ಸುಸ್ಥಿರ ಭಾರತ ನಮ್ಮ ಮುಂದಿನ ಗುರಿ - ಪ್ರಧಾನಿ ನರೇಂದ್ರ ಮೋದಿ

varthajala
0

ಬೆಂಗಳೂರು, ಮೇ 31 (ಕರ್ನಾಟಕ ವಾರ್ತೆ) : ಪ್ರತಿ ಬಡವರೂ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಯ ಲಾಭ ಪಡೆಯಬೇಕು, ಜನರ ಬಾಗಿಲಿಗೆ ಈ ಸವಲತ್ತು ತಲುಪಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.

ಇಂದು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಲಾದ ಕೇಂದ್ರ ಸರ್ಕಾರ ಯೋಜನೆಗಳ ಫಲಾನುಭವಿಗಳ ಜೊತೆ ನೇರ ಸಂವಾದ – 2022 ಗರೀಬ್ ಕಲ್ಯಾಣ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.



ಈ ಕಾರ್ಯಕ್ರಮದ ನೇರ ಪ್ರಸಾರವನ್ನು ವಿಧಾನಸೌಧದ ಬ್ಯಾಂಕ್ವೇಟ್ ಹಾಲ್‍ನಲ್ಲಿ ಏರ್ಪಡಿಸಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೊಳಗೊಂಡಂತಹ ಸಂಪುಟದ ಇತರ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಫಲಾನುಭವಿಗಳು ಈ ಸಂವಾದವನ್ನು ವೀಕ್ಷಿಸಿದರು. ಕಲಬುರಗಿ ಜಿಲ್ಲೆಯ ‘ಸಂತೋಷಿ’ ಎಂಬ ಮಹಿಳೆ ಪ್ರಧಾನಿ ಜೊತೆ ಸಂವಾದ ನಡೆಸಿ ಗಮನ ಸೆಳೆದರು. ಇವರು ಹಾಗೂ ಇವರ ಕುಟುಂಬಸ್ಥರು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಆಯುಷ್ಮಾನ್ ಭಾರತ್ ಹಾಗೂ ಉಚಿತ ಔಷಧಿಗಳ ಸೌಲಭ್ಯ ಪಡೆಯುತ್ತಿರುವುದಾಗಿ ತಿಳಿಸಿದರು. ಪ್ರಧಾನಿಗಳು ದೇಶದ ಇತರ ರಾಜ್ಯಗಳ ಫಲಾನುಭವಿಗಳ ಜೊತೆ ಸಹ ಸಂವಾದ ನಡೆಸಿದರು.

“ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ” ಯೋಜನೆಯಡಿ ದೇಶದ 10 ಕೋಟಿಗೂ ಹೆಚ್ಚು ರೈತರಿಗೆ 21,000 ಕೋಟಿ 11ನೇ ಕಂತಿನ ನೆರವಿನ ಹಣವನ್ನು ನೇರವಾಗಿ ಫಲಾನುಭವಿಗಳ ರೈತರ ಖಾತೆಗೆ ಡಿಬಿಟಿ ಮೂಲಕ ಪಾವತಿ ಮಾಡಲಾಗುತ್ತಿದೆ.
 ಕೋವಿಡ್ -19 ಸಂದರ್ಭದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಸರ್ಕಾರ ಸ್ಪಂದಿಸಿ ಯೋಜನೆ ರೂಪಿಸಿದೆ. ಬಡವರು, ಸವಲತ್ತು ವಂಚಿತರ ಕಲ್ಯಾಣವೇ ಸರ್ಕಾರದ ಗುರಿ. ಕೇಂದ್ರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ, ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಪ್ರಧಾನಮಂತ್ರಿ ಆಯುಷ್ಮಾನ್ ಭಾರತ – ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಪೋಷಣ್ ಅಭಿಯಾನ ಯೋಜನೆ, ಜಲಜೀವನ್ ಮಿಷನ್, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ, ಪ್ರಧಾನಮಂತ್ರಿ ಉಜ್ವಲ ಯೋಜನೆ, ಆವಾಸ್ ಯೋಜನೆ, ಮುದ್ರಾ ಯೋಜನೆಯಡಿ ದೇಶದಾದ್ಯಂತ ಲಕ್ಷಾಂತರ ಜನ ಪ್ರಯೋಜನ ಪಡೆಯುತ್ತಿದ್ದಾರೆ.

ನಮ್ಮ ಸರ್ಕಾರ 8 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ನಮ್ಮಲ್ಲಿ ಅತ್ಯಧಿಕ ಸಾಮಥ್ರ್ಯವಿದ್ದು, ಅದನ್ನು ಸಮರ್ಥಕವಾಗಿ ಬಳಸಿಕೊಂಡು ಸಾಧನೆ ನಡೆಸಬೇಕು. ಪ್ರತಿ ಜಿಲ್ಲೆಗೂ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸುವುದು ಸಹ ಕೇಂದ್ರ ಸರ್ಕಾರದ ಗುರಿಯಾಗಿದೆ. ಕೊರೋನಾ ಸಂದರ್ಭದಲ್ಲಿ ದೇಶಾದ್ಯಂತ ಲಸಿಕಾ ಅಭಿಯಾನ ಯಶಸ್ವಿಗೊಂಡಿದೆ. ಬಡವರ ಏಳಿಗೆಯೇ ದೇಶದ ಏಳಿಗೆ ಎಂದು ತಮ್ಮ ಮನದಾಳದಿಂದ ನುಡಿದರು.

Post a Comment

0Comments

Post a Comment (0)