ದೇಶದ ವಿವಿಧ ರಾಜ್ಯದ 400ದೇಹದಾರ್ಢ್ಯ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗಿ.
*ಇಂದಿನ ಯುವ ಸಮಾಜಕ್ಕೆ ಪವರ್ ಸ್ಟರ್ ಪುನೀತ್ ರಾಜ್ ಕುಮಾರ್ ಮಾದರಿಯಾಗಿದ್ದಾರೆ-ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್*
ರಾಜಾಜಿನಗರ ವಿಧಾನಸಭಾ ಕ್ಷೇತ್ರ, ಡಾ||ರಾಜ್ ಕುಮಾರ್ ಕಲಾಕ್ಷೇತ್ರ ಸಭಾಂಗಣದಲ್ಲಿ ಮೆಟ್ರೋ ಫ್ಲೆಕ್ಸ್ ಜಿಮ್ ಮತ್ತು ಬಾಡಿ ಕ್ರಾಫ್ಟ್ ಜಿಮ್ ಆಯೋಜಿಸಿರುವ ಅಖಿಲ ಭಾರತ ಮಟ್ಟದ 400ಸ್ಪರ್ಧಿಸಿರುವ *ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ-2022* ಆಯೋಜಿಸಲಾಗಿತ್ತು.
ಮಾಜಿ ಶಿಕ್ಷಣ ಸಚಿವರು,ಶಾಸಕರಾದ ಎಸ್.ಸುರೇಶ್ ಕುಮಾರ್ ,ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್ ರವರು,ರಾಜಾಜಿನಗರ ಮಂಡಲ ಅಧ್ಯಕ್ಷರಾದ ರಾಘವೇಂದ್ರರಾವ್ ,ಉಪಮಹಾಪೌರರಾದ ರಂಗಣ್ಣ,ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮುನಿರಾಜು,ರಾಜಣ್ಣ,ನಿರ್ಮಾಪಕರಾದ ಗಂಗಾಧರ್ ರವರು ದೀಪಾ ಬೆಳಗಿಸಿ ಉದ್ಘಾಟನೆ ಮಾಡಿದರು.
ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಆರೋಗ್ಯವಂತ ಕಟ್ಟುನಿಟ್ಟಾಗಿ ದೇಹ ಕಟ್ಟವು ಸ್ಪರ್ಧೆ ದೇಹದಾರ್ಢ್ಯ ಸ್ಪರ್ಧೆ.
ಅಖಿಲ ಭಾರತ ಮಟ್ಟದಲ್ಲಿ ಎರಡು ದಿನಗಳ ಕಾಲ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ.
ಕಲೆ,ಸಾಹಿತ್ಯ ಸಂಸ್ಕೃತಿ ಮತ್ತು ಕ್ರೀಡೆಗಳಿಗೆ ಮೊದಲಿಂದಲೂ ಉತ್ತೇಜನ ನೀಡುತ್ತಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರವಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೇಹದಾರ್ಢ್ಯ ಮೂಲಕ ಯುವಕರಿಗೆ ಮಾದರಿಯಾದರು.
ಮಾನಸಿಕ ಮತ್ತು ದೃಹಿಕವಾಗಿ ಆರೋಗ್ಯವಂತರಾಗಿರಲು ಮತ್ತು ಮದ್ಯವ್ಯಸನ ,ಡ್ರಗ್ಸ್ ಎಂಬ ಕೆಟ್ಟ ಚಟಗಳಿಂದ ದೂರ ಇರಬೇಕಾದರೆ ಯೋಗ ಮತ್ತು ದೇಹದಾರ್ಢ್ಯ ಎಂಬ ಕಸರತ್ತು,ಕಲೆಗಳನ್ನು ಯುವಕರು ಕಲೆಯಬೇಕು ಎಂದು ಹೇಳಿದರು.
ದೇಹದಾರ್ಡ್ಯ ಸ್ಪರ್ಧೆಯಲ್ಲಿ ವಿವಿಧ ವಿಭಾಗದ ಭಾರತ ಶೇಷ್ಠ ಪ್ರಶಸ್ತಿಗೆ 1ಲಕ್ಷ ಬಹುಮಾನ ಮತ್ತು ಭಾರತ ಉದಯ 50ಸಾವಿರ,ಭಾರತ ಕೇಸರಿ 25ಸಾವಿರ,ಭಾರತ ಫೀಟ್ನಸ್ 25ಸಾವಿರ, ಭಾರತ ಕಿಶೋರ 50ಸಾವಿರ, ಭಾರತ ಕುಮಾರ 50ಸಾವಿರ,ಭಾರತ ಶ್ರೀ 50ಸಾವಿರ ಪ್ರಶಸ್ತಿ ಫಲಕ,ನಗದು ಬಹುಮಾನ ಮತ್ತು ದ್ವಿತೀಯ,ತೃತೀಯ ಗೆದ್ದು ದೇಹದಾಢ್ಯ ಪಟುಗಳಿಗೆ ವಿತರಿಸಲಾಗುವುದು.