8ನೇ ತರಗತಿ ಹಾಗೂ ಪ್ರಥಮ ಪಿಯುಸಿ ಕ್ರೀಡಾಪಟುಗಳಿಗೆ ವಿಶೇಷ ಆಯ್ಕೆ ಟ್ರಯಲ್ಸ್

varthajala
0

ಬೆಂಗಳೂರು, ಜೂನ್ 15 (ಕರ್ನಾಟಕ ವಾರ್ತೆ) : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿವಿಧ ಕ್ರೀಡಾ ವಸತಿ ಶಾಲೆ / ನಿಲಯಗಳಿಗೆ 2022-23 ನೇ ಸಾಲಿಗೆ 8ನೇ ತರಗತಿಗೆ ಹಾಗೂ ಪ್ರಥಮ ಪಿಯುಸಿಗೆ ಪ್ರವೇಶ ನೀಡುವ ಸಂಬಂಧ ಕ್ರೀಡಾಪಟುಗಳಿಗೆ ರಾಜ್ಯದ ವಿವಿಧ ಕ್ರೀಡಾ ವಸತಿ ಶಾಲೆ / ನಿಲಯಗಳ ಪ್ರವೇಶ ನೀಡುವ ಕುರಿತು ವಿಶೇಷ ಆಯ್ಕೆ ಟ್ರಯಲ್ಸ್‍ನ್ನು ವಿವಿಧ ಸ್ಥಳಗಳಲ್ಲಿ ಮತ್ತು ದಿನಾಂಕಗಳಲ್ಲಿ ಜರುಗಿಸಲು ತೀರ್ಮಾನಿಸಲಾಗಿರುತ್ತದೆ.


ಅಥ್ಲೆಟಿಕ್ಸ್ ಮತ್ತು ಪುಟ್‍ಬಾಲ್ ಕ್ರೀಡೆಯು ದಿನಾಂಕ: 23-06-2022 ಮತ್ತು 24-06-2022 ರಂದು ಸರ್ಕಾರಿ ಕ್ರೀಡಾ ಪ್ರೌಢ ಶಾಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿದ್ಯಾನಗರ, ಸೈಕ್ಲಿಂಗ್ ಕ್ರೀಡೆಯು ದಿನಾಂಕ: 23-06-2022 ಮತ್ತು 24-06-2022 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಜಯಪುರ, ಜಿಮ್ನಾಸ್ಟಿಕ್ಸ್ ದಿನಾಂಕ: 23-06-2022 ಮತ್ತು 24-06-2022 ರಂದು ಮಹಾತ್ಮಗಾಂಧಿ ಕ್ರೀಡಾಂಗಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತುಮಕೂರು, ಹಾಕಿ ಕ್ರೀಡೆ ದಿನಾಂಕ: 23-06-2022 ಮತ್ತು 24-06-2022 ರಂದು ಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣ, ಬೆಂಗಳೂರು, ಕುಸ್ತಿ ಮತ್ತು ಜೂಡೋ ಕ್ರೀಡೆ ದಿನಾಂಕ: 23-06-2022 ಮತ್ತು 24-06-2022 ರಂದು ನೆಹರೂ ಕ್ರೀಡಾಂಗಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ, ಫೆನ್ಸಿಂಗ್/ ಆರ್ಚರಿ, ವಾಲಿಬಾಲ್, ಬಾಸ್ಕೆಟ್‍ಬಾಲ್ ದಿನಾಂಕ: 23-06-2022 ಮತ್ತು 24-06-2022 ರಂದು ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರು ಈ ಸ್ಥಳಗಳಲ್ಲಿ ಆಯಾಯ ದಿನಾಂಕದಂದು ಬೆಳಿಗ್ಗೆ 9.30ಕ್ಕೆ ಕ್ರೀಡಾಪಟುಗಳು ವರದಿ ಮಾಡಿಕೊಳ್ಳಬೇಕು.

ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಂದ ಶಾಲಾ ದೃಢೀಕರಣ ಪತ್ರ ಮತ್ತು ಆಧಾರಕಾರ್ಡ್ ಪ್ರತಿಯನ್ನು ತರುವುದು. ಸರ್ಕಾರದ ಕೋವಿಡ್-19 ಮಾರ್ಗಸೂಚಿಯನ್ವಯ ವಿದ್ಯಾರ್ಥಿಗಳು ಆಯ್ಕೆ ಸ್ಥಳಗಳಲ್ಲಿ ಬಾಗವಹಿಸಬೇಕು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)