ಶ್ರೀ ಟಿ. ತಿಮ್ಮೇಗೌಡ ಐ.ಎ.ಎಸ್(ನಿ) ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು ಇವರು ನೀಡಿರುವ ದತ್ತಿನಿಧಿಯಿಂದ ಯುವ ಜನರಲ್ಲಿ ಜಾನಪದದ ಬಗ್ಗೆ ಜಾಗೃತಿ ಮೂಡಿಸಿ ಮುಂದಿನ ತಲೆಮಾರಿಗೆ ಜನಪದ ಕಲೆಗಳನ್ನು ಪರಿಚಯಿಸಿ ಮುಂದುವರೆಸುವುದು ಈ ಸ್ಪರ್ಧೆಯ ಉದ್ದೇಶವಾಗಿದೆ. ಮೇ 28,2022 ಜಾನಪದ ಲೋಕದಲ್ಲಿ “ರಾಜ್ಯಮಟ್ಟದ ಜನಪದ ಪ್ರದರ್ಶನ ಕಲೆಗಳ ಸ್ಪರ್ಧೆ”ಯನ್ನು ಅಯೋಜಿಸಲಾಗಿದೆ. 2೦ ವರ್ಷದಿಂದ 3೦ ವರ್ಷದ ವಯೋಮಿತಿಯಲ್ಲಿ ಯಾವುದಾದರೂ ಒಂದು ಜನಪದ ಕಲೆಯಲ್ಲಿ ಪ್ರದರ್ಶನ ನೀಡಲು ತಂಡಗಳ ಸಮೇತ ಭಾಗವಹಿಸಬೇಕು. ಜಾನಪದ ಲೋಕದಲ್ಲಿ ಸ್ಪರ್ಧಾರ್ಥಿಗಳಿಗೆ ಊಟ, ವಸತಿ ವ್ಯವಸ್ಥೆ ಇರುತ್ತದೆ. ಸ್ವಂತ ಖರ್ಚಿನಲ್ಲಿ ಸ್ಪರ್ಥಿಗಳು ಬಂದು ಹೋಗಬೇಕು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ – 10,000 ರೂ. ದ್ವಿತೀಯ ಬಹುಮಾನ 7, 500 ರೂ. ತೃತೀಯ ಬಹುಮಾನ – 5,000 ರೂ. ಹಾಗೂ 2000 ರೂ.ಗಳ ಎರಡು ಸಮಾಧಾನಕರ ಬಹುಮಾನ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ – ಡಾ.ಯು.ಎಂ.ರವಿ, ಕ್ಯೂರೇಟರ್- ಮೊಬೈಲ್ ನಂ - 7975661363,
ಶ್ರೀ ಪ್ರದೀಪ್, ರಂಗ ಸಹಾಯಕರು- ಮೊಬೈಲ್ ನಂ – 8197037299,,
ಕಛೇರಿ ದೂರವಾಣಿ 08023605033 ಇವರನ್ನು ಸಂಪರ್ಕಿಸುವುದು.