ಬೆಂಗಳೂರಿನಲ್ಲಿ ಕೇಶರಕ್ಷಣೆ ಕುರಿತ ವಸ್ತುಪ್ರದರ್ಶನ : ನರೇಶ್ ಕುಮಾರ್

varthajala
0

ಬೆಂಗಳೂರು, ಜೂನ್ 30 (ಕರ್ನಾಟಕ ವಾರ್ತೆ) : ಕರ್ನಾಟಕದಲ್ಲಿ ಕೇಶರಕ್ಷಣೆ ಸಲೂನ್ ಉದ್ಯಮವನ್ನು ಉತ್ತೇಜಿಸಲು ಆಗಸ್ಟ್ 6 ರಿಂದ 9ರ ವರೆಗೆ ಬೆಂಗಳೂರಿನ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್‍ನಲ್ಲಿ  ಕೇಶ ರಕ್ಷಣೆ ಸಲೂನ್ ಮತ್ತು ಸ್ಪಾ ಎಕ್ಸ್‍ಪೋ 2022 ವಸ್ತುಪ್ರದಶನವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಸವಿತಾ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಜ್ಯ ಸಚಿವರಾದ  ಎಸ್. ನರೇಶ್ ಕುಮಾರ್ ತಿಳಿಸಿದರು.

ಇಂದು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೇಶ ರಕ್ಷಣೆ ಸಲೂನ್ ಮತ್ತು ಸ್ಪಾ ಎಕ್ಸ್‍ಪೋ 2022 ಕುರಿತ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲೇ ಮೊದಲಬಾರಿಗೆ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮವು ಫಿನ್‍ಫೇರ್ಸ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಕೇಶ ರಕ್ಷಣೆ ಸಲೂನ್ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.

ಈ ನಾಲ್ಕು ದಿನಗಳ ವಸ್ತಪ್ರದರ್ಶನದಲ್ಲಿ ಕೃತಕ ಮತ್ತು ನೈಜ ಕೇಶ ವಿಗ್ಗುಗಳು, ತರಬೇತಿ ಶಿಬಿರಗಳು, ಕೂದಲ ವಿಸ್ತರಣೆ, ಕಣ್ಣುರೆಪ್ಪೆ ವಿಸ್ತರಣೆ, ಕೂದಲ ಗಾತ್ರ, ಕೈಕಟ್ಟಿ ಕೂದಲ ನೇಯ್ಗೆ, ರಾಸಾಯನಿಕ ಫೈಬನರ್,  ನೈಸಿಕ ಜವಳಿ ವಸ್ತುಗಳು, ಮತ್ತು ಕೂದಲಿಗೆ ಸಂಬಂಧಪಟ್ಟ ಇತರ ಕಚ್ಛಾ ವಸ್ತುಗಳು ಮತ್ತು ಉತ್ಪಾದನಾ ಉಪಕರಣಗಳು ಹಾಗೂ ಕೇಶ ಸಿಂಗರಿಸುವಿಕೆ ಉಪಕರಣಗಳು, ಕೇಶರಕ್ಷಣೆ ಮತ್ತು ಕೇಶ ಬೆಳವಣಿಗೆ, ಕೂದಲ ಬಿಡಿಭಾಗಗಳನ್ನು ಈ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು.

ಕೂದಲು, ಉಗುರು ಮತ್ತು ಸಲೂನ್ ಸರಬರಾಜುಗಳು, ಸೌಂದರ್ಯವರ್ಧಕಗಳು ಮತ್ತು ಚರ್ಮ ಸಂರಕ್ಷಗಳು, ವೈಯಕ್ತಿಕ ಸಂರಕ್ಷಣೆ ಮತ್ತು ನೈರ್ಮಲ್ಯ ಯಂತ್ರೋಪಕರಣಗಳು, ಪ್ಯಾಕೇಜಿಂಗ್‍ಗಳು, ಕಚ್ಚಾ ವಸ್ತುಗಳು ಮತ್ತು ಗುತ್ತಿಗೆ ತಯಾರಕರುಗಳು, ಸುಗಂಧ ಸಂಯುಕ್ತಗಳು, ನೈಸರ್ಗಿಕ ಮತ್ತು ಸಾವಯವ ಉತ್ಪಾದಕ ಗುಂಪುಗಳು ಸೇರಿ ಸುಮಾರು 100 ಕ್ಕೂ ಹೆಚ್ಚು ಬ್ರ್ಯಾಂಡ್‍ಗಳು ಮತ್ತು ಸುಮಾರು 40 ಸಾವಿರ ಸಂದರ್ಶಕರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಕೆಎಸ್‍ಎಸ್‍ಡಿಸಿಯು ಕರ್ನಾಟಕದಲ್ಲಿ ಸವಿತಾ ಸಮಾಜ ಸಮುದಾಯವನ್ನು ಪ್ರೋತ್ಸಾಹಿಸಲು ಮತ್ತು ಬೆಂಬಲಿಸಲು ಹಾಗೂ ಹಲವಾರು ಅಭಿವೃದ್ಧಿ ಉಪಕ್ರಮಗಳಿಗೆ ಚಾಲನೆ ನೀಡುವಲ್ಲಿ ನಿಗಮವು ಮುಂಚೂಣಿಯಲ್ಲಿದ್ದು, ಈ ಎಕ್ಸ್‍ಪೋ ಮೂಲಕ ಪ್ರಮುಖ ಬ್ರ್ಯಾಂಡ್‍ಗಳಿಗೆ ಮಾನ್ಯತೆ, ನೆಟ್‍ವರ್ಕ್‍ಗೆ ಅವಕಾಶ, ದೇಶ ಮತ್ತು ಪ್ರಪಂಚಾದ್ಯಂತ ಉತ್ತಮ ಅಭ್ಯಾಸಗಳ ಪ್ರದರ್ಶನವನ್ನು ಒದಗಿಸುವ ಮೂಲಕ ತನ್ನ ಉಪಕ್ರಮಗಳನ್ನು ಹೆಚ್ಚಿಸುವ ಗುರಿ ಹೊಂದಿದೆ ಎಂದರು.

ಕೆಎಸ್‍ಎಸ್‍ಡಿಸಿಯು ಸವಿತಾ ಸಮಾಜದ ಉದ್ಯಮದ ಸಾಮಥ್ರ್ಯವನ್ನು ಹೆಚ್ಚಿಸಲು ಮತ್ತು ಜಾಗತಿಕ ಗುಣಮಟ್ಟವನ್ನು ಹೆಚ್ಚುಸುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಮ್ಮೇಳನದಲ್ಲಿ ಸಮುದಾಯಕ್ಕೆ ಇತ್ತೀಚಿನ ಟ್ರೆಂಡ್‍ಗಳು, ಉತ್ಪನ್ನಗಳು ಮತ್ತು ಹೇರ್ ಕೇರ್ ಮತ್ತು ಸ್ಪಾ ವಲಯದಲ್ಲಿನ ಅಭ್ಯಾಸಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ನೀಡಲು ಉದ್ದೇಶಿಸಲಾಗಿದೆ.  ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬ್ರೋಚರ್ ಸಹ ಬಿಡುಗಡೆ ಮಾಡಲಾಯಿತು.

 ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಅಧ್ಯಕ್ಷರಾದ ಸಂಪತ್ ಕುಮಾರ್, ಕಾರ್ಯಾಧ್ಯಕ್ಷರಾದ ಕಿರಣ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.


Tags

Post a Comment

0Comments

Post a Comment (0)