ವಿಷಯ: ಪಠ್ಯಪುಸ್ತಕ ಪರಿಷ್ಕರಣೆ ವಿಷಯದಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿರುವ ಕುತಂತ್ರ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ನೀಡುತ್ತಿರುವ ಹೇಳಿಕೆ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ ಇತಿಹಾಸವನ್ನು ತಿರುಚುವ ಈ ಕುತಂತ್ರಿಗಳು ನಿಜವಾದ ನಾಡದ್ರೋಹಿ ಗಳಾಗಿದ್ದಾರೆ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ರೋಹಿತ್ ಚಕ್ರತೀರ್ಥ ಒಬ್ಬ ಕನ್ನಡ ದ್ರೋಹಿ ನಾಡಗೀತೆಯನ್ನು ಅವಮಾನಿಸಿದ್ದ ವ್ಯಕ್ತಿಯನ್ನ ಪರಿಷ್ಕರಣ ಸಮಿತಿಯ ಮುಖ್ಯಸ್ಥರನ್ನಾಗಿ ಸರ್ಕಾರ ನೇಮಿಸುವ ಮೂಲಕ ಕನ್ನಡ ಭಾಷೆಗೆ ಕನ್ನಡ ಇತಿಹಾಸಕ್ಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ ಇತಿಹಾಸವನ್ನು ತಿರುಚುವವನನ್ನು ಮುಖ್ಯಸ್ಥರನ್ನಾಗಿ ಮಾಡಿ ಇತಿಹಾಸಕ್ಕೆ ಕಪ್ಪು ಮಸಿ ಬಳಿದಿದ್ದಾರೆ ಪಠ್ಯ ಪುಸ್ತಕ ಪರಿಷ್ಕರಣ ನಡೆಸುತ್ತಿರುವ ಕುತಂತ್ರಿಯನ್ನು ಮೊದಲು ಆ ಸ್ಥಾನದಿಂದ ವಜಾಗೊಳಿಸಬೇಕು
ಆರ್ ಎಸ್ಎಸ್ ನ ಮೂಲ ಸದಸ್ಯರಾದ ಇವರುಗಳು ಆರ್ ಎಸ್ ಎಸ್ ಬಗ್ಗೆ ಪ್ರೀತಿ ಇದ್ದರೆ ಆರ್ ಎಸ್ ಎಸ್ ಇತಿಹಾಸದ ಬಗ್ಗೆ ಪುಸ್ತಕ ಬರೆದು ಆರ್ ಎಸ್ ಎಸ್ ಸದಸ್ಯರಿಗೆ ವಿತರಿಸಲಿ ಆದರೆ ಆರ್ ಎಸ್ ಎಸ್ ನ ಹೆಗ್ಡೆವಾರ್ ವಿಷಯವನ್ನ ಪಠ್ಯಪುಸ್ತಕಗಳಲ್ಲಿ ಅಳವಡಿಸುವುದು ನಿಜವಾದ ದೇಶದ್ರೋಹದ ಕೃತ್ಯ ಇದು
ಬ್ರಿಟಿಷರ ವಿರುದ್ಧ ಹೋರಾಡಿದ ಭಗತ್ ಸಿಂಗ್ ಅವರ ಹೆಸರನ್ನು ತೆಗೆಯುವ ದುರಾಲೋಚನೆ ಇರುವ ಈ ವ್ಯಕ್ತಿಗಳು ಹೆಗ್ಡೆವಾರ್ ವಿಷಯಗಳನ್ನು ಸೇರಿಸಿ ದೇಶ ಪ್ರೇಮಿಗಳನ್ನು ಅವಮಾನಿಸುತ್ತಿದ್ದಾರೆ ಇದು ಅತ್ಯಂತ ಕೀಳುಮಟ್ಟದ ವಿಕೃತ ಮನಸ್ಸಿನ ವ್ಯಕ್ತಿಗಳು ಕೋಮುವಾದದ ವಿಷಬೀಜ ಬಿತ್ತುವ ಕೋಮು ವ್ಯಕ್ತಿಗಳು ಇಂಥವರು ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಇರುವುದು ಮಕ್ಕಳ ಭವಿಷ್ಯಕ್ಕೆ ಅತ್ಯಂತ ಮಾರಕವಾಗಿದೆ ನಾಡಗೀತೆಯನ್ನು ಅವಮಾನಿಸಿರುವ ನಾಡದ್ರೋಹಿಗೆ ಈ ಸ್ಥಾನ ಸೂಕ್ತವಲ್ಲ ಎಂಬುದನ್ನು ಸರ್ಕಾರ ಗಮನಿಸದೇ ಇರುವುದು ಸರ್ಕಾರವು ಸಹ ನಾಡಗೀತೆಯನ್ನ ಅವಮಾನಿಸಿದೆ ಎಂಬುದು ಇಂದು ಸಾಬೀತಾಗಿದೆ ನಾಡಿನ ಎಲ್ಲಾ ಸಾಹಿತಿಗಳು ಹಾಗೂ ಇತಿಹಾಸ ತಜ್ಞರು ಪ್ರೌಢ ಶಿಕ್ಷಣ ಸಚಿವ ಹಾಗೂ ರೋಹಿತ್ ಚಕ್ರತೀರ್ಥನ ವರ್ತನೆಯನ್ನ ಖಂಡಿಸಿದ್ದಾರೆ ಕೂಡಲೇ ಬಿ.ಸಿ ನಾಗೇಶ್ ನನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಿಂದ ರೋಹಿತ್ ಚಕ್ರತೀರ್ಥನನ್ನು ವಜಾಗೊಳಿಸಬೇಕೆಂದು ಪ್ರತಿಭಟನೆ ನಡೆಸಲಾಯಿತು. ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮನೋಹರ್ ಪ್ರಚಾರಸಮಿತಿ ಅಧ್ಯಕ್ಷರುಗಳಾದ ಜಿ. ಜನಾರ್ಧನ್ ಎ. ಆನಂದ್ ನವೀನ್ ಚಂದ್ರ. ವೆಂಕಟೇಶ್ ಪುಟ್ಟರಾಜು ಮಂಜುನಾಥ್ ಅನಿಲ್ ಸುಪ್ರಜ್ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು