ಬೆಂಗಳೂರು: ಚೆನ್ನೈನ ಷೇರಿಂಗ್ ಮತ್ತು ಸರ್ವಿಂಗ್ ಪಬ್ಲಿಕ್ ಚಾರಿಟಬಲ್ ಟ್ರಸ್ಟಿನ ಬೆಂಗಳೂರು ಶಾಖೆಯು ಗ್ರಾಮಾಂತರ ಸರ್ಕಾರೀ ಶಾಲಾ ಮಕ್ಕಳಿಗೆ ಶಿಕ್ಷಣ ಪರಿಕರಗಳನ್ನು ಒದಗಿಸುತ್ತಾ ಬಂದಿದೆ.
ಬೆಂಗಳೂರಿನ ಈ ಶಾಖೆ ಕಳೆದ ಐದು ವರ್ಷಗಳಿಂದ ಈ ನೆರವನ್ನು ನೀಡುತ್ತ ಬಂದಿದೆ.
ತದಂಗವಾಗಿ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ 21 ಪ್ರಾಥಮಿಕ ಶಾಲೆಗಳ ಸಾವಿರದ ಆರುನೂರು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಜಾಮಿಟ್ರೀ ಬಾಕ್ಸ್, ಪ್ರೆಸ್ಟೀಜ್ ನೀರಿನ ಬಾಟಲು ಪೆನ್ಸೀಲ್ ಬಾಕ್ಸ್ ಹಾಗೂ ಶಾಲೆಗಳಿಗೆ ಐವತ್ತು ವಿದ್ಯಾರ್ಥಿಗಳಿಗೆ ಒಂದರಂತೆ ಪ್ರೆಸ್ಟೀಜ್ ವಾಟರ್ ಪ್ಯೂರಿಫಯರ್ ಗಳನ್ನು ಯಲದಬಾಗಿ ಗ್ರಾಮದಲ್ಲಿ ವಿತರಿಸಲಾಯಿತು.
ಜೂನ್ 18ರಂದು ನಡೆದ ಪರಿಕರ ವಿತರಣಾ ಸಮಾರಂಭದಲ್ಲಿ ಬೆಂಗಳೂರು ಶಾಖೆಯ ಅಧ್ಯಕ್ಷ ವೈ.ಆರ್ ಪ್ರಾಣೇಶ್, ಹಿರಿಯ ಪತ್ರಕರ್ತ ವೆಂಕಟನಾರಾಯಣ, ಕೆ.ಜಗನ್ನಾಥ್,ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಯಲದಬಾಗಿ ಸರ್ಕಾರೀ ಶಾಲಾ ಮುಖ್ಯ ಶಿಕ್ಷಕ ಪ್ರಕಾಶ್, ಸಹ ಶಿಕ್ಷಕರಾದ ಸಿದ್ಧಲಿಂಗಪ್ಪ, ಮಂಜುನಾಥ್ ಹಾಗೂ 21ಶಾಲೆಗಳ ಶಿಕ್ಷಕರೂ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನಂತರ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಭೋಜನ ಕೂಟವನ್ನೇರ್ಪಡಿಸಲಾಗಿತ್ತು.ಯಲದಬಾಗಿ ಗ್ರಾಮ ಅಧ್ಯಕ್ಷ ಪ್ರಾಣೇಶ್ ಅವರಹು ಟ್ಟೂರು.
ಜಾಹೀರಾತು