ವಿದ್ಯಾವಂತ ಯುವಕರು ಹೆಚ್ಚಾಗಿ ರಾಜಕಾರಣಕ್ಕೆ ಬಂದಾಗ ಮಾತ್ರ ಸಾಮಾಜಿಕವಾಗಿ ಬದಲಾವಣೆ ತರಲು ಸಾಧ್ಯ

varthajala
0

ಮಧುಗಿರಿ - ವಿದ್ಯಾವಂತ ಯುವಕರು ಹೆಚ್ಚಾಗಿ ರಾಜಕಾರಣಕ್ಕೆ ಬಂದಾಗ ಮಾತ್ರ ಸಾಮಾಜಿಕವಾಗಿ ಬದಲಾವಣೆ ತರಲು ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಇತ್ತೀಚಿಗೆ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಶ್ರೀಮತಿ ಕಲಾ ಪ್ರಪೂರ್ಣ ಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಚುನಾವಣೆಗಳಲ್ಲಿ ಜಯಗಳಿಸಬಹುದು ಎಂಬುದಕ್ಕೆ ಈ ಗ್ರಾಮ ಪಂಚಾಯಿತಿ ಉಪಚುನಾವಣೆ ಸಾಕ್ಷಿಯಾಗಿದೆ. ಈ ಫಲಿತಾಂಶವು ಜಾತಿ-ಮತ ಹಣವನ್ನು ಮೀರಿದ ಫಲಿತಾಂಶವಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರಗಳಿಗೆ ಭೇಟಿ ನೀಡಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಾಗುವುದು. ಮುಂದಿನ ಚುನಾವಣೆಯಲ್ಲಿ ಪ್ರತಿಯೊಬ್ಬರು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು ಆಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ಕಳೆದ ನಾಲ್ಕು ವರ್ಷಗಳಿಂದ ಅಭಿವೃದ್ಧಿ ಕುಂಠಿತಗೊಂಡಿದೆ. 2013 ರಿಂದ 2018ರ ವರೆಗೆ ನನ್ನ ಅವಧಿಯ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸಿನಲ್ಲಿದ್ದು, ನೂತನವಾಗಿ ಆಯ್ಕೆಯಾದ ಸದಸ್ಯರು ಜನತೆಗೆ ಉತ್ತಮ ಸೇವೆಯ ನೀಡಿದಾಗ ಮಾತ್ರ ಮತ ಹಾಕಿದ ಮತದಾರರಿಗೆ ಗೌರವ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಬಿ.ಮರಿಯಣ್ಣ, ವಿಎಸ್‍ಎಸ್‍ಎನ್ ಅಧ್ಯಕ್ಷ ಫಾಸಿಲ್ ಖಾನ್, ಮರುವೇಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ಕೇಶವಮೂರ್ತಿ, ಸದಸ್ಯರಾದ ಗೌರಮ್ಮ. ನಾಗಭೂಷಣ ಮುಖಂಡರುಗಳಾದ ಡಿ.ಎಚ್.ನಾಗರಾಜು, ಸುಬ್ರಹ್ಮಣ್ಯ, ಹನುಮಂತ. ಬಸವರಾಜು, ಎಸ್.ಮಂಜು, ನಾಗಭೂಷಣಾಚಾರ್, ಗೋವಿಂದರಾಜು, ಸುಬ್ಬಣ್ಣ, ಅಂಗಡಿ ರಂಗಣ್ಣ, ಪ್ರಸನ್ನಕುಮಾರ್, ನಾಗರಾಜು, ಪೆದ್ದಗಯ್ಯ, ಡೈರಿ ರಂಗನಾಥ, ರವಿಕುಮಾರ್, ಗೊಡಸಾಬ್, ನಾಗಾರ್ಜುನ, ಬೀದರಣ್ಣ,  ಹಾಗೂ ಮತ್ತಿತರರು ಹಾಜರಿದ್ದರು.

Post a Comment

0Comments

Post a Comment (0)