ಚಾಲಕನ ಮಗ ಐ.ಪಿ.ಎಸ್ – ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷರಿಂದ ಸನ್ಮಾನ

varthajala
0

ಬೆಂಗಳೂರು, ಜೂನ್ 22, (ಕರ್ನಾಟಕ ವಾರ್ತೆ) : ನಾನು ಚಾಲಕ, ನಿರ್ವಾಹಕ ಅಥವಾ ಮೆಕ್ಯಾನಿಕ್ ಆಗಿರಬಹುದು ಆದರೆ ನನ್ನ ಮಗ/ ಮಗಳು ವೈದ್ಯ/ ಇಂಜಿನಿಯರ್ ಎಲ್ಲದಕ್ಕೂ ಹೆಚ್ಚಾಗಿ IAS  ಆಗಬೇಕೆಂಬ ಮಹದಾಸೆ ಪ್ರತಿಯೊಬ್ಬರ ಕನಸಾಗಿರುತ್ತದೆ.


ಈ ರೀತಿಯ ಕನಸನ್ನು ಸಾಕಾರಗೊಳಿಸಿದ ನಮ್ಮ ಸಂಸ್ಥೆಯ ಚಾಲಕರ ಮಗ .ಅನುರಾಗ್ ಧರು. ಕಲ್ಯಾಣ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ,ಬೀದರ್ ವಿಭಾಗದ ,ಭಾಲ್ಕಿ ಘಟಕದ ಚಾಲಕ  ಮಾಣಿಕ್ ರಾವ್ ರವರ ಮಗನಾದ .ಅನುರಾಗ್ ಧರು , ಅವರು ಭಾರತೀಯ ಆಡಳಿತ ಸೇವೆಯ ಪರೀಕ್ಷೆಯಲ್ಲಿ 569 ನೇ  ಸ್ಥಾನ ಪಡೆದು, IPS ಗೆ ಸೇರ್ಪಡೆ ಆಗಿರುತ್ತಾರೆ.  ಇದು ನಮ್ಮ ಸಾರಿಗೆ ಸಂಸ್ಥೆಗೆ ಹೆಮ್ಮೆಯ ವಿಷಯ .

  ಅನುರಾಗ್ ರವರನ್ನು ಮತ್ತು ಅವರ ತಂದೆ ತಾಯಿಯವರನ್ನು ಇಂದು ಕೆ ಎಸ್ ಆರ್ ಟಿ ಸಿ ಕೇಂದ್ರ ಕಛೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ .ಎಂ. ಚಂದ್ರಪ್ಪ, ಮಾನ್ಯ ಶಾಸಕರು ಹಾಗೂ ಅಧ್ಯಕ್ಷರು,       ಕೆ ಎಸ್ ಆರ್ ಟಿ ಸಿ ರವರು ಮಾತನಾಡುತ್ತಾ,ನಮ್ಮ ಚಾಲನಾ ಸಿಬ್ಬಂದಿಗಳು ಹಗಲಿರುಳು ಬಸ್ಸುಗಳನ್ನು ಚಾಲನೆ ಮಾಡುತ್ತಾ, ಕಷ್ಟಪಟ್ಟು ದುಡಿಯುತ್ತಿರುತ್ತಾರೆ.ಅಂತಹ ಸಂದರ್ಭದಲ್ಲಿಯೂ ಅವರ ಮಕ್ಕಳಿಗೆ ಅತ್ಯುನ್ನತ ವಿದ್ಯಾಭ್ಯಾಸ ನೀಡಿಸುವಲ್ಲಿ ಸಫಲರಾಗಿರುವುದು ನಿಜಕ್ಕೂ ಶ್ಲಾಘನೀಯ ಹಾಗೂ ಮಾದರಿಯಾದದದ್ದು. ಅವರ ತಂದೆ ಮಾಣಿಕ್ ರಾವ್ ,ತಾಯಿ ಕಾಶಿಬಾಯಿ ಅವರಿಗೆ ಅನಂತ ಅಭಿನಂದನೆಗಳು. ಹಾಗೂ ಅನುರಾಗ್ ಅವರು ತಮ್ಮ ಆಡಳಿತದಲ್ಲಿ ಸಮಾಜದ ಕೆಳಮಟ್ಟದ ಪ್ರತಿಯೊಬ್ಬ ಪ್ರಜೆಯ, ನೊಂದರವರ ಕೂಗಿಗೆ ಧ್ಬನಿಯಾಗಬೇಕು. ಅದೇ ರೀತಿ ನಮ್ಮ ಕೆ.ಎಸ್.ಆರ್.ಟಿ.ಸಿಯ ವ್ಯವಸ್ಥಾಪಕ ನಿರ್ದೇಶಕರು ಬೆಳಿಗ್ಗೆ 9 ಗಂಟೆಗೆ ಕಛೇರಿಗೆ ಬಂದು ತಮ್ಮ ಕರ್ತವ್ಯವನ್ನು ಪ್ರಾರಂಭಿಸುತ್ತಾರೆ, ಇಂತಹ ಅಧಿಕಾರಿಗಳು ಸಮಾಜಕ್ಕೆ ಮಾದರಿ. ಯಾರೋ ನಮ್ಮನ್ನು ಕೇಳುತ್ತಾರೆ ಎಂದು ಕಾರ್ಯ ನಿರ್ವಹಿಸಬಾರದು ನಾವೇ ನಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದ್ದಲ್ಲಿ ನಮ್ಮಿಂದ ಸಮಾಜಕ್ಕೆ ಒಳಿತಾಗುತ್ತದೆ ಅದು ಶ್ರೀ.ಅನುರಾಗ್ ಅವರಿಂದ ಆಗಲಿ ಎಂದು ಆಶಿಸಿದರು.

ಅನ್ಬುಕುಮಾರ್ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಮಾತನಾಡುತ್ತಾ, ಭಾರತೀಯ ಆಡಳಿತ ಸೇವೆ        IAS  ಮಾಡಬೇಕೆಂಬುದು ಬಹಳಷ್ಟು ಮಂದಿಯ ಕನಸ್ಸಾಗಿದ್ದರೂ ಅದು ಒಂದು ತಪಸ್ಸು, ಸತತ ಪರಿಶ್ರಮ , ಶ್ರದ್ಧೆಯ ಮೂಲಕ ನಿರಂತರ, ನಿಯಮ ಬದ್ಧ ಕಲಿಕೆಯ ಸಾಧನೆ.  ನಮ್ಮ ಚಾಲಕರ ಮಗ ಮಾಡಿರುವ ಈ ಸಾಧನೆ, ನಮ್ಮ ಸಂಸ್ಥೆಯ ಹೆಮ್ಮೆ ಹಾಗೂ ಗೌರವವಾಗಿದೆ. ಮುಂದುವರೆಸಿ ಮಾತನಾಡುತ್ತಾ, ಮಾನ್ಯ ಅಧ್ಯಕ್ಷರು ತಿಳಿಸಿದಂತೆ ನೀವು ಸಮಾಜಕ್ಕೆ ಮಾದರಿಯಾಗುವಂತಹ ಕೆಲಸ ನಿರ್ವಹಿಸಿ, ನಿಮ್ಮ ಈ ಸಾಧನೆಗೆ ನಿಮ್ಮ ತಂದೆ ತಾಯಿಯ ಪಾತ್ರ ಬಹಳ ಹಿರಿದು ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ನಮ್ಮ ಸಂಸ್ಥೆಯ ಬಹಳಷ್ಟು ಚಾಲಕ ನಿರ್ವಾಹಕ ಹಾಗೂ ಮೆಕ್ಯಾನಿಕ್ ಗಳ ಮಕ್ಕಳು ಇಂಜಿನಿಯರಿಂಗ್ ,ಮೆಡಿಕಲ್, IIT, IIM, MS, Navy  ಯಲ್ಲಿದ್ದಾರೆಂಬುದು ಅತ್ಯಂತ ಸಂತೋಷ ಹಾಗೂ ಅಭಿಮಾನದ ವಿಷಯ. ಇದು ಹೀಗೆ ಮುಂದುವರೆಯಲಿ, ಅನುರಾಗ್ ಅವರು ಸಮಾಜಪರ ಕಾರ್ಯದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ  ಡಾ.ನವೀನ್ ಭಟ್ ವೈ, ಭಾಆಸೇ, ನಿರ್ದೇಶಕರು (ಸಿಬ್ಬಂದಿ & ಭದ್ರತಾ),  ಮಾಣಿಕ್ ರಾವ್ ಚಾಲಕರು, (ಅನುರಾಗ್ ಅವರ ತಂದೆ) ಶ್ರೀಮತಿ ಕಾಶಿಬಾಯಿ (ಅನುರಾಗ್ ಅವರ ತಾಯಿ) ಅವರ ಸಂಬಂಧಿಕರು ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.  

Post a Comment

0Comments

Post a Comment (0)