ಕಾಲ ನಿಯಂತ್ರಕನೇ ಕಾಲ ಭೈರವ..! ಭೈರವ ಪೂಜೆಯ ಪ್ರಯೋಜನವೇನು

varthajala
0

 ನಮ್ಮ ಕಾಲ ನಿಯಂತ್ರಕನೇ ಕಾಲ ಭೈರವ..! ಭೈರವ ಪೂಜೆಯ ಪ್ರಯೋಜನವೇನು ಗೊತ್ತೇ..?


ಕಾಲ ಭೈರವನ ಬಗ್ಗೆ ತಿಳಿದಿರುವುದು ಬಹಳ ಕಡಿಮೆ. ಕಾಲವನ್ನು ನಿಯಂತ್ರಿಸುವ ಕಾಲ ಭೈರವನ ಬಗ್ಗೆ ನಿಮಗೆಷ್ಟು ಗೊತ್ತು..? ಕಾಲ ಭೈರವನನ್ನು ಪೂಜಿಸುವುದರಿಂದಾಗುವ ಪ್ರಯೋಜನವೇನು ಗೊತ್ತೇ..? ತಪ್ಪದೇ ಕಾಲ ಭೈರವನನ್ನು ಪೂಜಿಸಿ.

ಭೈರವನು ಭಗವಾನ್‌ ಶಿವನ ಆಕ್ರಮಣಕಾರಿ ರೂಪವಾಗಿದೆ. ಮತ್ತು ಭೈರವನು ದುಷ್ಟರನ್ನು ನಿರ್ಮೂಲನೆ ಮಾಡಲು, ನಕಾರಾತ್ಮಕ ಶಕ್ತಿಯನ್ನು ನಾಶಮಾಡಲು ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಟ್ಟಾರೆ 64 ಭೈರವರಿದ್ದಾರೆ. ಪ್ರತಿಯೊಂದು ಭೈರವರು ವಿಭಿನ್ನ ದಿಕ್ಕನ್ನು ನಿಯಂತ್ರಿಸುತ್ತಾರೆ ಎನ್ನುವ ನಂಬಿಕೆಯಿದೆ. 64 ಭೈರವರಲ್ಲಿ ಕಾಲ ಭೈರವನು ಪ್ರಮುಖನು. ಕಾಲಭೈರವನು ಎಲ್ಲಾ ಭೈರವರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುತ್ತಾನೆ. 

ಕಾಲ ಭೈರವನ ರೂಪ:

ಕಾಲ ಭೈರವನು ಗಾಢವಾದ ಬಣ್ಣವನ್ನು ಹೊಂದಿರುತ್ತಾನೆ. ಉಗ್ರವಾದ ಮುಖವನ್ನು, ಮೂರು ಕಣ್ಣುಗಳನ್ನು, ತಲೆ ಬುರುಡೆ ಮತ್ತು ಹಾವಿನ ಹಾರವನ್ನು ಧರಿಸಿರುತ್ತಾನೆ. ಮತ್ತು ತಲೆಯ ಮೇಲೆ ಅರ್ಧಚಂದ್ರನನ್ನು ಇಟ್ಟುಕೊಂಡಿರುತ್ತಾನೆ. ಒಂದು ಕೈಯಲ್ಲಿ ತ್ರಿಶೂಲವನ್ನು, ಇನ್ನೊಂದು ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿದಿರುತ್ತಾನೆ. ಕಪ್ಪು ಬಣ್ಣದ ನಾಯಿಯನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ. 

ಕಾಲ ಭೈರವನು 'ಕಾಲ' ಅಂದರೆ ಸಮಯವನ್ನು ಸೂಚಿಸುವವನಾಗಿದ್ದಾನೆ. ಅವನು ಸಮಯ ರಹಿತ ಕಾಲಘಟ್ಟವನ್ನು ಸೂಚಿಸುವವನಾಗಿದ್ದಾನೆ. ಭವಿಷ್ಯವನ್ನು ತಿಳಿದಿರುವವನೇ ಕಾಲ ಭೈರವ. ಸಮಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುತ್ತಾನೆ. ಕಾಲ ಕಾಲಕ್ಕೆ ಏನಾಗಬೇಕೆಂಬುದನ್ನು ಕಾಲ ಭೈರವನು ನಿರ್ಧರಿಸುತ್ತಾನೆ. 

ಕಾಲ ಭೈರವ ಸೃಷ್ಟಿಯ ಹಿಂದಿದೆ ಪೌರಾಣಿಕ ಕಥೆ:

ಒಮ್ಮೆ ಬ್ರಹ್ಮ ಮತ್ತು ವಿಷ್ಣು ನಮ್ಮಿಬ್ಬರಲ್ಲಿ ಯಾರು ಪ್ರಬಲರು ಎನ್ನುವ ಚರ್ಚೆಗೆ ಒಳಗಾಗುತ್ತಾರೆ. ಇವರಿಬ್ಬರ ನಡುವಿನ ದ್ವಂದ್ವತೆಯನ್ನು ನಿವಾರಿಸಲು ಶಿವನು ಬ್ರಹ್ಮಾಂಡವನ್ನು ಮೀರಿ ವಿಸ್ತರಿಸಿದ ಬೆಳಕಿನ ಬೃಹತ್‌ ಸ್ಥಂಭವಾಗಿ ಹೊರಹೊಮ್ಮಿದನು. ಈ ಕಂಬದ ಅಂತ್ಯವನ್ನು ಯಾರು ಮೊದಲು ನೋಡುತ್ತಾರೋ ಅವರೇ ಅತ್ಯಂತ ಪ್ರಭಾವಶಾಲಿಯೆಂದು ಶಿವನು ಷರತ್ತನ್ನು ನೀಡುತ್ತಾನೆ. 

ಭಗವಾನ್‌ ವಿಷ್ಣು ಕಾಡುಹಂದಿಯ ರೂಪವನ್ನು ಧರಿಸಿ ಸ್ಥಂಭದ ಕೆಳಭಾಗದ ಅಂತ್ಯವನ್ನು ಹುಡುಕಲು ಸ್ಥಂಭದ ಕೆಳಭಾಗದತ್ತ ಸಾಗುತ್ತಾನೆ. ಆದರೆ ವಿಷ್ಣುವಿಗೆ ಅಂತ್ಯವನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಇನ್ನೊಂದೆಡೆ ಬ್ರಹ್ಮನು ಹಂಸದ ರೂಪವನ್ನು ಧರಿಸಿ ಹೊಳೆಯುವ ಸ್ಥಂಭದ ಮೇಲ್ಭಾಗದ ಅಂತ್ಯವನ್ನು ನೋಡಲು ಹೊರಡುತ್ತಾನೆ. ಬ್ರಹ್ಮ ದೇವನಿಗೂ ಕೂಡ ಸ್ಥಂಭದ ಅಂತ್ಯವು ಸಿಗುವುದಿಲ್ಲ. 

ಬ್ರಹ್ಮನು ಒಂದು ಹೂವನ್ನು ಹಿಡಿದುಕೊಂಡು ನೀರಿನಿಂದ ಮೇಲಕ್ಕೆ ಬಂದು ನಾನು ಸ್ಥಂಭದ ಅಂತ್ಯವನ್ನು ನೊಡಿದ್ದೇನೆ. ನಾನೇ ಶ್ರೇಷ್ಠನೆಂದು ಹೇಳಿಕೊಳ್ಳಲು ಆರಂಭಿಸುತ್ತಾನೆ. ಬ್ರಹ್ಮನ ಸುಳ್ಳು ನುಡಿಗಳನ್ನು ಕೇಳಿದ ಶಿವನು ಕೋಪಗೊಂಡು ತನ್ನ ಮೂರನೇ ಕಣ್ಣಿನಿಂದ ಭೈರವನನ್ನು ಸೃಷ್ಟಿಸುತ್ತಾನೆ. ಈ ಉಗ್ರ ರೂಪದಲ್ಲಿದ್ದ ಭೈರವನು ಬ್ರಹ್ಮನ 5ನೇ ತಲೆಯನ್ನು ಕತ್ತರಿಸುತ್ತಾನೆ. ನಂತರ ಬ್ರಹ್ಮನು ತಾನು ಹೇಳಿದ ಸುಳ್ಳಿಗೆ ಪ್ರಾಯಶ್ಚಿತವನ್ನು ಕೋರಿದನು. 

ಬ್ರಹ್ಮನ ದೇಹದಿಂದ ಬೇರ್ಪಟ್ಟ ತಲೆಬುರುಡೆಯ ಭೈರವನ ಕೈಗೆ ಅಂಟಿಕೊಳ್ಳುತ್ತದೆ. ಇದೇ ಮುಂದೆ ಬ್ರಹ್ಮಹತ್ಯೆ ದೋಷಕ್ಕೆ ಮುಖ್ಯ ಕಾರಣವಾಗುತ್ತದೆ ಎನ್ನುವ ನಂಬಿಕೆಯಿದೆ. ಅವನ ಕೈಗೆ ಅಂಟಿಕೊಂಡ ತಲೆಯನ್ನು ತೆಗೆಯಲು ಭೈರವನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಲೆದಾಡುತ್ತಾನೆ. ಭೈರವನು ಬ್ರಹ್ಮನ ತಲೆಯನ್ನು ಕೈಯಲ್ಲಿಟ್ಟುಕೊಂಡು ಭಿಕ್ಷೆಗೆ ಹೋದಾಗ ಭಗವಾನ್‌ ವಿಷ್ಣು ಮತ್ತು ಆತನ ಪತ್ನಿ ಲಕ್ಷ್ಮಿ ದೇವಿಯು ಆಹಾರವನ್ನು ತಲೆಬುರುಡೆಯಲ್ಲಿ ತುಂಬಿಸಿದರು. ಆಗ ತಲೆಬುರುಡೆಯು ಭೈರವನ ಕೈಯಿಂದ ಕೆಲಗೆ ಬಿದ್ದು ಆತನಿಗಿದ್ದ ಬ್ರಹ್ಮಹತ್ಯಾ ದೋಷ ದೂರಾಗುತ್ತದೆ. ಈ ಕಾರಣಕ್ಕಾಗಿ ಭೈರವನನ್ನು ಶಿವನ ಅಲೆದಾಡುವ ರೂಪವೆಂದು ಪರಿಗಣಿಸಲಾಗುತ್ತದೆ. 

ಕಾಲ ಭೈರವ ಪೂಜೆಯ ಪ್ರಯೋಜನ:

1) ಕಾಲ ಭೈರವನನ್ನು ಆರಾಧಿಸುವುದರಿಂದ ಉತ್ತಮ ಸಮಯ ನಿರ್ವಹಣಾ ಕೌಶಲ್ಯ ಮತ್ತು ಪ್ರಯತ್ನಗಳಲ್ಲಿ ಸಮಯೋಚಿತ ಯಶಸ್ಸನ್ನು ಪಡೆಯಬಹುದು.

2) ಅವನು ನಿಮ್ಮ ಕೆಟ್ಟ ಸಮಯವನ್ನು ಉತ್ತಮ ಸಮಯಕ್ಕೆ ಬದಲಾಯಿಸಬಹುದು ಮತ್ತು ನಿಮ್ಮ ಹಣೆಬರಹವನ್ನು ಬದಲಾಯಿಸಬಹುದು. 

3) ಧರ್ಮಗ್ರಂಥಗಳ ಪ್ರಕಾರ, ಕಾಲ ಭೈರವನನ್ನು ಪೂಜಿಸುವುದರಿಂದ ಸಾಲಗಳು, ಕೆಟ್ಟ ಕರ್ಮಗಳು, ಸಾವಿನ ಭಯ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು.

4) ಭೈರವನನ್ನು ಶನಿಯ ಆಡಳಿತ ದೇವತೆ ಎಂದೂ ಪರಿಗಣಿಸಲಾಗುತ್ತದೆ. ಆದ್ದರಿಂದ, ಶನಿವಾರ ಭೈರವನಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ಕೆಟ್ಟ ಗ್ರಹದ ದುಷ್ಪರಿಣಾಮಗಳಿಂದ ಪರಿಹಾರ ಸಿಗುತ್ತದೆ.

5) ಚಿನ್ನ ಮತ್ತು ವಸ್ತು ಸಂಪತ್ತನ್ನು ಆಕರ್ಷಿಸಲು ನೀವು ಸ್ವರ್ಣಾಕರ್ಷಣ ಭೈರವನನ್ನು ಪೂಜಿಸಬಹುದು. 

6) ಭೈರವನ ಈ ಸರ್ವೋಚ್ಚ ರೂಪವನ್ನು ಆರಾಧಿಸುವುದರಿಂದ ಆರ್ಥಿಕ ಸಮಸ್ಯೆಗಳು ದೂರಾಗುವುದು, ಸಮೃದ್ಧಿ ಸಿಗುವುದು, ಲೌಕಿಕ ಸೌಕರ್ಯಗಳನ್ನು ಸಿಗುವುದು ಮತ್ತು ತೃಪ್ತಿಕರ ಮತ್ತು ಆನಂದದಾಯಕ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

7) ಸಮಯವನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಬರುತ್ತದೆ.

8) ಅದೃಷ್ಟ ಮತ್ತು ಒಟ್ಟಾರೆ ಸಮೃದ್ಧಿ ನಿಮ್ಮದಾಗುತ್ತದೆ. 

9) ಆರ್ಥಿಕ ಸ್ಥಿರತೆ ಪ್ರಾಪ್ತವಾಗುತ್ತದೆ.

10) ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವುದು. 

11) ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಾಧಿಸುವಿರಿ. 

ಕಾಲ ಭೈರವನನ್ನು ನೀವು ಆರಾಧಿಸುವುದರಿಂದ ಈ ಮೇಲಿನ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳುವಿರಿ. ಕಾಲ ಭೈರವನು ಮುಖ್ಯವಾಗಿ ನಮ್ಮ ಕಾಲವನ್ನು ಅಥವಾ ಸಮಯವನ್ನು ನಿಯಂತ್ರಿಸುವ ದೇವನಾಗಿದ್ದಾನೆ.🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು🕉️📱9482655011🙏🙏🙏

Post a Comment

0Comments

Post a Comment (0)