ಹಿಂದೂಗಳು ಶ್ರೀಮದ್ ಭಗವದ್ಗೀತೆ ಕಲಿಯಲು ಬಯಸಿದರೆ ಠರಾವನ್ನು ಅಂಗೀಕರಿಸಬೇಕು ! - ಶ್ರೀ. ರಮೇಶ ಶಿಂದೆ

varthajala
0

ಸರ್ವೋಚ್ಚ ನ್ಯಾಯಾಲಯವು ಶ್ರೀಮದ್ ಭಗವದ್ಗೀತೆಯನ್ನು ‘ರಾಷ್ಟ್ರೀಯ ಗ್ರಂಥ’ ಎಂದು ಮಾನ್ಯತೆಯನ್ನು ನೀಡಲು ನಿರಾಕರಿಸಿದ್ದರಿಂದ ‘ಗೀತೆಯನ್ನು ಶಿಕ್ಷಣದಲ್ಲಿ ಅಳವಡಿಸಲು ಅಯೋಗ್ಯ’ವಾಗಿದೆ, ಇಂತಹ ಪ್ರಸ್ತಾವನೆಯನ್ನು ಈ ಸಂಸತ್ತಿನಲ್ಲಿ ವಿರೋಧಿ ಪಕ್ಷದ ಸದಸ್ಯರು ಮಂಡಿಸಿದಾಗ ಅದನ್ನು ಖಂಡಿಸಿದ ಶ್ರೀ. ರಮೇಶ ಶಿಂದೆ ಇವರು, “ಶಾಹಬಾನೊ ಖಟ್ಲೆಯಲ್ಲಿ ಮುಸಲ್ಮಾನರ ಓಲೈಕೆಗಾಗಿ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪು ಆಗಿನ ಸಂಸತ್ತು ಬದಲಾಯಿತು. ಆದುದರಿಂದ ಬಹುಸಂಖ್ಯಾತ ಹಿಂದೂಗಳು ಶ್ರೀಮದ್ ಭಗವದ್ಗೀತೆಯನ್ನು ಕಲಿಯಲು ಬಯಸಿದರೆ ಅಂತಹ ಠರಾವನ್ನು ಅಂಗೀಕರಿಸುವ ಹಕ್ಕು ಸಾರ್ವಭೌಮ ಸಂಸತ್ತಿಗೆ ಇದೆ” ಎಂದು ಹೇಳಿದರು. 

ವಿರೋಧಿ ಪಕ್ಷದ ಸದಸ್ಯರೊಬ್ಬರು, “ಶಿಕ್ಷಣದಲ್ಲಿ ಇತರ ಭಾಷೆಗಳ ಜೊತೆಗೆ ಆಂಗ್ಲವನ್ನೂ ಕಲಿಸುವುದು ಅಗತ್ಯವಾಗಿದೆ !” ಎಂದು ಹೇಳಿದ ಪ್ರಸ್ತಾಪನೆಯನ್ನು ಖಂಡಿಸಿದ ಶ್ರೀ. ರಮೇಶ ಶಿಂದೆ ಇವರು, “ನಮ್ಮಲ್ಲಿ ಜನನದ ನಂತರದಿಂದ ಮಾತ್ರವಲ್ಲದೇ ಮಹಾಭಾರತ ಕಾಲದಲ್ಲಿ ಅಭಿಮನ್ಯುವು ಗರ್ಭದಲ್ಲಿ ಜ್ಞಾನ ಪಡೆದ ಉದಾಹರಣೆ ನಮ್ಮ ಮುಂದಿದೆ. ಹಾಗಾಗಿ ಮಾತೃಭಾಷೆಗೆ ಗರ್ಭದಲ್ಲಿ ಜ್ಞಾನ ನೀಡುವ ಶಕ್ತಿ ಇರುವಾಗ ಆ ಸ್ಥಳದಲ್ಲಿ ಆಂಗ್ಲ ಶಿಕ್ಷಣದ ಅಗತ್ಯ ಏನಿದೆ ? ಬ್ರಿಟಿಷರ ಆಳ್ವಿಕೆಗೆ ಒಳಗಾದ ಹಲವು ದೇಶಗಳು ಈಗ ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿವೆ. ಭಾರತ ಯಾವಾಗ ಈ ಗುಲಾಮಗಿರಿಯಿಂದ ಹೊರಬರುವುದು ? ಆದ್ದರಿಂದ ಭಾರತದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಮಾತೃಭಾಷೆಯನ್ನು ಕಲಿಸಬೇಕು’ ಎಂದು ಹೇಳಿದರು.

ಶ್ರೀ. ಅಭಯ ಭಂಡಾರಿ ಅವರು ಮಂಡಿಸಿದ, “ಶಿಕ್ಷಕರನ್ನು ನೇಮಕ ಮಾಡುವಾಗ ಕೇವಲ ಶೈಕ್ಷಣಿಕ ಮೌಲ್ಯವನ್ನು ನೋಡದೆ, ಶುದ್ಧ ಚಾರಿತ್ರ್ಯದ ಶಿಕ್ಷಕರೂ ಬೇಕು !” ಈ ಪ್ರಸ್ತಾಪನೆಯನ್ನು ಅಂಗೀಕರಿಸಿದ ಉಪಸಭಾಪತಿ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು, “ಪ್ರಸ್ತುತ ಸ್ಥಿತಿಯಲ್ಲಿ ಹಣ ಕೊಟ್ಟು ಶಿಕ್ಷಕರನ್ನು ನೇಮಿಸಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ವಿಷಯ ಸರಿಯಾಗಿ ಅರ್ಥವಾಗದೆ ಹರಟೆ ಹೊಡೆಯುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ” ಎಂದು ಹೇಳಿದರು. ಸಂಸತ್ತಿನ ವಿಶೇಷ ಸಮಿತಿಯ ಸದಸ್ಯರಾದ ನ್ಯಾಯವಾದಿ ಉಮೇಶ ಶರ್ಮಾ ಇವರು ಮಾತನಾಡುತ್ತಾ, “ಆಂಗ್ಲವು ಕೇವಲ ಭಾಷೆಯೇ ಹೊರತು ಜ್ಞಾನವಲ್ಲ ! ಭಾರತದ ಪ್ರತಿಯೊಂದು ಪ್ರಾದೇಶಿಕ ಭಾಷೆಯು ಸಮೃದ್ಧವಾಗಿದ್ದು ಆಂಗ್ಲ ಕಲಿಸುವ ಅಗತ್ಯವಿಲ್ಲ” ಎಂದು ಹೇಳಿದರು. ಈ ಸಮಯದಲ್ಲಿ ಅಂಗೀಕರಿಸಲಾದ ಠರಾವಿನಲ್ಲಿ ‘ಭಾರತೀಯ ಸಂಸ್ಕೃತಿಯೊಂದಿಗೆ ಸಂಬಂಧವಿಲ್ಲದಿರುವ ಹಬ್ಬಗಳನ್ನು ಶಾಲೆಗಳಲ್ಲಿ ಆಚರಿಸಬಾರದು’, ‘ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡಬೇಕು’, ‘ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆಯನ್ನು ಕಲಿಸಬೇಕು’, ಇವುಗಳೊಂದಿಗೆ ಇತರ ಠರಾವುಗಳು ಸಹ ಇದ್ದವು.

Post a Comment

0Comments

Post a Comment (0)