ಕನ್ನಡ ಕೃಷಿ ಪುಸ್ತಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

varthajala
0

ಬೆಂಗಳೂರು, ಜೂನ್ 17 (ಕರ್ನಾಟಕ ವಾರ್ತೆ): ಕನ್ನಡದಲ್ಲಿ ಪ್ರಕಟವಾಗಿರುವ ಕೃಷಿ ಸಂಬಂಧಿತ ಕನ್ನಡ ಪುಸ್ತಕಗಳಿಗೆ ‘ಕನ್ನಡಕೃಷಿ ಪುಸ್ತಕ ಪ್ರಶಸ್ತಿ -2021’ ನೀಡುವ ಸಲುವಾಗಿ ಲೇಖಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಪ್ರಶಸ್ತಿಯು ರೂ. 10,000/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಅರ್ಜಿ  ಸಲ್ಲಿಸುವ ಲೇಖಕರು 2021ರ ಜನವರಿಯಿಂದ ಡಿಸೆಂಬರ್ 2021ರ ಒಳಗೆ ಪ್ರಕಟವಾಗಿರುವ ಪುಸ್ತಕಗಳ ತಲಾ ಮೂರು ಪ್ರತಿಗಳನ್ನು ಮುಖ್ಯಸ್ಥರು, ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು-560065 ಇವರಿಗೆ 2022ರ ಜುಲೈ 30ರೊಳಗೆ ತಲುಪುವಂತೆ ಕಳುಹಿಸಬೇಕು.

ಪುಸ್ತಕವು ಕೃಷಿ ಸಂಬಂಧಿತ ವಿಷಯಗಳಲ್ಲಿ ಕನ್ನಡದಲ್ಲಿರಬೇಕು, ಸ್ವಂತ ರಚನೆಯಾಗಿರಬೇಕು, ಅನುವಾದಿತ ಕೃತಿಯಾಗಿರಬಾರದು, ಇತರ ಲೇಖಕರ ಬರಹಗಳ ಸಂಪಾದಿತ ಕೃತಿಯಾಗಿರಬಾರದು, ಮೊದಲ ಪ್ರಕಟಣೆ / ಆವೃತ್ತಿಯಾಗಿರಬೇಕು, ಮರು ಮುದ್ರಿತ / ಪರಿಷ್ಕರಿಸಿದ ಕೃತಿಯಾಗಿರಬಾರದು, ಯಾವುದೇ ಕೃಷಿ ಸಂಬಂಧಿತ ಕೈಪಿಡಿಯಾಗಿರಬಾರದು ಮತ್ತು ಕನಿಷ್ಠ 50 ಪುಟಗಳಷ್ಟಾದರೂ ಇರಬೇಕು.  

ನಿಯಮ ಮತ್ತು ನಿಬಂಧನೆಗಳನ್ನು ಮತ್ತು ಅರ್ಜಿ ನಮೂನೆಯನ್ನು http://uasbangalore.edu.in ಜಾಲತಾಣದಿಂದ ಪಡೆಯಬಹುದು. ಹೆಚ್ಚಿನ ವಿವರಗಳಿಗೆ kannada.uas@gmail.com ಇ-ಮೇಲ್ ವಿಳಾಸಕ್ಕೆ ಅಥವಾ ದೂರವಾಣಿ ಸಂಖ್ಯೆ 080-23330239 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Tags

Post a Comment

0Comments

Post a Comment (0)