ವಿದ್ಯುತ್ ಮಗ್ಗ ನೇಕಾರರ ಹಾಗೂ ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ಘಟಕಗಳ ಸಮೀಕ್ಷೆಯಲ್ಲಿ ನೋಂದಾಯಿಸಲು ಸೂಚನೆ

varthajala
0

ಬೆಂಗಳೂರು, ಜೂನ್ 29 (ಕರ್ನಾಟಕ ವಾರ್ತೆ) : ರಾಜ್ಯದಲ್ಲಿನ ವಿದ್ಯುತ್ ಮಗ್ಗ ನೇಕಾರರ ಹಾಗೂ ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ಘಟಕಗಳು ಮತ್ತು ನೇಕಾರರ ಗಣತಿಯನ್ನು ಕೈಗೊಳ್ಳಲು  M/S Academy of Management Studies, New Delhi / Luknow ಈ ಸಂಸ್ಥೆಗೆ ಗಣತಿ ಕೈಗೊಳ್ಳಲು ಅನುಮೋದನೆಯನ್ನು ನೀಡಲಾಗಿದೆ.

 ಈಗಾಗಲೇ ಈ ಸಂಸ್ಥೆಯವರು ರಾಜ್ಯದಲ್ಲಿ ವಿದ್ಯುತ್ ಮಗ್ಗ ನೇಕಾರರ ಹಾಗೂ ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ಘಟಕಗಳು ಮತ್ತು ಕೆಲಸಗಾರರ ಗಣತಿ / ಸಮೀಕ್ಷೆ ಕಾರ್ಯವನ್ನು ಡಿಸೆಂಬರ್  - 2021 ರಿಂದ ಆರಂಭಿಸಿದ್ದು, ಪ್ರಸ್ತುತ ಗಣತಿ / ಸಮೀಕ್ಷೆ ಕಾರ್ಯವು ಮುಕ್ತಾಯ ಹಂತದಲ್ಲಿದೆ.

ಈ ಸಂಸ್ಥೆಯು ಕ್ಷೇತ್ರ ಮಟ್ಟದಲ್ಲಿ ಗಣತಿ /ಸಮೀಕ್ಷೆ ಕಾರ್ಯವನ್ನು ಬಹುತೇಕ ಪೂರ್ಣಗೊಳಿಸಿದ್ದು, ಯಾವುದಾದರೂ ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳು ಗಣತಿ / ಸಮೀಕ್ಷೆಯಲ್ಲಿ ನೋಂದಾಯಿಸದಿದ್ದಲ್ಲಿ ಅಂತಹ ಘಟಕಗಳು ಸರ್ಕಾರದಿಂದ ಪಡೆಯುತ್ತಿರುವ ಸೌಲಭ್ಯಗಳು ರದ್ದತಿಯಾಗುವ ಹಾಗೂ ಇನ್ನು ಮುಂದೆ ಸರ್ಕಾರದಿಂದ ಪಡೆಯಬಹುದಾದ ಸೌಲಭ್ಯಗಳಿಂದ ವಂಚಿತರಾಗುವ ಸಂಭವವಿರುತ್ತದೆ.  

ಆದ್ದರಿಂದ ಸಮೀಕ್ಷೆಯಲ್ಲಿ ಸೇರ್ಪಡೆಯಾಗದಿದ್ದಲ್ಲಿ ಅಂತಹ ಘಟಕಗಳು ಈ ಕೂಡಲೇ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಂಬಂಧಪಟ್ಟ ಜಿಲ್ಲಾ ಮಟ್ಟದ ಕಛೇರಿಯನ್ನು ಸಂಪರ್ಕಿಸಿ ಘಟಕದ / ನೇಕಾರರ ಮಾಹಿತಿಯನ್ನು ನೀಡಬೇಕು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.



Tags

Post a Comment

0Comments

Post a Comment (0)