ಜಯನಗರ ವಿಧಾನಸಭಾ ಕ್ಷೇತ್ರ,ಶಾಲಿನಿ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಶನ್ 10ನೇ ವರ್ಷಾಚರಣೆ ಶುಭಾ ಸಂದರ್ಭದಲ್ಲಿ 10ಸಾವಿರ ವಿದ್ಯಾರ್ಥಿಗಳಿಗೆ 1ಲಕ್ಷ ನೋಟ್ ಪುಸ್ತಕ ವಿತರಣೆ ಮತ್ತು ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮವನ್ನು ಕಂದಾಯ ಸಚಿವರಾದ ಆರ್.ಅಶೋಕ್,ಶಾಸಕರಾದ ಮಸಾಲೆ ಜಯರಾಮ್,ಆರ್.ಎಸ್.ಎಸ್.ಮುಖಂಡರಾದ ತಿಪ್ಪೇಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ,ಅದಮ್ಯ ಚೇತನ ಸಂಸ್ಥಾಪಕಿ ಶ್ರೀಮತಿ ತೇಜಸ್ವಿನಿ ಆನಂತ್ ಕುಮಾರ್, ಜಯದೇವ ಆಸ್ಪತ್ರೆ ಮುಖ್ಯಸ್ಥರಾದ ಮಂಜುನಾಥ್, ಮಾಜಿ ಮಹಾಪೌರರಾದ ಎಸ್.ಕೆ.ನಟರಾಜ್, ಮಾಜಿ ಬಿ.ಬಿ.ಎಂ.ಪಿ. ಸದಸ್ಯರು,ರಕ್ಷಾ ಫೌಂಡೇಶನ್ ಗೌರವಾಧ್ಯಕ್ಷರಾದ ಸಿ.ಕೆ.ರಾಮಮೂರ್ತಿ, ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ನಾಗರತ್ನ ರಾಮಮೂರ್ತಿರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು.
ಕಂದಾಯ ಸಚಿವರಾದ ಆರ್.ಅಶೋಕ್ ರವರು ಮಾತನಾಡಿ ಮಕ್ಕಳು ದೇಶದ ಮುಂದಿನ ಪ್ರಜೆಗಳು .ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಿದರೆ,ದೇಶ ಕಟ್ಟುವ ಕೆಲಸ ಮಾಡುತ್ತಾರೆ.
ರಕ್ಷಾ ಫೌಂಡೇಶನ್ ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿದೆ ,ಮನುಷ್ಯನ ಜನ್ಮ ಲಭಿಸಿರುವ ಪುಣ್ಯ. ಸಮಾಜ ಒಳಿತಿಗಾಗಿ ನಮ್ಮ ಜೀವನವನ್ನು ಉಪಯೋಗಿಸಬೇಕು.
ಉತ್ತಮ ಸಮಾಜ ನಿರ್ಮಾಣ ಮಾಡಲು ಮತ್ತು ಮಕ್ಕಳ ಶಿಕ್ಷಣಕ್ಕೆ ರಾಜ್ಯ ಸರ್ಕಾರದ ಜೊತೆಯಲ್ಲಿ ಸ್ವಯಂ ಸೇವಾ ಸಂಘಟನೆಗಳ ಸಹಕಾರ ಅಗತ್ಯ.
ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ರವರು ಮಾತನಾಡಿ ತಂದೆ,ತಾಯಿಗಳ ಪರಿಶ್ರಮದಿಂದ ನಿಮ್ಮನು ಒಳ್ಳೆಯ ಶಾಲೆಗೆ ಸೇರಿಸಿರುತ್ತಾರೆ .
ಪೋಷಕರು ಮತ್ತು ಸಮಾಜ ಮೆಚ್ಚುವು ಹಾಗೇ ವಿದ್ಯಾವಂತರಾಗಿ ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರು,ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರಂತೆ ನೀವು ಆಗಬೇಕು ಎಂದು ಹೇಳಿದರು.
ರಕ್ಷಾ ಫೌಂಡೇಶನ್ ಗೌರವಾಧ್ಯಕ್ಷರಾದ ಸಿ.ಕೆ.ರಾಮಮೂರ್ತಿರವರು ಮಾತನಾಡಿ ರಕ್ಷಾ ಫೌಂಡೇಶನ್ ಕಳೆದ 10ವರ್ಷಗಳಿಂದ ಮಕ್ಕಳ ಶಿಕ್ಷಣ, ಪರಿಸರ ಮತ್ತು ಆರೋಗ್ಯದ ವಿಷಯದ ಬಗ್ಗೆ ಹೆಚ್ಚಿನ ಗಮನಹರಿಸಿ ಸಾರ್ವಜನಿಕರ ಸಹಕಾರದಿಂದ ಶ್ರಮಿಸುತ್ತಿದೆ.
ಯುವ ಶಕ್ತಿ ವಿದ್ಯಾವಂತರಾದರೆ ದೇಶ ಸಧೃಡ,ಸಶಕ್ತವಾಗಿರುತ್ತದೆ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸಹ ಉತ್ತಮ ಜೀವನ ಸಾಗಿಸಲು, ಸಮಾಜ ಮುಖ್ಯವಾಹಿನಿ ತರಲು ರಕ್ಷಾ ಫೌಂಡೇಶನ್ ಶ್ರಮಿಸುತ್ತಿದೆ ಎಂದು ಹೇಳಿದರು.
ರಕ್ಷಾ ಫೌಂಡೇಶನ್ ವಿತರಿಸಿದ ಸೌಲಭ್ಯಗಳು
ಬಿ.ಬಿ.ಎಂ.ಪಿ.ಮತ್ತು ಸರ್ಕಾರಿ ಶಾಲೆ,ಅರೆ ಸರ್ಕಾರಿ 10ಸಾವಿರ ವಿದ್ಯಾರ್ಥಿಗಳಿಗೆ 1ಲಕ್ಷ ನೋಟ್ ಪುಸ್ತಕ ಮತ್ತು 1ಲಕ್ಷ ಪೆನ್ ವಿತರಣೆ ಹಾಗೂ 10ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಹಾಗೂ ಶೇಕಡ 95%ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು 50ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿಕಲಚೇತನರಿಗೆ ವೀಲ್ ಚೇರ್, ಎರಡು ಅನಾಥ ಮಕ್ಕಳಿಗೆ ದತ್ತು ತೆಗೆದುಕೊಂಡು ಸಂಪೂರ್ಣ ವಿದ್ಯಾಭ್ಯಾಸಕ್ಕೆ 50ಸಾವಿರ ಸಹಾಯಧನ ಹಾಗೂ ಜಯದೇವ ಆಸ್ಪತ್ರೆಗೆ ಮಕ್ಕಳ ಹೃದಯ ಚಿಕಿತ್ಯೆಗೆ 2ಲಕ್ಷ ರೂಪಾಯಿ ದೇಣಿಗೆ ನೀಡುವ ಕಾರ್ಯಕ್ರಮ.