ಬೆಂಗಳೂರು ಮೇ16, 2022: ಆಸಕ್ತಿ ವಹಿಸಿ ಕ್ರೀಡೆಗಳಲ್ಲಿ ಭಾಗವಹಿಸಲು ಮಕ್ಕಳನ್ನು ಸಾರ್ವಜನಿಕರು ಮತ್ತು ಕ್ರೀಡಾಪಟುಗಳು ಪ್ರೇರೇಪಿಸಬೇಕು, ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಅವರು ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು.
ಸೋಮವಾರ ಕಂಠೀರವ ಕ್ರೀಡಾಂಗಣದಲ್ಲಿ ಮಿನಿ ಒಲಂಪಿಕ್ಸ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
2020 ರಿಂದ ಕರ್ನಾಟಕ ರಾಜ್ಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ವತಿಯಿಂದ ಮಿನಿ ಒಲಂಪಿಕ್ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಸಂತಸದ ವಿಷಯವಾಗಿದೆ. ಕರ್ನಾಟಕ ರಾಜ್ಯದ 2ನೇ ಮಿನಿ ಒಲಿಂಪಿಕ್ಸ್ ಕೂಡ ಬೆಂಗಳೂರು ನಗರದಲ್ಲಿ ಆಯೋಜಿಸಲಾಗುತ್ತಿದೆ. ಮಕ್ಕಳು ಈ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಒಲಂಪಿಕ್ಸ್ ಗಳಲ್ಲಿ ಭಾಗವಹಿಸಲು ಸಜ್ಜರಾಗಬೇಕು. ಇದಕ್ಕೆ ಪ್ರತಿಯೊಬ್ಬ ನಾಗರಿಕರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಜನರು ತಮ್ಮ ದೈನಂದಿನ ಜೀವನದಲ್ಲಿ ಕ್ರೀಡೆಗಳಿಗೆ ತೊಡಗಿಸಿಕೊಂಡರೆ, ಆರೋಗ್ಯವಂತರಾಗಿರುತ್ತಾರೆ. ಭಾರತದಲ್ಲಿ ಕ್ರೀಡೆಗಳ ಪ್ರಚಾರಕ್ಕಾಗಿ ಯುವ ಮತ್ತು ಕ್ರೀಡಾ ಕೇಂದ್ರ ಭಾರತೀಯ ಕ್ರೀಡಾ ಪ್ರಾಧಿಕಾರವು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಗೌರವಾನ್ವಿತ ಪ್ರಧಾನಮಂತ್ರಿ ಅವರ ನೇತೃತ್ವದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪರಿಣಾಮಕಾರಿ ಯೋಜನೆಗಳನ್ನು ಸಿದ್ಧಪಡಿಸಿ ಅವುಗಳನ್ನು ಕಾರ್ಯಗತಗೊಳಿಸಿದೆ ಎಂದರು.
ಟೋಕಿಯೊ ಒಲಿಂಪಿಕ್ಸ್-2020 ಕ್ರೀಡಾಕೂಟದಲ್ಲಿ ಭಾರತವು ಗರಿಷ್ಠ 7 ಪದಕಗಳನ್ನು ಗೆದ್ದಿದೆ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟದ ಇತಿಹಾಸದಲ್ಲಿ ಇದುವರೆಗಿನ ಅತ್ಯುತ್ತಮ ಪ್ರದರ್ಶನವನ್ನು ಮಾಡುವುದರೊಂದಿಗೆ, ಈ ಬಾರಿಯ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಪ್ಯಾರಾ ಕ್ರೀಡಾಪಟುಗಳು 19 ಪದಕಗಳನ್ನು ಗೆದ್ದಿದ್ದಾರೆ. ವಿಕಲಾಂಗ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು, ಅಂಗವಿಕಲರಿಗೆ ಕ್ರೀಡಾ ಕೇಂದ್ರಗಳನ್ನು ದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಅದರಲ್ಲಿ ಒಬ್ಬರು ಗ್ವಾಲಿಯರ್ ಎಂ.ಪಿ. ನಲ್ಲಿ ನಿರ್ಮಾಣ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.
ಈ ಬಾರಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಎರಡನೇ ಆವೃತ್ತಿಯನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯವರ ಕನಸಿನ ಕಾರ್ಯಕ್ರಮ - ಖೇಲೋ ಇಂಡಿಯಾದ ಒಂದು ಭಾಗವಾಗಿದೆ.
ಕರ್ನಾಟಕ ರಾಜ್ಯವು ಅನೇಕ ಶ್ರೇಷ್ಠ ಕ್ರೀಡಾ ಪಟುಗಳನ್ನು ನಿರ್ಮಿಸಿದೆ. ವಿಶ್ವ ಮಟ್ಟದಲ್ಲಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದ ಅನೇಕರು ಈ ನೆಲದಲ್ಲಿದ್ದಾರೆ. ಈ ಆಟಗಾರರಿಂದ ಸ್ಫೂರ್ತಿ ಪಡೆದು ಮಕ್ಕಳು ಮುನ್ನಡೆಯಬೇಕು. ಕರ್ನಾಟಕ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ಕರ್ನಾಟಕದಲ್ಲಿ ಆಧುನಿಕ ಕ್ರೀಡಾ ಸೌಲಭ್ಯಗಳೂ ಲಭ್ಯವಾಗುತ್ತಿವೆ ಎಂದ ಅವರು, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಕ್ರೀಡಾ ವಿಜ್ಞಾನ ಕೇಂದ್ರವನ್ನು ಸ್ಥಾಪಿಸುವುದರೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳಿಗಾಗಿ ಕ್ರೀಡಾಂಗಣ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಕೆ ಸಿ ನಾರಾಯಣಗೌಡ, ಕ್ರೀಡಾ ಪ್ರಾಧಿಕಾರಿದ ಅಧ್ಯಕ್ಷರಾದ ಗೋವಿಂದೇಗೌಡ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
Sports leads to physical and mental development says Karnataka Governor
Bengaluru May 16.05.2022: Hon’ble Governor of Karnataka Shri Thaawarchand Gehlot and Chief minister Basavaraj Bommai inaugurated 2nd State Mini Olympic Games jointly conducted by the Department of Youth Empowerment and Sports, Govt. of Karnataka and sports authority today.
Addressing the gathering governor Said " It is a matter of great pleasure that from the year 2020, Mini Olympic Games are being organized in the state of Karnataka by the Department of Youth Empowerment and Sports, Government of Karnataka and Karnataka Olympic Association. Government of Karnataka is promoting sports activities through various schemes. Modern sports facilities are also being made available''.
" Karnataka has produced numerous, sports icons. Should take inspiration from those sports icons, who have moved forward and made our state and country proud", said Karnataka governor.
He also Requested people of the state that "I appeal to all the players and the public, that you should take interest in sports and motivate the children to participate in sports, which will lead to their physical and mental development and they will be able to contribute in nation building".
Minister of Youth Empowerment and Sports of Karnataka C Narayana Gowda, State Sports Authority President Govindhe gowda, Principal secretary Shalini Rajneesh and other dignitaries were present.