ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ 8ಲಕ್ಷ ವೆಚ್ಚದ ಒಣ ಕಸ-ಹಸಿ ಕಸದ ಅವಳಿ ತೊಟ್ಟಿಗಳ ದೇಣಿಗೆ

varthajala
0

 ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ 8ಲಕ್ಷ ವೆಚ್ಚದ ಒಣ ಕಸ-ಹಸಿ ಕಸದ ಅವಳಿ ತೊಟ್ಟಿಗಳ ದೇಣಿಗೆ

ಸಾಮಾಜಿಕ ಸೇವೆಯಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದ ಶಾಸಕ ಸೋಮಶೇಖರ್‍ರೆಡ್ಡಿ

ಬಳ್ಳಾರಿ ಜೂನ್ 22. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ದಿನಾಂಕ 22-06-2022 ಬುಧವಾರದಂದು ಬಳ್ಳಾರಿ ಮಹಾನಗರ ಪಾಲಿಕೆಗೆ ಸುಮಾರು ಎಂಟು ಲಕ್ಷ ಮೊತ್ತದ ಒಣ ಕಸ - ಹಸಿ ಕಸದ ಅವಳಿ ತೊಟ್ಟಿಗಳ ದೇಣಿಗೆ ನೀಡಲಾಯಿತು. 

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಗರ ಶಾಸಕ  ಜಿ. ಸೋಮಶೇಖರ್ ರೆಡ್ಡಿ ಅವರು ಮಾತನಾಡಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಮಾಜಮುಖಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಕಳೆದ ಆರು ತಿಂಗಳ ಹಿಂದೆ ರೈತರಿಗಾಗಿ ನಿತ್ಯ ಉಚಿತ ಅನ್ನದಾನ ಕಾರ್ಯಕ್ರಮವನ್ನು ಆರಂಭಿಸಿ ಯಾವುದೇ ಅಡಚಣೆ ಇಲ್ಲದೇ ಇದುವರೆಗೂ ಮುಂದುವರಿಸಿಕೊಂಡು ಹೋಗುತ್ತಿದೆ. ರೈತರ ದೀನ ದಲಿತರ ಆರೋಗ್ಯ ರಕ್ಷಣೆಗಾಗಿ ಉಚಿತ ಆಸ್ಪತ್ರಯಿಂದ ಉಚಿತ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆ ಕಾರ್ಯಕ್ರಮವೂ ಅನೇಕ ವರ್ಷಗಳಿಂದ ನಿರ್ವಹಿಸುತ್ತಾ ಬಂದಿದೆ, ಅಲ್ಲದೇ ಬಡ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡುವ ಉದ್ದೇಶದಿಂದ 2019ರಲ್ಲ ಸ್ಥಾಪಿಸಿದ ಕೌಶಲ್ಯ ತರಬೇತಿ ಸಂಸ್ಥೆಯೂ ಅಡ್ಡಿ ಆತಂಕವಿಲ್ಲದೇ ವಿದ್ಯಾದಾನ ನಡೆಯುತ್ತಿದೆ. ನನ್ನ ಅನಿಸಿಕೆಯ ಮಟ್ಟಿಗೆ ರಾಜ್ಯದಲ್ಲಿ ಯಾವುದೇ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮಾಡದ ಸಾಮಾಜಿಕ ಸೇವೆಯನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮಾಡುತ್ತಿದೆ ಎಂಬುದನ್ನು ಹೆಮ್ಮೆಯಿಂದ ಹೇಳುತ್ತಾ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು.


ಬಳ್ಳಾರಿ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರು ಮತ್ತು ಉಪಮಹಾ ಪೌರರು ಮಾತನಾಡಿ ಸ್ವಚ್ಚ ಬಳ್ಳಾರಿಗಾಗಿ ಸಂಸ್ಥೆಯಿಂದ ನೀಡುತ್ತಿರುವ ಕಸದ ಸಂಗ್ರಹಣೆಗಾಗಿ ಒಣ ಕಸ - ಹಸಿ ಕಸದ ಅವಳಿ ತೊಟ್ಟಿಗಳ ದೇಣಿಗೆ ತುಂಬಾ ಅರ್ಥಪೂರ್ಣ ದೇಣಿಗೆ. ನಮ್ಮ ಆಡಳಿತಾವಧಿಯಲ್ಲಿ ಸ್ವಚ್ಚ ಮತ್ತು ಸುಂದರ ಬಳ್ಳಾರಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ ಮತ್ತು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಸಿ. ಶ್ರೀನಿವಾಸ್ ರಾವ್ ಅವರು, ಸಂಸ್ಥೆಯ ವಿವಿಧ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಪರಿಚಯಿಸಿದರೆ,ಯಶ್‍ವಂತ್‍ರಾಜ್ ನಾಗಿರೆಡ್ಡಿ, ಗೌರವ   ಕಾರ್ಯದರ್ಶಿಗಳು, ಮಾತನಾಡಿ ಸ್ವಚ್ಚ ಮತ್ತು ಸುಂದರ ಬಳ್ಳಾರಿಯ ನಿರ್ವಹಣೆಗಾಗಿ ನಮ್ಮ ಸಂಸ್ಥೆ ಹಾಗು ನಮ್ಮ ಸಹ ಸಂಸ್ಥೆಯಾದ ಕರ್ನಾಟಕ ಸ್ಪಾಂಜ್ ಐರನ್ ಮ್ಯಾನುಫೆಕ್ಟರರ್ಸ್ ಅಸೋಸಿಯೇಷನ್ ಕಡೆಯಿಂದ ಜಂಟಿಯಾಗಿ ದೇಣಿಗೆಯನ್ನು ನೀಡಲಾಗಿದ್ದು,ಶ್ರೀನಿವಾಸ್ ರಾವ್ , ಗೌರವಾಧ್ಯಕ್ಷರು ಈ ಸಭೆಯಲ್ಲಿ ಕರ್ನಾಟಕ ಸ್ಪಾಂಜ್ ಐರನ್ ಮ್ಯಾನುಫೆಕ್ಟರರ್ಸ್ ಅಸೋಸಿಯೇಷನ್ ಪರವಾಗಿ ಉಪಸ್ಥಿತರಿದ್ದರು.. ಮುಂದುವರೆದು ಮಾತನಾಡಿದ ಯಶ್‍ವಂತ್‍ರಾಜ್ ಅವರು ಸಂಸ್ಥೆಯ ವತಿಯಿಂದ ಬಳ್ಳಾರಿ ನಗರದ ವ್ಯಾಪಾರಸ್ಥರಿಗೆ ಅನುಕೂಲ ವಾಗುವ ಉದ್ದೇಶದಿಂದ ಇದೇ ತಿಂಗಳು ಗೋವಾ ಮುಖ್ಯಮಂತ್ರಿಗಳೊಂದಿಗೆ ಹಮ್ಮಿಕೊಂಡಿರುವ ಸಭೆಯ ಬಗ್ಗೆ ತಿಳಿಸುತ್ತಾ ಈ ಸಭೆಯ ಮೂಲಕ ಬಳ್ಳಾರಿ ಮತ್ತು ಗೋವೆಯ ಮಧ್ಯೆ ಉತ್ತಮ ವ್ಯಾಪಾರ ವ್ಯವಹಾರ ವೃದ್ದಿಗೊಳ್ಳುವ ಎಲ್ಲಾ ಅವಕಾಶಗಳುಂಟು ಎಂದು ತಿಳಿಸಿದರು. 

ಈ ಸಭೆಯಲ್ಲಿ ನಗರದ ಬುಡಾ ಅಧ್ಯಕ್ಷ ಪಾಲಣ್ಣ, ಕಾರ್ಪೋರೇಟರ್‍ಗಳು, ಸಂಸ್ಥೆಯ ಉಪಾಧ್ಯಕ್ಷರುಗಳು, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು , ಉಪ ಕಮಿಟಿಗಳ ಚೇರ್‍ಮನ್‍ಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು ಉಪಸ್ಥಿತರಿದ್ದರು. 


Tags

Post a Comment

0Comments

Post a Comment (0)