CET , NEET FREE COACHING ಸಿಇಟಿ,ನೀಟ್ ಪರೀಕ್ಷೆ : ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್

varthajala
0

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿಜ್ಞಾನ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಸೇತುವೆಯಂತಿರುವ ಸಿಇಟಿ, ನೀಟ್‌ ಪರೀಕ್ಷೆಗಳ ತರಬೇತಿಯನ್ನು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಉಚಿತವಾಗಿ ನೀಡಲು ಬಿಇಎಲ್ ಎಜ್ಯುಕೇಷನ್ ಕಮಿಟಿ  ಮುಂದಾಗಿದೆ.ನಗರದ ಜಾಲಹಳ್ಳಿಯಲ್ಲಿರೋ ಬಿಇಎಲ್ ಪಿಯು ಕಾಲೇಜಿನಲ್ಲಿ ಸಿಇಟಿ ಹಾಗೂ ನೀಟ್ ಕ್ರಾಶ್ ಕೋಚಿಂಗ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.













25 ದಿನಗಳವರೆಗೆ ನಡೆಯುವ ಈ ತರಬೇತಿ ಕಾರ್ಯಕ್ರಮವನ್ನು  ಬಿಇಎಲ್ ಇಡಬ್ಲೂಎ ವಿಭಾಗದ ಜನರಲ್ ಮ್ಯಾನೇಜರ್ ಮನೋಜ್ ಜೈನ್ ಉದ್ಘಾಟಿಸಿ,ವಿದ್ಯಾರ್ಥಿಗಳಿಗೆ ಪರೀಕ್ಷೆಯ ಮಹತ್ವದ ಬಗ್ಗೆ ತಿಳಿ ಹೇಳಿದ್ರು.ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಶುಭ ಹಾರೈಸಿದ್ರು.ಈ ಸಂದರ್ಭದಲ್ಲಿ ಬಿಇಇಐ ಕಾರ್ಯದರ್ಶಿ ನರಸಿಂಹಕುಮಾರ್ ಎಸ್.ವಿ.ಎನ್,ಆಡಳಿತಾಧಿಕಾರಿ ರಘುಪತಿ ಎಂ,ಬಿಇಎಲ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಶಾಂತಾರಾಮ್ ಸೇರಿದಂತೆ ಕಾಲೇಜಿನ ಭೋದಕ ವೃಂದದವರು ಹಾಜರಿದ್ದರು.

ಈ ಫ್ರೀ ಕೋಚಿಂಗ್ ನಲ್ಲಿ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.ಎಲ್ಲ ವಿದ್ಯಾರ್ಥಿಗಳಿಗೂ ಕೋಚಿಂಗ್ ಜೊತೆ ಉಚಿತವಾಗಿ ಸ್ಟಡಿ ಮೇಟಿರಿಯಲ್ ಸಹ ನೀಡಲಾಗಿದೆ.ಪ್ರತಿದಿನ ಬೆಳಗ್ಗೆ 7.30 ರಿಂದ 1.30 ರವರೆಗೆ ತರಬೇತಿ ನೀಡಲಾಗುತ್ತಿದೆ.ಪರೀಕ್ಷೆ ನಡೆಯುವ ಪ್ರತಿ ವಿಷಯಗಳಿಗೆ ( ಪಿಸಿಎಂಬಿ) ಸಂಬಂಧಿಸಿದಂತೆ ಅನುಭವಿ ಶಿಕ್ಷಕರಿಂದ ತರಬೇತಿ ನೀಡಲಾಗುತ್ತಿದೆ.ಕೋಚಿಂಗ್ ಮುಗಿದ ನಂತರ

ಪ್ರಶ್ನೆಗಳನ್ನು ಬಿಡಿಸುವ ರೀತಿಯನ್ನು ಸಹ ಟೆಸ್ಟ್ ಗಳನ್ನು ನಡೆಸುವ ಮೂಲಕ ಕಲಿಸಕೊಡಲಾಗುತ್ತದೆ.ಇದರಿಂದ ವಿದ್ಯಾರ್ಥಿಗಳಿಗೆ ಎದುರಾಗುವ ಸಂದೇಹಗಳನ್ನು  ಪರಿಹರಿಸಿ,ಪರೀಕ್ಷೆಯ ಬಗ್ಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ.

Post a Comment

0Comments

Post a Comment (0)