ಬೆಂಗಳೂರು, ಮೇ 07 (ಕರ್ನಾಟಕ ವಾರ್ತೆ) :ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಫೆಲೋಷಿಪ್ (1 ಫೆಲೋಶಿಪ್) ನೀಡಲು ಅರ್ಹ ಅಭ್ಯರ್ಥಿಗಳಿಂದ ಸೂಕ್ತ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಆಸಕ್ತರು ಫೆಲೋಷಿಪ್‍ನ ನಿಯಮಗಳು ಮತ್ತು ಅರ್ಜಿ ನಮೂನೆಯನ್ನು ಪ್ರಾಧಿಕಾರದ ಜಾಲತಾಣ www.kuvempubhashabharati.karnataka.gov.in ನಲ್ಲಿ ದಿನಾಂಕ: 06.05.2022ರಿಂದ ಪಡೆಯಬಹುದಾಗಿದೆ.
ಪ್ರಾಧಿಕಾರದ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಂಚೆ / ಕೊರಿಯರ್ ಮೂಲಕ ಪ್ರಾಧಿಕಾರಕ್ಕೆ ಕಳುಹಿಸಿಕೊಡಬೇಕು. ಅರ್ಜಿ ಸಲ್ಲಿಸಲು ಜೂನ್ 06, 2022 ಕೊನೆಯ ದಿನಾಂಕವಾಗಿದೆ. ಅಪೂರ್ಣ ಅರ್ಜಿ ಹಾಗೂ ಕೊನೆಯ ದಿನಾಂಕದ ನಂತರ ಸಲ್ಲಿಕೆಯಾಗುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.