ಸೆಂಟ್ ಜೋಸೆಫ್ ಇನ್ಸ್ಟಿಟ್ಯೂಟ್ ಆಫ್ ಮೇನೆಜ್ಮೆಂಟ್ ನ [ಎಸ್.ಜೆ.ಐ.ಎಂ] 25 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ 2022 ರ ಮೇ 14 ರಂದು ಸಂಸ್ಥೆಯ ಲೊಯೊಲಾ ಆಡಿಟೋರಿಯಂನಲ್ಲಿ ನಡೆಯಲಿದೆ. ಘಟಿಕೋತ್ಸವ ಉದ್ದೇಶಿಸಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ. ಕರ್ನಾಟಕ ಜೆಸ್ಯೂಟ್ ನ ಪ್ರಾಂತೀಯ ಮುಖ್ಯಸ್ಥರಾದ ಡಿಯೋನಿಸಿಯಸ್ ವಾಜ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ. ಮನೋಜ್ ಡಿಸೋಜಾ ಅವರು ಭಾಗವಹಿಸಲಿದ್ದಾರೆ.
ಎಸ್.ಜಿ.ಐ.ಎಂ ಕಾಲೇಜಿನ 174 ವಿದ್ಯಾರ್ಥಿಗಳು ಪದವಿ ಪಡೆದಿದ್ದು, ಈ ಪೈಕಿ ಮೊದಲ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ 12 ವಿದ್ಯಾರ್ಥಿಗಳು ರಾಜ್ಯಪಾಲರಿಂದ ಪದಕಗಳನ್ನು ಮತ್ತು ಪ್ರಮಾಣ ಪತ್ರಗಳನ್ನು ಪಡೆಲಿದ್ದಾರೆ.
ಬೆಂಗಳೂರಿನಲ್ಲಿರುವ ಸೆಂಟ್ ಜೋಸೆಫ್ ಇನ್ಸ್ಟಿಟ್ಯೂಟ್ ಆಫ್ ಮೇನೇಜ್ಮೆಂಟ್ ಭಾರತದ ಪ್ರಮುಖ ಬಿ- ಸ್ಕೂಲ್ ಸ್ಥಾನಮಾನ ಪಡೆದುಕೊಂಡಿದ್ದು, ಜಾಗತಿಕವಾಗಿ ಗುಣಮಟ್ಟದ ಶಿಕ್ಷಣಕ್ಕೆ ಖ್ಯಾತಿ ಪಡೆದಿರುವ ಜೆಸ್ಯೂಟ್ಸ್ ಸಂಸ್ಥೆ ಈ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿದೆ. ಎಸ್.ಜೆ.ಐ.ಎಂ ಕರ್ನಾಟಕದ ಅತ್ಯಂತ ಪುರಾತನ ಬುಸಿನೆಸ್ ಸ್ಕೂಲ್ ಆಗಿದ್ದು, 50 ವರ್ಷಗಳ ಪರಂಪರೆಯನ್ನು ಹೊಂದಿದೆ. ಸಮಾಜ ಮತ್ತು ಉತ್ತಮ ಪರಿಸರದ ಬಗ್ಗೆ ಕಾಳಜಿ ಹೊಂದಿರುವ, ಸಮಗ್ರತೆ ಮತ್ತು ನೈತಿಕ ನಡಾವಳಿಕೆಯಲ್ಲಿ ನೈತಿಕ ಜವಾಬ್ದಾರಿಯುತ ನಾಯಕರನ್ನು ರೂಪಿಸುವುದು ಸಂಸ್ಥೆಯ ಜವಾಬ್ದಾರಿಯಾಗಿದೆ.