಿಷ್ಠ, ಸತ್ಯಂ, ವೀರಶೈವ ಕಾಲೇಜುಗಳಿಂದ ಅನುಭವಿ ಪ್ರಾಧ್ಯಾಪಕರು ಬಂದು ಉಪನ್ಯಾಸ ಮಾಡಿದ್ದಾರೆ ಎಂದು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಕೌಶಿಕ್ ತಿಳಿಸಿದರು. ಶ್ರೀಮೇಧ ಪದವಿ ಕಾಲೇಜು ಪ್ರಾಂಶುಪಾಲರಾದ ರಾಮ್‍ಕಿರಣ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಹಿರಿಯರು ವಿದ್ಯಾರ್ಥಿ ಸೇವಾ ಸಮಿತಿ ಅಧ್ಯಕ್ಷರಾದ ಹೆಚ್.ಹರಿಕುಮಾರ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಹಾಗೂ ಅಭಾವಿಪ ಬಳ್ಳಾರಿ ಜಿಲ್ಲಾ ಸಂಚಾಲಕರಾದ ವಿನೋದ್‍ರವರು, ಅಭಾವಿಪ ನಗರ ಸಹಕಾರ್ಯದರ್ಶಿಯಾದ ಶ್ರೀನಿವಾಸ್ ರವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಅಭಾವಿಪ ವಿಭಾಗ ಸಂಚಾಲಕರಾದ ಹರ್ಷನಾಯಕ್ ಮತ್ತು ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಈರಣ್ಣ ಮತ್ತು ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಾದ ಭೀಮೇಶ್, ಹುಲೇಶ್, ಶ್ರೀಧರ್, ಪವಿತ್ರ, ರೋಹಿಣಿ, ರೇಖಾ ಮುಂತಾದವರು ಪಾಲ್ಗೊಂಡಿದ್ದರು.